Uttara kannada |ಬೆಳಂಬೆಳಗ್ಗೆ ಬ್ಯಾಂಕ್ ದರೋಡೆಗೆ ವಿಫಲ ಯತ್ನ |ಸೈರನ್ ಕೂಗಿದ್ದಕ್ಕೆ ಬೆಂಕಿ ಇಟ್ಟ ದರೋಡೆಕೋರರು.
Uttara kannada |ಬೆಳಂಬೆಳಗ್ಗೆ ಬ್ಯಾಂಕ್ ದರೋಡೆಗೆ ವಿಫಲ ಯತ್ನ |ಸೈರನ್ ಕೂಗಿದ್ದಕ್ಕೆ ಬೆಂಕಿ ಇಟ್ಟ ದರೋಡೆಕೋರರು
ಕಾರವಾರ:- ಬ್ಯಾಂಕ್ ನಲ್ಲಿ ದರೋಡೆಗೆ ಯತ್ನಿಸಿ ಸೈರನ್ ಕೂಗಿದ್ದರಿಂದ ಬ್ಯಾಂಕ್ ಗೆ ಬೆಂಕಿ ಹಾಕಿ ದರೋಡೆಕೋರರು ಪರಾರಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ (yallapur)ತಾಲೂಕಿನ ಉಮ್ಮಚಗಿಯಲ್ಲಿ ನಡೆದಿದೆ.
ಇಂದು ಬೆಳಗ್ಗೆ ದರೋಡೆಕೋರರು ಉಮ್ಮಚಗಿಯ ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್ ನ ಕಿಟಕಿ ಕೊರೆದು ಒಳಹೊಕ್ಕಿದ್ದಾರೆ. ಸೇಫ್ ಲಾಕರ್ ತುಂಡರಿಸಲು ಹೋದಾಗ ಸೈರನ್ ಆಗಿದ್ದು ಬೆದರಿದ ದರೋಡೆಕೋರರು ಬ್ಯಾಂಕ್ ಗೆ ಬೆಂಕಿ ಇಟ್ಟು ಪರಾರಿಯಾಗಿದ್ದಾರೆ .
ಬ್ಯಾಂಕ್ ನ ಕಟ್ಟಡ ಬೆಂಕಿಯಿಂದ ಆವೃತವಾಗುತಿದ್ದಂತೆ ಸ್ಥಳೀಯರು ಅಗ್ನಿಶಾಮಕ ದಳ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದು ಅಗ್ನಿಶಾಮಕ ದಳದವರು ಬೆಂಕಿ ನಂದಿಸಿದ್ದು ನಂತರ ಕಿಟಕಿ ಕೊರೆದು ದರೋಡೆಗೆ ಯತ್ನಿಸಿದ ಪ್ರಕರಣ ಬೆಳಕಿಗೆ ಬಂದಿದೆ.
Yallapur | ಆಸ್ತಿಗಾಗಿ ಮಗನಿಂದ ತಂದೆಗೆ ಕೊಡಲಿಯಿಂದ ಹೊಡೆದು ಕೊಲೆ .
ಸ್ಥಳಕ್ಕೆ ಶಿರಸಿ DYSP ಗೀತಾ ಪಾಟೀಲ್, ಯಲ್ಲಾಪುರ ಪಿ.ಐ. ರಮೇಶ್ ಹಾನಾಪುರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.