Uttara kannda: ಹೆದ್ದಾರಿಯಲ್ಲಿ ಕೆಮಿಕಲ್ ತುಂಬಿದ ಲಾರಿ ಪಲ್ಟಿ ತಪ್ಪದ ಬಾರಿ ಅನಾಹುತ
Uttara kannda: ಹೆದ್ದಾರಿಯಲ್ಲಿ ಕೆಮಿಕಲ್ ತುಂಬಿದ ಲಾರಿ ಪಲ್ಟಿ ತಪ್ಪದ ಬಾರಿ ಅನಾಹುತ.

ಕಾರವಾರ:- ಪೂಣೆಯಿಂದ ಕೇರಳಕ್ಕೆ ರಾಸಾಯನಿಕ ಸಾಗಿಸುತ್ತಿದ್ದ ಟ್ಯಾಂಕರ್ ಭಟ್ಕಳದ (Bhatkal) ಬಸ್ತಿಯಲ್ಲಿ ಭಾನುವಾರ ಪಲ್ಟಿಯಾಗಿದೆ. ಪರಿಣಾಮ ಹೆದ್ದಾರಿ ತುಂಬ ರಾಸಾಯನಿಕ ಚೆಲ್ಲಿದ್ದು, ಅಗ್ನಿಶಾಮಕ ಸಿಬ್ಬಂದಿ ಮುನ್ನಚ್ಚರಿಕೆಯಿಂದ ದೊಡ್ಡ ಪ್ರಮಾಣದ ಅನಾಹುತ ತಪ್ಪಿದೆ.
ಇದನ್ನೂ ಓದಿ:-Uttara kannda ಮೀಟರ್ ಬಡ್ಡಿ ಕಿರುಕುಳ ಮುಂಡಗೋಡಿನಲ್ಲಿ 18 ಜನರ ಬಂಧನ
ಹೊನ್ನಾವರ ಕಡೆಯಿಂದ ಮಂಗಳೂರು ಕಡೆ ಟ್ಯಾಂಕರ್ ಚಲಿಸುತ್ತಿತ್ತು. ಬಸ್ತಿ ಬಳಿ ವಾಹನ ಚಾಲಕನ ನಿಯಂತ್ರಣ ತಪ್ಪಿತು. ಪರಿಣಾಮ ಹೆದ್ದಾರಿ ಅಂಚಿನಲ್ಲಿ ಟ್ಯಾಂಕರ್ ಪಲ್ಟಿಯಾಯಿತು. ಅಪಘಾತದಲ್ಲಿ ಲಾರಿ ಚಾಲಕ ಹಾಗೂ ಕ್ಲಿನರ್'ಗೆ ಸಣ್ಣ ಪುಟ್ಟ ಗಾಯಗಳಾಗಿವೆ.

ಕ್ಯಾಮಿಕಲ್ ತುಂಬಿದ ಲಾರಿ ಅಪಘಾತ ನೋಡಿದ ಜನ ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಕರೆ ಮಾಡಿದರು. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಯಾವುದೆ ತೊಂದರೆಯಾಗದಂತೆ ಫೋಮ್ ಸಿಂಪಡಿಸಿದರು. ಈ ವೇಳೆ ಪ್ರಭಾರ ಅಗ್ನಿಶಾಮಕ ಠಾಣಾಧಿಕಾರಿ ಮೋಹನ್ ಶೆಟ್ಟಿ, ಸಿಬ್ಬಂದಿ ಗಜಾನನ ದೇವಾಡಿಗ, ಸುಧಾಕರ್ ದೇವಾಡಿಗ, ಶಿವಪ್ರಸಾದ್ ನಾಯ್ಕ್, ನಾರಾಯಣ ಪಟಗಾರ ಅಪಾಯ ಆಗದಂತೆ ಕಟ್ಟೆಚ್ಚರವಹಿಸಿದ್ದರು.