Uttara kannada: ಕಾಳಿ ಹುಲಿ ಸಂರಕ್ಷಿತ ಅರಣ್ಯವಾಸಿಗಳ ಸ್ಥಳಾಂತರದಲ್ಲಿ 152 ಕೋಟಿ ದುರ್ಬಳಕೆ-ತನಿಖೆಗೆ ಕೇಂದ್ರದಿಂದ ಆದೇಶ
Uttara kannada: ಕಾಳಿ ಹುಲಿ ಸಂರಕ್ಷಿತ ಅರಣ್ಯವಾಸಿಗಳ ಸ್ಥಳಾಂತರದಲ್ಲಿ 152 ಕೋಟಿ ದುರ್ಬಳಕೆ-ತನಿಖೆಗೆ ಕೇಂದ್ರದಿಂದ ಆದೇಶ
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಅಣಶಿ ಭಾಗದಲ್ಲಿರುವ ಕಾಳಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಿಂದ ಅಲ್ಲಿ ವಾಸಿಸುತ್ತಿರುವ ಕುಟುಂಬಗಳು ಹಾಗೂ ಅರಣ್ಯ ನಿವಾಸಿಗಳನ್ನು ಸ್ಥಳಾಂತರಿಸುವ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಬ್ರಷ್ಟಾಚಾರ ನಡೆಸಲಾಗಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
152 ಕೋಟಿ ವೆಚ್ಚದ ಈ ಯೋಜನೆಗೆ ಸಂಬಂಧಿಸಿದಂತೆ ನಿಧಿ ದುರುಪಯೋಗ, ಕಾನೂನು ಉಲ್ಲಂಘನೆ ಹಾಗೂ ಅಕ್ರಮ ಸ್ಥಳಾಂತರ ನಡೆದಿವೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ, ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ತನಿಖೆಗೆ ಆದೇಶ ನೀಡಿದೆ.
ಈ ಯೋಜನೆಯಲ್ಲಿ ಭಾರಿ ಪ್ರಮಾಣದಲ್ಲಿ ಹಣದ ದುರುಪಯೋಗ ಪಡಿಸಿಕೊಂಡು 'ಗೋಲ್‌ಮಾಲ್' ನಡೆಸಲಾಗಿದೆ ಎಂದು ಸಾಮಾಜಿಕ ಹೋರಾಟಗಾರರಾದ ವಿ.ಎಂ. ಪ್ರಮೋದ ಎಂಬುವವರು ಸಲ್ಲಿಸಿದ ದೂರು ಆಧಾರವಾಗಿ ಕೇಂದ್ರ ಸಚಿವಾಲಯವು ಕರ್ನಾಟಕದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯವರಿಗೆ (ಪಿಸಿಸಿಎಫ್) ತನಿಖೆ ನಡೆಸುವಂತೆ ಸೂಚಿಸಿದೆ.
ದೂರನ್ನು ಕರ್ನಾಟಕದ ಪೂರಕ ಅರಣ್ಯೋತ್ಪಾದನಾ ನಿಧಿ ನಿರ್ವಹಣಾ ಮತ್ತು ಯೋಜನಾ ಪ್ರಾಧಿಕಾರದ (ಕ್ಯಾಂಪಾ)ಮುಖ್ಯ ಕಾರ್ಯನಿರ್ವಾಹಕರಿಗೂ ಕಳುಹಿಸಿ, ತುರ್ತು ಆದ್ಯತೆಯ ಆಧಾರದ ಮೇಲೆ ವರದಿ ಸಲ್ಲಿಸಲು ಆದೇಶಿಸಲಾಗಿದೆ.
Dandeli:ದಾಂಡೇಲಿ ಜಲಸಾಹಸ ಕ್ರೀಡೆಗಳಿಗೆ ಅನುಮತಿ ನೀಡಿದ ಜಿಲ್ಲಾಡಳಿತ-ಜಿಗುರಿದ ಪ್ರವಾಸೋಧ್ಯಮ
ಪ್ರಮೋದ ಅವರು ತಮ್ಮ ದೂರಿನಲ್ಲಿ ಕ್ಯಾಂಪ ನಿಧಿಯ ದುರುಪಯೋಗ, ಆರಣ್ಯ ಹಕ್ಕು ಕಾಯಿದೆ (ಎಫ್‌ಆರ್‌ಎ) ಹಾಗೂ ಸಿಎಫ್ ನಿಯಮಾವಳಿ 2018 ಉಲ್ಲಂಘನೆಯಾದ ಬಗ್ಗೆ ಆರೋಪ ಮಾಡಿದ್ದರು.
ಅರಣ್ಯ ನಿವಾಸಿಗಳನ್ನು ಸ್ಥಳಾಂತರಿಸುವ ನೆಪದಲ್ಲಿ ಆಕ್ರಮ ಸ್ಥಳಾಂತರಗಳನ್ನು ನಡೆಸಿದ್ದರ ಬಗ್ಗೆ ಪ್ರಮೋದ ಅವರು ದೂರಿನಲ್ಲಿ ಉಲ್ಲೇಖಿಸಿದ್ದರು. ಅಲ್ಲದೇ ಗ್ರಾಮ ಸಭೆಯ ಕಡ್ಡಾಯ ಅನುಮೋದನೆ ಪಡೆಯದೇ ಜೋಯಿಡಾ ಭಾಗದ ಅರಣ್ಯವಾಸಿಗಳನ್ನು ಸ್ಥಳಾಂತರ ಮಾಡಿರುವ ಬಗ್ಗೆ, ಅರಣ್ಯ ಹಾಗೂ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಕಬಳಿಸಿರುವವರಿಗೂ ಸ್ಥಳಾಂತರ ಸೌಲಭ್ಯ ನೀಡಿರುವ ಬಗ್ಗೆ, ಸಾಮಾಜಿಕ ಪರಿಣಾಮ ಅಧ್ಯಯನ ನಡೆಸದೇ ಸ್ಥಳಾಂತರ ಪ್ರಕ್ರಿಯೆ ಮುಂದುವರೆಸಿದ ಬಗ್ಗೆ, ಈ ಯೋಜನೆಯ ಫಲಾನುಭವಿಗಳನ್ನು ಗುರುತಿಸುವಾಗಲೂ ಅವ್ಯವಹಾರ ಹಾಗೂ ಪಾರದರ್ಶಕತೆ ಕೊರತೆ, ಕುಟುಂಬಗಳು ಸ್ವಯಂಸಮ್ಮತಿಯೊಂದಿಗೆ ಸ್ಥಳಾಂತರಗೊಂಡಿವೆಯೇ ಎಂಬುದರ ಕುರಿತು ಸ್ವತಂತ್ರ ಪರಿಶೀಲನೆಯ ಕೊರತೆ ಹಾಗೂ ಬಲವಂತವಾಗಿ ಈ ಕುಟುಂಬಗಳನ್ನು ಒಕ್ಕಲೆಬ್ಬಿಸಿದ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
ಪ್ರಮೋದ ಅವರ ಪ್ರಕಾರ, ಈ ಎಲ್ಲಾ ಕ್ರಮಗಳು ಕೇವಲ ಎಫ್‌ಆರ್‌ಎ ಯ ಉಲ್ಲಂಘನೆ ಮಾತ್ರವಲ್ಲದೆ, ವನ್ಯಜೀವಿ ಸಂರಕ್ಷಣಾ ಕಾಯಿದೆ 1972 ಹಾಗೂ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ (ಎನ್‌ಟಿಸಿಎ) ಮಾರ್ಗಸೂಚಿಗಳ ಉಲ್ಲಂಘನೆಯೂ ಆಗಿದೆ. ಜನರನ್ನು ಒಕ್ಕಲೆಬ್ಬಿಸಿ, ಅರಣ್ಯವಾಸಿಗಳನ್ನು ಸ್ಥಳಾಂತರಗೊಳಿಸಿದ ಪ್ರದೇಶಗಳಲ್ಲಿ ಟ್ರೆಕ್ಕಿಂಗ್ ಮಾರ್ಗಗಳನ್ನು ಅಭಿವೃದ್ಧಿಪಡಿಸುವ ಮೂಲಕ ಪ್ರವಾಸೋದ್ಯಮವನ್ನು ಉತ್ತೇಜಿಸಲು ಮುಂದಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ. ಇದು ಅರಣ್ಯ ಸಂರಕ್ಷಣೆಯ ಹೆಸರಿನಲ್ಲಿ ವಾಣಿಜೀಕರಣಕ್ಕೆ ದಾರಿ ಮಾಡಿಕೊಡುವುದು ಎಂದು ಪ್ರಮೋದ ಆರೋಪಿಸಿದ್ದಾರೆ.
ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ದೂರು ಸ್ವೀಕರಿಸಿರುವುದನ್ನು ದೃಢಪಡಿಸಿದೆ.

ದೂರುದಾರ ಪ್ರಮೋದ ಅವರು ಕೂಡ 'ತಕ್ಷಣ ಕ್ಯಾಂಪಾ ನಿಧಿಯ ವಿತರಣೆ ನಿಲ್ಲಿಸಬೇಕು ಎಂದು ಆಗ್ರಹಿಸಿ ಕ್ಯಾಂಪಾ, ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ, ಅದಿವಾಸಿ ವ್ಯವಹಾರಗಳ ಸಚಿವಾಲಯ, ನ್ಯಾಯಾಂಗ ಪ್ರತಿನಿಧಿಗಳು ಸೇರಿರುವ ಸ್ವತಂತ್ರ ಹಾಗೂ ಉನ್ನತ ಮಟ್ಟದ ತನಿಖಾ ಸಮಿತಿ ರಚನೆಗೆ ಒತ್ತಾಯಿಸಿದ್ದಾರೆ.
ಆರೋಪ ಏನು?
ಈಕಾಳಿ ಹುಲಿ ಸಂರಕ್ಷಿತ ಅರಣ್ಯವಾಸಿಗಳ ಸ್ಥಳಾಂತರ ಯೋಜನೆಯಲ್ಲಿ ಕ್ಯಾಂಪಾ ನಿಧಿಗಳ ದುರುಪಯೋಗ ಮಾಡಿಕೊಳ್ಳಲಾಗಿದ್ದು ,ಅರಣ್ಯ ಹಕ್ಕು ಕಾಯಿದೆ (FRA) ಹಾಗೂ CAFನಿಯಮಾವಳಿ, 2018 ಉಲ್ಲಂಘನೆ ಮಾಡಿದೆ.ಅಕ್ರಮ ಸ್ಥಳಾಂತರಗಳು, ಗ್ರಾಮ ಸಭೆಯ ಕಡ್ಡಾಯ ಅನುಮೋದನೆ ಪಡೆಯದೇ ಸ್ಥಳಾಂತರ,ಅರಣ್ಯ ಹಾಗೂ ಸರ್ಕಾರಿ ಭೂಮಿಯನ್ನು ಅಕ್ರಮವಾಗಿಕಬಳಿಸಿರುವವರಿಗೂ ಸ್ಥಳಾಂತರ ಸೌಲಭ್ಯ ನೀಡಿರುವುದು,ಸಾಮಾಜಿಕ ಪರಿಣಾಮ ಅಧ್ಯಯನ ನಡೆಸದೇ ಸ್ಥಳಾಂತರ ಪ್ರಕ್ರಿಯೆ ಮುಂದುವರೆಸಿರುವುದು,ಲಾಭಪಡೆಯುವವರ ಗುರುತಿಸುವಿಕೆಯಲ್ಲಿ ಪಾರದರ್ಶಕತೆ ಕೊರತೆ,ಕುಟುಂಬಗಳು ಸ್ವಯಂಸಮ್ಮತಿಯೊಂದಿಗೆ ಸ್ವತಂತ್ರ ಪರಿಶೀಲನೆಯ ಕೊರತೆ,ಕಾನೂನು ಉಲ್ಲಂಘನೆಗಳು ಆಗಿರುಉಒಫ
(ಮೂಲ ವರದಿ- ಕೊಂಕಣವಾಹಿನಿ)