Uttara kannada| ಕುಮಟಾ ಶಾಸಕ ದಿನಕರ್ ಶಟ್ಟಿ ಶಾಸಕತ್ವ ಎತ್ತಿ ಹಿಡಿದ ಹೈಕೋರ್ಟ |ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅತೀ ಕಡಿಮೆ ಅಂತರದಲ್ಲಿ ಗೆದ್ದವರು ಯಾರು ಗೊತ್ತಾ?
Uttara kannada| ಕುಮಟಾ ಶಾಸಕ ದಿನಕರ್ ಶಟ್ಟಿ ಶಾಸಕತ್ವ ಎತ್ತಿ ಹಿಡಿದ ಹೈಕೋರ್ಟ |ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅತೀ ಕಡಿಮೆ ಅಂತರದಲ್ಲಿ ಗೆದ್ದವರು ಯಾರು ಗೊತ್ತಾ?
ಕಾರವಾರ:- ಕುಮಟಾ ಬಿಜೆಪಿ ಶಾಸಕ ದಿನಕರ್ ಶಟ್ಟಿ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾ ಗೊಳಿಸಿದ ಧಾರವಾಡ ಹೈಕೋರ್ಟ್ ತೀರ್ಪು ನೀಡಿದೆ .
2023 ರ ವಿಧಾನಸಭೆ ಚುನಾವಣೆಯಲ್ಲಿ 673 ಮತಗಳ ಅಲ್ಪ ಮತದಿಂದ ಗೆಲುವು ಕಂಡಿದ್ದ ಬಿಜೆಪಿ ಶಾಸಕ ದಿನಕರ್ ಶಟ್ಟಿಯ ಆಯ್ಕೆ ಪ್ರಶ್ನಿಸಿ ಅಲ್ಪ ಮತದಲ್ಲಿ ಪರಾಭವ ಗೊಂಡಿದ್ದ ಜೆಡಿಎಸ್ ನ ಸೂರಜ್ ಸೂನಿ ಎರಡು ವರ್ಷದ ಹಿಂದೆ ಕೋರ್ಟ ಮೆಟ್ಟಿಲೇರಿದ್ದರು.
ದೂರಿನ ವಿಚಾರಣೆ ನಡೆಸಿದ ಧಾರವಾಡ ಹೈಕೋರ್ಟ್ ಸೂರಜ್ ಸೋನಿ ರವರ ಅರ್ಜಿಯನ್ನು ವಜಾ ಮಾಡಿ ಆದೇಶಿಸಿದೆ.
ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ದಿನಕರ್ ಶಟ್ಟಿ 59966 ಮತ ಗಳಿಸಿದ್ದರು.
ಜೆಡಿಎಸ್ ನ ಸೂರಜ್ ನಾಯ್ಕ ಸೋನಿ ರವರು 59293 ಮತ ಗಳಿಸಿದ್ದರು .673 ಮತದಲ್ಲಿ ಬಿಜೆಪಿ ದಿನಕರ್ ಶಟ್ಟಿ ಗೆಲವು ಕಂಡಿದ್ದರು.ಈ ಗೆಲವನ್ನು ಎತ್ತಿ ಹಿಡಿದ ಧಾರವಾಡ ಹೈಕೋರ್ಟ್ ಈ ಆದೇಶ ಮಾಡಿದೆ.
ಕಳೆದಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಯಾರು ಅಲ್ಪ ಮತದಿಂದ ಗೆದ್ದಿದ್ದರು ವಿವರ ಇಲ್ಲಿದೆ.
Karnataka| ಹವಾಮಾನ ಇಲಾಖೆಯಿಂದ ಮಳೆ ಎಚ್ಚರಿಕೆ |ಎಷ್ಟು ದಿನ ಮಳೆ ಗೊತ್ತಾ?
2023ರ ವಿಧಾನಸಭೆ ಚುನಾವಣೆಯಲ್ಲಿ 10 ಸಾವಿರಕ್ಕಿಂತ ಕಡಿಮೆ ಅಂತರದಲ್ಲಿ ವಿಜಯಗಳಿಸಿದವರ ವಿವರ
ಕ್ಷೇತ್ರ- ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರ
* ಜಯಗಳಿಸಿದ ಶಾಸಕರು ಹೆಸರು -ಭೀಮಣ್ಣ ನಾಯ್ಕ.(ಕಾಂಗ್ರೆಸ್)
* ಜಯಗಳಿಸಿದ ಅಭ್ಯರ್ಥಿ ಪಡೆದ ಮತಗಳ ಸಂಖ್ಯೆ - 76,887
* ಪರಾಜಿತ ಅಭ್ಯರ್ಥಿ ಹೆಸರು- ವಿಶ್ವೇಶ್ವರ ಹೆಗಡೆ ಕಾಗೇರಿ
* ಪರಾಜಿತ ಅಭ್ಯರ್ಥಿಯ ಪಕ್ಷ- ಬಿಜೆಪಿ
* ಪರಾಜಿತ ಅಭ್ಯರ್ಥಿ ಪಡೆದ ಮತಗಳ ಸಂಖ್ಯೆ - 68,175
* ಗೆಲುವಿನ ಅಂತರ -8712
ಕ್ಷೇತ್ರ- ಕಾರವಾರ -ಅಂಕೋಲ ವಿಧಾನಸಭಾ ಕ್ಷೇತ್ರ.
* ಜಯಗಳಿಸಿದ ಶಾಸಕರು ಹೆಸರು -ಸತೀಶ್ ಸೈಲ್. (ಕಾಂಗ್ರೆಸ್ )
* ಜಯಗಳಿಸಿದ ಅಭ್ಯರ್ಥಿ ಪಡೆದ ಮತಗಳ ಸಂಖ್ಯೆ - 77,445
* ಪರಾಜಿತ ಅಭ್ಯರ್ಥಿ ಹೆಸರು- ರೂಪಾಲಿ ನಾಯ್ಕ್,
* ಪರಾಜಿತ ಅಭ್ಯರ್ಥಿಯ ಪಕ್ಷ- ಬಿಜೆಪಿ.
* ಪರಾಜಿತ ಅಭ್ಯರ್ಥಿ ಪಡೆದ ಮತಗಳ ಸಂಖ್ಯೆ - 75,307
* ಗೆಲುವಿನ ಅಂತರ -2138
ಕ್ಷೇತ್ರ- ಯಲ್ಲಾಪುರ ವಿಧಾನಸಭಾ ಕ್ಷೇತ್ರ.
* ಜಯಗಳಿಸಿದ ಶಾಸಕರು ಹೆಸರು -ಶಿವರಾಮ ಹೆಬ್ಬಾರ. (ಬಿಜೆಪಿ)
* ಜಯಗಳಿಸಿದ ಅಭ್ಯರ್ಥಿ ಪಡೆದ ಮತಗಳ ಸಂಖ್ಯೆ - 74,699
* ಪರಾಜಿತ ಅಭ್ಯರ್ಥಿ ಹೆಸರು-ವಿ .ಎಸ್ ಪಾಟೀಲ್.
* ಪರಾಜಿತ ಅಭ್ಯರ್ಥಿಯ ಪಕ್ಷ- ಕಾಂಗ್ರೆಸ್
* ಪರಾಜಿತ ಅಭ್ಯರ್ಥಿ ಪಡೆದ ಮತಗಳ ಸಂಖ್ಯೆ - 70,695
* ಗೆಲುವಿನ ಅಂತರ -4004
ಕ್ಷೇತ್ರ- ಹಳಿಯಾಳ ವಿಧಾನಸಭಾ ಕ್ಷೇತ್ರ.
* ಜಯಗಳಿಸಿದ ಶಾಸಕರು ಹೆಸರು -ಆರ್ .ವಿ ದೇಶಪಾಂಡೆ.( ಕಾಂಗ್ರೆಸ್)
* ಜಯಗಳಿಸಿದ ಅಭ್ಯರ್ಥಿ ಪಡೆದ ಮತಗಳ ಸಂಖ್ಯೆ - 57,240
* ಪರಾಜಿತ ಅಭ್ಯರ್ಥಿ ಹೆಸರು- ಸುನಿಲ್ ಹೆಗಡೆ.
* ಪರಾಜಿತ ಅಭ್ಯರ್ಥಿಯ ಪಕ್ಷ- ಬಿಜೆಪಿ
* ಪರಾಜಿತ ಅಭ್ಯರ್ಥಿ ಪಡೆದ ಮತಗಳ ಸಂಖ್ಯೆ - 53,617
* ಗೆಲುವಿನ ಅಂತರ -3623
ಕ್ಷೇತ್ರ- ಕುಮಟಾ ವಿಧಾನಸಭಾ ಕ್ಷೇತ್ರ.
* ಜಯಗಳಿಸಿದ ಶಾಸಕರು ಹೆಸರು -ದಿನಕರ್ ಶೆಟ್ಟಿ. (ಬಿಜೆಪಿ)
* ಜಯಗಳಿಸಿದ ಅಭ್ಯರ್ಥಿ ಪಡೆದ ಮತಗಳ ಸಂಖ್ಯೆ - 59966
* ಪರಾಜಿತ ಅಭ್ಯರ್ಥಿ ಹೆಸರು- ಸೂರಜ್ ನಾಯ್ಕ ಸೋನಿ.
* ಪರಾಜಿತ ಅಭ್ಯರ್ಥಿಯ ಪಕ್ಷ- ಜೆಡಿಎಸ್
* ಪರಾಜಿತ ಅಭ್ಯರ್ಥಿ ಪಡೆದ ಮತಗಳ ಸಂಖ್ಯೆ - 59,293
* ಗೆಲುವಿನ ಅಂತರ -673