Uttara kannada| ಎಸಿ, ಮತ್ತು ತಹಸೀಲ್ದಾರ್ ಗಳ ವಿರುದ್ಧ ಲೋಕಾಯುಕ್ತರಿಂದ ಸ್ವಯಂ ಪ್ರೇರಿತ ದೂರು ದಾಖಲು|ಕಾರಣವೇನು ಗೊತ್ತಾ?
Uttara kannada| ಎಸಿ, ಮತ್ತು ತಹಸೀಲ್ದಾರ್ ಗಳ ವಿರುದ್ಧ ಲೋಕಾಯುಕ್ತರಿಂದ ಸ್ವಯಂ ಪ್ರೇರಿತ ದೂರು ದಾಖಲು|ಕಾರಣವೇನು ಗೊತ್ತಾ?
ಕಾರವಾರ:- ಉತ್ತರ ಕನ್ನಡ (uttara Kannada) ಜಿಲ್ಲೆಯಲ್ಲಿ ನಿವೃತ್ತ ಯೋಧರಿಗೆ, ಹುತಾತ್ಮ ಯೋಧರ ಅವಲಂಭಿತರಿಗೆ, ಸ್ವಾತಂತ್ರ್ಯ ಹೋರಾಟಗಾರರಿಗೆ ಮತ್ತು ಅವರ ಅವಲಂಭಿತರಿಗೆ ಕೆಲವು ಸೌಲಭ್ಯಗಳನ್ನು ಕಲ್ಪಿಸಲು ಕಾನೂನು ಮಾಡಿದ್ದರೂ ಕೂಡಾ ಜಮೀನು ಹಾಗೂ ನಿವೇಶನಗಳನ್ನು ನಿಗದಿತ ಸಮಯದಲ್ಲಿ ನೀಡದೇ ವರ್ಷಾನುಗಟ್ಟಲೇ ಸತಾಯಿಸಿ ಅನಾವಶ್ಯಕ ತೊಂದರೆಯನ್ನುಂಟು ಮಾಡಿರುವ ಜಿಲ್ಲೆಯ ಸಹಾಯಕ ಕಮಿಷನರ್ ಗಳು ಮತ್ತು ತಹಶೀಲ್ದಾರ್ ಗಳ ವಿರುದ್ಧ ಲೋಕಾಯುಕ್ತರಿಂದ ಸ್ವಯಂ ಪ್ರೇರಿತ ದೂರು ದಾಖಲಾಗಿದೆ.
ಜಿಲ್ಲೆಯ ಕಾರವಾರ, ಶಿರಸಿ, ಕುಮಟಾ, ಭಟ್ಕಳ ತಾಲೂಕಿನ ಉಪವಿಭಾಗಾಧಿಕಾರಿಗಳು, ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ, ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ, ಹಳಿಯಾಳ, ಜೋಯಿಡಾ, ದಾಂಡೇಲಿ ತಾಲೂಕಿನ ತಹಶೀಲ್ದಾರರ ವಿರುದ್ಧ ಲೋಕಾಯುಕ್ತ ಕೇಂದ್ರ ಕಛೇರಿ ಬೆಂಗಳೂರಿನಲ್ಲಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಕರ್ನಾಟಕ ಲೋಕಾಯುಕ್ತ ಕಾರವಾರದ ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.