Uttara kannada| ಜಾತಿ ವಿಷಯದಲ್ಲಿ ಹುದ್ದೆಗಾಗಿ ಶಿಕ್ಷಕರ ಬೀದಿ ಜಗಳ|ಬೀದಿಗಿಳಿದ ಪೋಷಕರಿಗೂ ತಂತು ಧರ್ಮ ಸಂಕಟ!
Uttara kannada| ಜಾತಿ ವಿಷಯದಲ್ಲಿ ಹುದ್ದೆಗಾಗಿ ಶಿಕ್ಷಕರ ಬೀದಿ ಜಗಳ|ಬೀದಿಗಿಳಿದ ಪೋಷಕರಿಗೂ ತಂತು ಧರ್ಮ ಸಂಕಟ!
Uttara kannada/Mumdgodu 10 November 25:- ಮಕ್ಕಳಿಗೆ ಮಾದರಿಯಾಗಬೇಕಾಗಿರಬೇಕಾದ ಶಿಕ್ಷರೇ ಮುಖ್ಯ ಶಿಕ್ಷಕರ ಹುದ್ದೆಗಾಗಿ ಬೀದಿ ರಂಪಾಟ ಮಾಡಿಕೊಂಡ ದೂರು ,ಪ್ರತಿದೂರು ನೀಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ(uttara Kannada) ಮುಂಡಗೋಡು ತಾಲೂಕಿನ ಚಿಗಳ್ಳಿ ಪ್ರೌಢಶಾಲೆ ಯಲ್ಲಿ ನಡೆದಿದೆ.
ಸಹ ಶಿಕ್ಷಕ ದಾಸಪ್ಪ ಎಂಬುವವರ ಕಿರುಕುಳಕ್ಕೆ ಬೇಸತ್ತ ಮುಖ್ಯ ಶಿಕ್ಷಕಿಯೂ ಸೇರಿ ಮೂರು ಜನ ಶಿಕ್ಷಕಿಯರು ಬೇರೆಡೆ ವರ್ಗಾವಣೆ ಮಾಡುವಂತೆ ಶಿರಸಿ (sirsi) ಡಿ.ಡಿಪಿ.ಐ ಗೆ ಮನವಿ ಸಲ್ಲಿಸಿದರೇ , ಶಿಕ್ಷಕ ದಾಸಪ್ಪ ಎಸ್.ಡಿ .ಎಮ್.ಸಿ ಅಧ್ಯಕ್ಷ ಸೇರಿ ಮೂರು ಜನ ಶಿಕ್ಷಕಿಯರ ಮೇಲೆ ಮುಂಡಗೋಡು ಠಾಣೆಯಲ್ಲಿ ಜಾತಿ ನಿಂದನೆಯ ಪ್ರಕರಣ ದಾಖಲಿಸಿದ್ದಾರೆ.
Karnataka |ಶಾರಾವತಿ ಪಂಪ್ ಸ್ಟೋರೇಜ್ ಯೋಜನೆಗೆ ಪರಿಸರ ಸಚಿವಾಲಯದಿಂದ ಬ್ರೇಕ್ !
ಇನ್ನು ಶಿಕ್ಷಕರ ಜಗಳ ಪ್ರೌಢಶಾಲೆಯ ಮಕ್ಕಳ ಮೇಲೆ ಪರಿಣಾಮ ಬೀರುತ್ತಿರುವುದರಿಂದ ಪೋಷಕರು ಶಾಲೆಯ ಮುಂದೆ ಪ್ರತಿಭಟನೆ ನಡೆಸಿ ನಂತರ ಶಿಕ್ಷಣಾಧಿಕಾರಿಗೆ ಶಿಕ್ಷಕನನ್ನು ವಜಾ ಮಾಡುವಂತೆ ಮನವಿ ಸಲ್ಲಿಸಿದ್ದಾರೆ.
ಈ ಹಿಂದೆ ಸಹ ಶಿಕ್ಷಕ ದಾಸಪ್ಪನವರನ್ನು ಚಿಗಳ್ಳಿ ಪ್ರೌಢಶಾಲೆಯ ಪ್ರಭಾರ ಮುಖ್ಯಶಿಕ್ಷಕನಾಗಿ ನೇಮಕ ಮಾಡಲಾಗಿತ್ತು.ಆದರೇ ಕೊಟ್ಟ ಹುದ್ದೆಯನ್ನು ಸಮರ್ಕವಾಗಿ ನಿರ್ವಹಣೆ ಮಾಡದ ಹಿನ್ನಲೆಯಲ್ಲಿ ಅದೇ ಶಾಲೆಯ ವೃತ್ತಿಯಲ್ಲಿ ಹಿರಿಯರಾದ ಯಲ್ಲುಬಾಯಿ ಪಾಟೀಲ್ ಗೆ ಮುಖ್ಯ ಶಿಕ್ಷಕರ ಹುದ್ದೆ ನೀಡಲಾಗಿತ್ತು. ಇದರಿಂದ ಸಿಟ್ಟಿಗೆದ್ದ ಶಿಕ್ಷಕ ದಾಸಪ್ಪನವರು ಮುಖ್ಯ ಶಿಕ್ಷಕಿ ಜೊತೆ ಪ್ರತಿ ದಿನ ಮಕ್ಕಳ ಮುಂದೆಯೇ ಗಲಾಟೆ ಮಾಡುತಿದ್ದರು .ಇದಲ್ಲದೇ ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷ ಸಂತೋಷ್ ಆಲದಕಟ್ಟಿ,ಮುಖ್ಯ ಶಿಕ್ಷಕಿ ಯಲ್ಲುಬಾಯಿ ಪಾಟೀಲ್ ,ಸಹ ಶಿಕ್ಷಕೀಯರಾದ ನಯನಾ ಬಂಡಾರಿ,ದಿವ್ಯಾ ಗೋಪಾಲ ರವರ ಜೊತೆಗೂ ಗಲಾಟೆ ಮಾಡಿ ಮುಂಡಗೋಡು ಠಾಣೆಯಲ್ಲಿ ಜಾತಿ ನಿಂದನೆಯ ಪ್ರಕರಣ ದಾಖಲಿಸಿದ್ದಾರೆ.
ಇನ್ನು ಪ್ರತಿ ದಿನ ಶಾಲೆಯಲ್ಲಿ ಮಕ್ಕಳ ಮುಂದೆಯೇ ದಾಸಪ್ಪ ಗಲಾಟೆ ಮಾಡುವುದರಿಂದ ಬೇಸತ್ತ ಮುಖ್ಯ ಶಿಕ್ಷಕಿ ,ಸಹ ಶಿಕ್ಷಕಿಯರು ತಮ್ಮನ್ನು ಬೇರೆಡೆ ವರ್ಗಾವಣೆ ಮಾಡುವಂತೆ ಶಿರಸಿ ಶೈಕ್ಷಣಿಕ ಜಿಲ್ಲೆಯ ಡಿ.ಡಿ.ಪಿ.ಐ ಡಿ.ಆರ್ .ನಾಯ್ಕ ರವರಿಗೆ ಮನವಿ ಮಾಡಿದ್ದಾರೆ.
ಸಹ ಶಿಕ್ಷಕ ದಾಸಪ್ಪನವರ ಕಿರುಕುಳ ಹಾಗೂ ಮಕ್ಕಳ ಎದುರು ಅನುಚಿತ ವರ್ತನೆಗೆ ಬೇಸತ್ತ ಶಾಲೆಯ ಪೋಷಕರು ಶಾಲೆಯ ಎದುರು ಪ್ರತಿಭಟನೆ ನಡೆಸಿ ದಾಸಪ್ಪನವರ ವರ್ಗಾವಣೆ ಹಾಗೂ ಇವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.ಜೊತೆಗೆ ಮುಂಡಗೋಡಿನ ಪೊಲೀಸ್ ಠಾಣೆಗೆ ತೆರಳಿ ಮನವಿ ಸಲ್ಲಿಸಿದ್ದು ಇದೀಗ ಶಿಕ್ಷಕರ ಹುದ್ದೆಯ ಗಲಾಟೆ ಶಾಲೆಯಲ್ಲಿ ಮಕ್ಕಳಿಗೆ ಪಾಠ ನಡೆಯದ ಸ್ಥಿತಿಗೆ ತಂದೊಡ್ಡಿದೆ.