For the best experience, open
https://m.kannadavani.news
on your mobile browser.
Advertisement

Uttara kannada | ನ್ಯೂಸ್ ಹೈಲೆಟ್ಸ್ | ಎಲ್ಲಿ ಏನು ಸುದ್ದಿ ವಿವರ ನೋಡಿ

Uttara Kannada News Highlights: Sirsi worker death, Karwar cattle smuggling arrests, Ankola snake rescue, Yellapur safety kit applications, Supreme Court health order, PM-KISAN ₹2,000 update. Today’s major district news in one place.
09:24 PM Nov 16, 2025 IST | ಶುಭಸಾಗರ್
Uttara Kannada News Highlights: Sirsi worker death, Karwar cattle smuggling arrests, Ankola snake rescue, Yellapur safety kit applications, Supreme Court health order, PM-KISAN ₹2,000 update. Today’s major district news in one place.
uttara kannada   ನ್ಯೂಸ್ ಹೈಲೆಟ್ಸ್   ಎಲ್ಲಿ ಏನು ಸುದ್ದಿ ವಿವರ ನೋಡಿ
ರಾಜ್ಯದ ಪ್ರಮುಖ ಸುದ್ದಿಗಳು ಪ್ರತಿ ಜಿಲ್ಲೆಯ ವಿವರ ಇಲ್ಲಿದೆ.

Uttara kannada | ನ್ಯೂಸ್ ಹೈಲೆಟ್ಸ್ | ಎಲ್ಲಿ ಏನು ಸುದ್ದಿ ವಿವರ ನೋಡಿ

Advertisement

ಉತ್ತರ ಕನ್ನಡ ಜಿಲ್ಲೆ (uttara kannada) ಪ್ರಮುಖ ಸುದ್ದಿಗಳು ಒಂದು ಲಿಂಕ್ ನಲ್ಲಿ .ಯಾವ ತಾಲೂಕಿನಲ್ಲಿ ಇಂದು ಏನು ವಿದ್ಯಮಾನ ನಡೆದಿದೆ ಅದರ ಮಾಹಿತಿ ಇಲ್ಲಿದೆ.

https://chat.whatsapp.com/HbI3YG8zHwtAYxenaKEbAg?mode=ems_copy_ta

ಶಿರಸಿ | ಕೆಲಸ ಮಾಡುವಾಗ ತಲೆಗೆ ಪೆಟ್ಟುಬಿದ್ದು ಕಾರ್ಮಿಕ ಸಾವು.

ಶಿರಸಿಯ ಕೆರೆಶಿಂಗನಹಳ್ಳಿಯಲ್ಲಿ ಕಾರ್ಮಿಕನೋರ್ವ ಕೆಲಸ ಮಾಡುವಾಗ ಅಟ್ಟದ ಮೇಲಿಂದ ಬಿದ್ದು ಕೆಳಗಿದ್ದ ತುಳಸಿ ಕಟ್ಟೆ ತಲೆಗೆ ಬಡಿದು ಸಾವು ಕಂಡಿದ್ದಾರೆ. ಕೂಲಿ ಕಾರ್ಮಿಕ ರಾಮನಾಯ್ಕ ಸಾವು ಕಂಡವರಾಗಿದ್ದು , ಕೇಳವ ಹೆಗಡೆ ಎಂಬುವವರ ಮನೆಯಲ್ಲಿ ಕೆಲಸ ಮಾಡುವಾಗ ಈ ಘಟನೆ ನಡೆದಿದೆ. ಘಟನೆ ಸಂಬಂಧ ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Karwar | ಸಿದ್ದರದಲ್ಲಿ ಗೋ ರಕ್ಷಣೆ.

ಕಾರವಾರ ತಾಲ್ಲೂಕಿನ ಸಿಧ್ಧರ ಐಟಿಐ ಕಾಲೇಜ್ ಕ್ರಾಸ್ ಸಮೀಪ ಅನುಮತಿ ಇಲ್ಲದೆ ಜಾನುವಾರು ಸಾಗಿಸುತ್ತಿದ್ದವರ ಬಂಧನಮಾಡಲಾಗಿದ್ದು ಪಿಕಪ್ ವಾಹನ ವಶಕ್ಕೆ ಪಡೆಯಲಾಗಿದೆ.

ವಾಹನದಲ್ಲಿ ಒಂದು ಕೋಣ ಸಾಗಾಟ ಮಾಡುವಾಗ ಸಿದ್ದರ ಗ್ರಾಮಸ್ಥರಿಂದ ವಾಹನ ತಡೆದು, ಪೊಲೀಸ್‌ಗೆ ಮಾಹಿತಿ ನೀಡಿದ್ದರು.

ಯಲ್ಲಾಪುರ ಕಿರವತ್ತಿಯ ಚಾಲಕ ಅಣ್ಣಪ್ಪ ಗೌಡಪ್ಪಾ ನಾಯಕ (35), ಶಿವಾನಂದ ಬಸವಣ್ಣಪ್ಪಾ ರೊಡ್ಡಗೊಳ  (26) ವಿರುದ್ಧ ಪ್ರಕರಣ. ಜಾನುವಾರು ಮಾರಾಟ ಮಾಡಿದ್ದ  ಕಾರವಾರದ ಖಾರ್ಗೆಜೂಗದ ಗ್ರಾಮದ ಶೈಲೇಶ ಮಹಾಬಲೇಶ್ವರ ನಾಯ್ಕ, ಕಿನ್ನರದ ಪರಶುರಾಮ ಮನೋಹರ ಮಾಂಜ್ರೇಕರ ವಿರುದ್ಧ ಪ್ರಕರಣ ದಾಖಲು.

Karwar news
ಹಸು ರಕ್ಷಣೆ

ಶಿರಸಿ: ಪತ್ನಿ ದೂರವಾದ ಹಿನ್ನೆಲೆ; ವಿಷ ಸೇವಿಸಿದ್ದ ಯುವಕ ಸಾವು

ಬನವಾಸಿ ನಿವಾಸಿ ಗಣೇಶ್, ಪತ್ನಿ ಮಕ್ಕಳೊಂದಿಗೆ ದೂರವಾದ ಕಾರಣ ಮನನೊಂದು ವಿಷ ಸೇವಿಸಿ ಹುಬ್ಬಳ್ಳಿಯ ಕಿಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದನು. ನವೆಂಬ‌ರ್ 10ರಂದು ವಿಷ ಸೇವಿಸಿ ಅಸ್ವಸ್ಥನಾಗಿದ್ದ ಗಣೇಶ್, ನವೆಂಬರ್ 15ರಂದು ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಈ ಸಂಬಂಧ ಮೃತನ ಅಕ್ಕ ವಾಸಂತಿ ನೀಡಿದ ದೂರಿನನ್ವಯ ಬನವಾಸಿ ಪೊಲೀಸ್‌ ಠಾಣೆಯಲ್ಲಿ ಭಾನುವಾರ ಅಸಹಜ ಮರಣ ಪ್ರಕರಣ ದಾಖಲಾಗಿದೆ.

Ankola ಹೆಬ್ಬಾವು ರಕ್ಷಣೆ

Ankola Python rescue

ಅಂಕೋಲಾ ತಾಲೂಕಿನ ಹಾರವಾಡ ತರಂಗ್ ಮೆಟ್ ಬೀಚ್ ಬಳಿ ಮೀನುಗಾರಿಕಾ ಬಲೆಯ ಶೆಡ್‌ನಲ್ಲಿ ಅವಿತಿದ್ದ ಹೆಬ್ಬಾವನ್ನು ಸ್ಥಳೀಯರು ಉರುಗ ಪ್ರೇಮಿ ಪ್ರಶಾಂತ್ ಕಲಾಸ್ ಅವರ ಸಹಕಾರದಿಂದ ಸುರಕ್ಷಿತವಾಗಿ ರಕ್ಷಿಸಲಾಯಿತು.

ಕಟ್ಟಡ ಕಾರ್ಮಿಕರಿಗೆ ಸುರಕ್ಷಾ ಕಿಟ್ ವಿತರಣೆಗೆ ಅರ್ಜಿ ಆಹ್ವಾನ.

 ಕಾರ್ಮಿಕ ಇಲಾಖೆ ಹಾಗೂ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ನೋಂದಣಿಯಾದ ಅರ್ಹ ಫಲಾನುಭವಿಗಳಿಗೆ ಗೌಂಡಿ ಸುರಕ್ಷಾ ಕಿಟ್, ಎಲೆಕ್ಟ್ರೀಷಿಯನ್ ಸುರಕ್ಷಾ ಕಿಟ್, ಕಾರ್ಪೆಂಟರ್ ಸುರಕ್ಷಾ ಕಿಟ್, ವೆಲ್ಡಿಂಗ್ ಸುರಕ್ಷಾ ಕಿಟ್, ಪ್ಲಂಬರ್ ಸುರಕ್ಷಾ ಕಿಟ್, ಪೇಂಟರ್ ಸುರಕ್ಷಾ ಕಿಟ್‌ಗಳನ್ನು ವಿವಿಧ ವಿಭಾಗಗಳ ಕಾರ್ಮಿಕರಿಗೆ ಆಯಾ ವಿಭಾಗದ ಸುರಕ್ಷಾ ಕಿಟ್‌ಗಳನ್ನು ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ.

Kumta| ನಿಯಮ ಮೀರಿ ಸಾಲ ವಸೂಲಿಗೆ ಇಳಿದ ಬ್ಯಾಂಕ್ ಗೆ ಪಾಠ ಕಲಿಸಿದ ಖ್ಯಾತ ವಕೀಲ ಪ್ರಶಾಂತ್ ನಾಯ್ಕ ಬೆಟಕುಳಿ.

ಫಲಾನುಭವಿಗಳು ತಮ್ಮ ಚಾಲ್ತಿಯಲ್ಲಿರುವ ಕಾರ್ಮಿಕ ಗುರುತಿನ ಚೀಟಿ ಹಾಗೂ ಆಧಾರ ಕಾರ್ಡ್ ದಾಖಲೆಗಳೊಂದಿಗೆ ನ.25 ರೊಳಗಾಗಿ ಕಾರ್ಮಿಕ ನಿರೀಕ್ಷಕರ ಕಚೇರಿ. ಯಲ್ಲಾಪುರ ಇಲ್ಲಿಗೆ ಅರ್ಜಿ ಸಲ್ಲಿಸಬೇಕು. ಸ್ವೀಕರಿಸಲಾದ ಅರ್ಜಿಗಳನ್ನು ಪರಿಶೀಲಿಸಿ ಅರ್ಹ ಫಲಾನುಭವಿಗಳ ಜೇಷ್ಠತಾ ಆಧಾರದ ಮೇಲೆ ಕಾರ್ಮಿಕ ಸುರಕ್ಷಾ ಕಿಟ್‌ಗಳನ್ನು ವಿತರಿಸಲಾಗುವುದು ಎಂದು ಕಾರ್ಮಿಕ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಂಕೋಲಾ: ಹಂಪ್ ಬಳಿ ಬಸ್ ಬ್ರೇಕ್; ಪ್ರಯಾಣಿಕನಿಗೆ ಗಂಭೀರ ಗಾಯ.

ಅಂಕೋಲಾ-ಯಲ್ಲಾಪುರ ರಾಷ್ಟ್ರೀಯ ಹೆದ್ದಾರಿ 52ರಲ್ಲಿ, ಗದಗದಿಂದ ಕಾರವಾರಕ್ಕೆ ಹೊರಟಿದ್ದ ಸಾರಿಗೆ ಸಂಸ್ಥೆಯ ಬಸ್‌ ಚಾಲಕ ಹಂಪ್‌ ಬಳಿ ಏಕಾಏಕಿ ಬ್ರೇಕ್ ಹಾಕಿದ ಪರಿಣಾಮ, ಕಮ್ಹಾಣಿ ನಿವಾಸಿ ನಾಗಪ್ಪ ಸಿದ್ದಿ ಎಂಬ ಪ್ರಯಾಣಿಕ ಆಸನದಿಂದ ಮೇಲಕ್ಕೆ ಎದ್ದು ಮೇಲ್ಬಾಗಕ್ಕೆ ಬಡಿದು ಗಂಭೀರವಾಗಿ ಗಾಯಗೊಂಡಿದ್ದಾರೆ. ಚಾಲಕನ ಅತಿವೇಗ ಮತ್ತು ಅಜಾಗರೂಕತೆಯಿಂದ ಈ ಘಟನೆ ನಡೆದಿದೆ. ನಾಗಪ್ಪ ಸಿದ್ದಿ ಅವರ ತಲೆ ಮತ್ತು ಮೂಗಿಗೆ ಗಾಯಗಳಾಗಿದ್ದು, ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಅಂಕೋಲಾಕ್ಕೆ ಕರೆತರಲಾಗಿದೆ. ಈ ಸಂಬಂಧ  ಅಂಕೋಲಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುಪ್ರೀಂ ಸೂಚನೆ ಬೆನ್ನಲ್ಲೇ ಎಲ್ಲಾ ಆಸ್ಪತ್ರೆಗಳಿಗೆ ರಾಜ್ಯ ಸರ್ಕಾರ ಸೂಚನೆ| ಈ ಸೇವೆ ಉಚಿತ

ಸುಪ್ರೀಂ ಕೋರ್ಟ್ ಸೂಚನೆ ನಂತರ ರಾಜ್ಯ ಸರ್ಕಾರವು ನಾಯಿ, ಹಾವು ಕಡಿತಕ್ಕೆ ಉಚಿತ ತುರ್ತು ಚಿಕಿತ್ಸೆ ನೀಡಲು ಹೊಸ ಸುತ್ತೋಲೆ ಹೊರಡಿಸಿದೆ. ರಾಜ್ಯದ ಎಲ್ಲಾ ಸರ್ಕಾರಿ & ಖಾಸಗಿ ಆಸ್ಪತ್ರೆಗಳು ಕಡ್ಡಾಯವಾಗಿ ಆ್ಯಂಟಿ-ರೇಬೀಸ್ ಲಸಿಕೆಗಳು & ರೇಬೀಸ್ ಇಮ್ಯುನೊಗ್ಲೋಬುಲಿನ್‌ಗಳ ಕಡ್ಡಾಯ ಸಂಗ್ರಹ ಹೊಂದಿರಬೇಕು. ನಾಯಿ, ಹಾವು & ಇತರೆ ಪ್ರಾಣಿಗಳು ಕಚ್ಚಿದವರಿಗೆ ಯಾವುದೇ ಆಸ್ಪತ್ರೆ ಮುಂಗಡ ಹಣ ಕೇಳದೆ, ಉಚಿತ ಪ್ರಾಥಮಿಕ ತಪಾಸಣೆ & ಪ್ರಥಮ ಚಿಕಿತ್ಸೆ ಕಡ್ಡಾಯ ನೀಡಬೇಕು ಎಂದು ರಾಜ್ಯ ಸರ್ಕಾರ ಸೂಚನೆ ನೀಡಿದೆ.

ರೈತರ ಬ್ಯಾಂಕ್ ಖಾತೆಗೆ ₹2,000|ಕೇಂದ್ರ ಸರ್ಕಾರ ಘೋಷಣೆ.

ಪ್ರಕೃತಿ ಮೆಡಿಕಲ್ ,ಕಾರವಾರ.

PM KISAN ಯೋಜನೆಯ 21ನೇ ಕಂತಿನ ಹಣವನ್ನು (₹2,000) ನವೆಂಬರ್ 19 ರಂದು ಪ್ರಧಾನಿ ಮೋದಿ ಅವರು ಬಿಡುಗಡೆ ಮಾಡಲಿದ್ದಾರೆ ಎಂದು ಕೇಂದ್ರ ಸರ್ಕಾರ ಘೋಷಿಸಿದೆ. ಹಿಂದಿನ ಕಂತಿನ ಹಣವು ಆಗಸ್ಟ್ 2 ರಂದು ರೈತರ ಬ್ಯಾಂಕ್‌ ಖಾತೆಗೆ ಜಮಾ ಆಗಿತ್ತು. ಮುಂದಿನ ಕಂತಿಗಾಗಿ ಕಾಯುತ್ತಿದ್ದವರಿಗೆ ಇದೊಂದು ಸಿಹಿ ಸುದ್ದಿ ಹೊರಬಿದ್ದಿದೆ. KYC ಸಮಸ್ಯೆಯಿಂದಾಗಿ ಹಿಂದಿನ ಕಂತು ಪಡೆಯಲು ಸಾಧ್ಯವಾಗದವರಿಗೆ ಈ ಬಾರಿ ಒಟ್ಟು ₹4,000 ನೀಡಲಾಗುವುದು ಎಂದು ಹೇಳಲಾಗಿದೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ