Mundgod: ಬಸ್ ನಿಲ್ದಾಣಕ್ಕೆ ಬೇಲಿ ಹಾಕಿ ಪ್ರತಿಭಟಿಸಿದ ಭೂ ದಾನ ನೀಡಿದ ವ್ಯಕ್ತಿ ಕಾರಣ ಕೇಳಿದ್ರೆ ಶಾಕ್!
Mundgod: ಬಸ್ ನಿಲ್ದಾಣಕ್ಕೆ ಬೇಲಿ ಹಾಕಿ ಪ್ರತಿಭಟಿಸಿದ ಭೂ ದಾನ ನೀಡಿದ ವ್ಯಕ್ತಿ ಕಾರಣ ಕೇಳಿದ್ರೆ ಶಾಕ್!
ಕಾರವಾರ :- ಬಸ್ ನಿಲ್ದಾಣಕ್ಕೆ ಭೂಮಿ ದಾನಕೊಟ್ಟ ವ್ಯಕ್ತಿಯೊಬ್ಬರು ಸಮರ್ಪಕ ಬಳಕೆಯಾಗದೇ ಹಾಳುಬಿದ್ದಿರುವುದರಿಂದ ಬೇಸತ್ತು ಬಸ್ ನಿಲ್ದಾಣಕ್ಕೆ (bus stand )ಬೇಲಿ ಹಾಕಿ ವಿನೂತನ ರೀತಿಯಲ್ಲಿ ಪ್ರತಿಭಟಿಸಿದ ಘಟನೆ ಉತ್ತರ ಕನ್ನಡ (uttara kannada) ಜಿಲ್ಲೆಯ ಮುಂಡಗೋಡು(mundgod)ತಾಲೂಕಿನ ಮಳಗಿ ಗ್ರಾಮದಲ್ಲಿ ನಡೆದಿದೆ.

ಕೃಷ್ಣ ಮೂರ್ತಿ ಕಲ್ಕೂರ ಬಸ್ ನಿಲ್ದಾಣಕ್ಕೆ ಬೇಲಿ ಹಾಕಿ ಪ್ರತಿಭಟಿಸಿದ ಭೂಮಿ ದಾನ ಮಾಡಿದ ವ್ಯಕ್ತಿಯಾಗಿದ್ದಾರೆ.ಮಳಗಿ ಗ್ರಾಮದಲ್ಲಿ ಬಸ್ ನಿಲುಗಡೆಗೆ ಜಾಗ ವಿಲ್ಲದಿದ್ದಾಗ ಜನರ ಉಪಯೋಗಕ್ಕಾಗಿ 30 ಗುಂಟೆ ಭೂಮಿಯನ್ನು 15 ವರ್ಷದ ಹಿಂದೆ ದಾನ ಮಾಡಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಕಾರಣೀಕರ್ತರಾಗಿದ್ದರು. ಇದನ್ನೂ ಓದಿ:-Mundgod| ಪೋಷಕರ ನಿರ್ಲಕ್ಷ ತೊಟ್ಟಿಗೆ ಬಿದ್ದ ಮಗು ಸಾ***
ಆದರೇ ಈ ನಿಲ್ದಾಣದಲ್ಲಿ ಮೂಲಭೂತ ವ್ಯವಸ್ಥೆ ಇಲ್ಲದೇ ಹಾಳು ಕೊಂಪೆಯಂತಾಗಿದ್ದು ಬಸ್ ಗಳು ಸಹ ಇಲ್ಲಿ ನಿಲ್ಲುತ್ತಿಲ್ಲ.ಇನ್ನು ಈ ನಿಲ್ದಾಣ ಅನೈತಿಕ ಚಟುವಟಿಕೆಯ ಕೇಂದ್ರವಾಗಿದ್ದು ಇದರಿಂದ ಬೇಸತ್ತು ಬಸ್ ನಿಲ್ದಾಣದ ಸುತ್ತಲೂ ಬೇಲಿ ಹಾಕಿ ಪ್ರತಿಭಟನೆ ನಡೆಸಿದ್ದಾರೆ.ಮುಂದಾದರೂ ಮೂಲಭೂತ ಸೌಕರ್ಯಗಳನ್ನು ನೀಡಿ ಈ ಭಾಗದಲ್ಲಿ ಬಸ್ ಗಳ ನಿಲುಗಡೆಯಾಗುವಂತೆ ನೋಡಿಕೊಳ್ಳುವಂತೆ ಅವರು ಆಗ್ರಹಿಸಿದ್ದಾರೆ.
