ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Sirsi:ಶಿರಸಿಯಲ್ಲಿ ಸರಣಿ ಕಳ್ಳತನ ನಗನಾಣ್ಯ ಲೂಟಿ

ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ವಿವಿಧೆಡೆ ಸೋಮವಾರ ಸರಣಿ ಕಳ್ಳತನ ನಡೆದಿದ್ದು, ಎರಡು ಕಡೆ ಪ್ರತ್ಯೇಕವಾಗಿ ಕನ್ನ ಹಾಕಿದ ಕಳ್ಳರು ಲಕ್ಷಾಂತರ ರೂ ಬಂಗಾರ, ನಗದು ಕದ್ದೊಯ್ದಿದ್ದಾರೆ.
10:21 PM Jul 21, 2025 IST | ಶುಭಸಾಗರ್
ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ವಿವಿಧೆಡೆ ಸೋಮವಾರ ಸರಣಿ ಕಳ್ಳತನ ನಡೆದಿದ್ದು, ಎರಡು ಕಡೆ ಪ್ರತ್ಯೇಕವಾಗಿ ಕನ್ನ ಹಾಕಿದ ಕಳ್ಳರು ಲಕ್ಷಾಂತರ ರೂ ಬಂಗಾರ, ನಗದು ಕದ್ದೊಯ್ದಿದ್ದಾರೆ.

ಶಿರಸಿಯಲ್ಲಿ ಸರಣಿ ಕಳ್ಳತನ ನಗನಾಣ್ಯ ಲೂಟಿ

ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ವಿವಿಧೆಡೆ ಸೋಮವಾರ ಸರಣಿ ಕಳ್ಳತನ ನಡೆದಿದ್ದು, ಎರಡು ಕಡೆ ಪ್ರತ್ಯೇಕವಾಗಿ ಕನ್ನ ಹಾಕಿದ ಕಳ್ಳರು ಲಕ್ಷಾಂತರ ರೂ ಬಂಗಾರ, ನಗದು ಕದ್ದೊಯ್ದಿದ್ದಾರೆ.

Advertisement

ಶಿರಸಿಯ ರಾಜೀವ ನಗರದ ಶಮಿವುಲ್ಲಾ ಅಬ್ದುಲ್ ಸತ್ತಾರ್ ಮಿಸ್ಗಾರ್  ಮನೆಯಲ್ಲಿ ಕಳ್ಳತನವಾಗಿದ್ದು, 50 ಸಾವಿರ ರೂ ನಗರದು ಮತ್ತು 15 ಗ್ರಾಂ ಬಂಗಾರ ದೋಚಲಾಗಿದೆ. ಅದೇ ರೀತಿಅಯ್ಯಪ್ಪ ನಗರ ಎರಡನೇ ಕ್ರಾಸಿನ ಮಂಜುನಾಥ್ ವಾಸುದೇವ ಶೆಟ್ ಮನೆಯಲ್ಲಿ 10,000 ರೂ ನಗದು ಹಾಗೂ ನಾಲ್ಕು ಜೊತೆ ಕಿವಿಯೋಲೆ( 40g), 8kg ಬೆಳ್ಳಿ ಮತ್ತು ಒಂದು ಸೋನಾಟಾ ವಾಚ್ ಕಳ್ಳತನ ಮಾಡಲಾಗಿದೆ.

ಇದನ್ನೂ ಓದಿ:-Sirsi: ಅನಂತಕುಮಾರ್ ಹೆಗಡೆಗೆ ಹತ್ತಕ್ಕೂ ಹೆಚ್ಚು ಜೀವ ಬೆದರಿಕೆ? ಪ್ರಗತಿ ಕಾಣದ ತನಿಖೆ ಸುತ್ತಾ!

ಇದಲ್ಲದೇ ವಾಸುದೇವ ಶೇಟ್ ಮನೆಯ ಪಕ್ಕದಲ್ಲಿ ಬಾಡಿಗೆಗೆ ವಾಸವಿದ್ದವರ ಮನೆಯಲ್ಲೂ ಸಣ್ಣ ಪ್ರಮಾಣದಲ್ಲಿ ಕಳ್ಳತನವಾಗಿದ್ದು, ಆದರೆ ಎರಡು ಪ್ರಮುಖ ಕಳ್ಳತನ ಕುರಿತು ಮಾತ್ರ ಪ್ರಕರಣ ದಾಖಲಾಗಿದೆ. ಮಾರುಕಟ್ಟೆ ಠಾಣೆ ಪಿಎಸ್ಐ ರತ್ನ ಕುರಿ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.‌

Advertisement

ಇನ್ನು ತನಿಖೆಯ ಭಾಗವಾಗಿ ಎರಡು ಕಡೆ ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಿಎಸ್ಐ ರಾಜಕುಮಾರ್ ಉಕ್ಕಲಿ ಸಹ ತಮ್ಮ ತನಿಖಾ ತಂಡದೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ್ದು, ತನಿಖೆ ಮುಂದುವರೆದಿದೆ.

Advertisement
Tags :
KannadanewsKarnatakaSirsiSirsi newsTheftUttara Kannada
Advertisement
Next Article
Advertisement