Sirsi|ರಸ್ತೆಯಾಗದೇ ಬೇಸತ್ತ ಜನ| ಓಟು ಬೇಡಿದವರ ಸ್ಮಾರಕ ಹೊಂಡಗಳಿವೆ ನಿಧಾನ ಸಾಗಿ ಎಂದು ನಾಮ ಫಲಕ ಅಲವಡಿಕೆ.
Sirsi|ರಸ್ತೆಯಾಗದೇ ಬೇಸತ್ತ ಜನ| ಓಟು ಬೇಡಿದವರ ಸ್ಮಾರಕ ಹೊಂಡಗಳಿವೆ ನಿಧಾನ ಸಾಗಿ ಎಂದು ನಾಮ ಫಲಕ ಅಲವಡಿಕೆ.
ಕಾರವಾರ:- ಉತ್ತರ ಕನ್ನಡ (uttara Kannada) ಜಿಲ್ಲೆಯಲ್ಲಿ ಹಲವು ಭಾಗದಲ್ಲಿ ರಸ್ತೆಗಳು ಹೊಂಡ ಮಯವಾಗಿದೆ. ಕಳೆದ ಎರಡು ವರ್ಷದ ಹಿಂದೆ ಸ್ಥಳೀಯ ರಸ್ತೆಗಳನ್ನು ಅಭಿವೃದ್ಧಿ ಹಾಗೂ ಹೊಸ ರಸ್ತೆ ನಿರ್ಮಾಣಕ್ಕಾಗಿ 100 ಕೋಟಿ ಅನುದಾನದ ಬೇಡಿಕೆಯನ್ನು ಜಿಲ್ಲಾಡಳಿತ ಮುಖ್ಯಮಂತ್ರಿಗಳಿಗೆ ನೀಡಿತ್ತು. ಮಳೆ ಹಾಗೂ ಭೂ ಕುಸಿತದಿಂದ ಉಂಟಾದ ಹಾನಿ ಸಂಬಂಧ ಕಳೆದ ವರ್ಷ ಜಿಲ್ಲೆಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಕ್ಷಣ ಹಣ ಬಿಡುಗಡೆ ಮಾಡುವ ಆಶ್ವಾಸನೆ ನೀಡಿದ್ದರು.
Sirsi| ಅಕ್ರಮ ನಾಟ ವಶ -ಆರೋಪಿ ಬಂಧನ
ಆದರೇ ಈವರೆಗೂ ಅನುದಾನ ಮಾತ್ರ ಬಿಡುಗಡೆಯಾಗಲೇ ಇಲ್ಲ . ಇನ್ನು ಇತರೆ ಅನುದಾನವೂ ಗ್ಯಾರಂಟಿ ಯೋಜನೆಯಿಂದಾಗಿ ಅನುದಾನದ ಕೊರತೆ ಎದುರಿಸುವಂತಾಗಿದೆ.
ಸಧ್ಯ ಜಿಲ್ಲೆಯಲ್ಲಿ ಜಿಲ್ಲಾಪಂಚಾಯಿತ್ ಅನುದಾನವಾಗಲಿ ,ಶಾಸಕರ ಅಭಿವೃದ್ಧಿ ಅನುದಾನವಾಗಲಿ ಇಲ್ಲದೇ ರಸ್ತೆಗಳು ಹೊಂಡಮಯವಾಗಿದೆ.
ಇನ್ನು ಶಿರಸಿಯ(sirsi) ಹಲವು ಭಾಗದಲ್ಲಿ ರಸ್ತೆ ಹೇಗಿದೆ ಎಂದರೇ ಬಿಸಿಲು ಬಿದ್ದರೇ ಧೂಳು, ಮಳೆ ಬಂದರೆ ರಸ್ತೆಗಳಲ್ಲಾ (road) ಕೆರೆ ಎಂಬುವಂತಾಗಿದೆ.
ನಿಧಾನ ಸಾಗಿ ಓಟು ಬೇಡಿದವರ ಸ್ಮಾರಕ ಹೊಂಡಗಳಿವೆ !

ಶಿರಸಿ ತಾಲೂಕಿನ ದೊಡ್ನಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಂಚಿನಕೇರಿ ಭಾಗದ ರಸ್ತೆ ಹಾಳಾಗಿದೆ. ಜನ ಮನವಿ ಕೊಟ್ಟು ಸುಸ್ತಾಗಿದ್ದಾರೆ. ಜಿಲ್ಲಾ ಪಂಚಾಯ್ತಿಯ ವಿಶೇಷ ಅನುದಾನ ಸಹ ಕಳೆದ ಎರಡು ವರ್ಷದಿಂದ ಮಂಜೂರು ಆಗಿಲ್ಲ. ಇನ್ನು ಶಾಸಕರ ಅನುದಾನವೂ ಇಲ್ಲ. ಕೊನೆ ಪಕ್ಷ ಗ್ರಾಮ ಪಂಚಾಯ್ತಿಯವರಾದರೂ ರಸ್ತೆಯಲ್ಲಿ ಬಿದ್ದ ಹೊಂಡ ಮುಚ್ಚುಲಿ ಎಂದು ಮನವಿ ನೀಡಿದರೂ ಹೊಂಡ ಮುಚ್ಚುವುದಿರಲಿ ಇತ್ತ ಗಮನಿಸುವ ಗೋಜಿಗೂ ಹೋಗಿಲ್ಲ. ಹೀಗಾಗಿ ಬೇಸತ್ತ ಗ್ರಾಮದ ಜನ ಈ ರಸ್ತೆಯಲ್ಲಿ ಓಡಾಡುವ ವಾಹನ ಸವಾರರಿಗೆ ನಾಮ ಫಲಕ ಅಳವಡಿಸಿದ್ದು , "ನಿಧಾನ ಸಾಗಿ ಓಟು ಬೇಡಿದವರ ಸ್ಮಾರಕ ಹೊಂಡಗಳಿವೆ " ಎಂಬ ಎಚ್ಚರಿಕೆಯ ಫಲಕ ಹಾಕಿದ್ದಾರೆ.
ಇನ್ನು ಈ ರಸ್ತೆ ಇರುವುದು ಶಿರಸಿ ಮಾರಿಕಾಂಬಾ ದೇವಸ್ಥಾನದ ಬನವಾಸಿ ರಸ್ತೆಗೆ ಹೋಗುವ ಮಾರ್ಗದಲ್ಲಿ .ಬನವಾಸಿ ಮುಖ್ಯರಸ್ತೆಯಿಂದ ಹಂನಕೇರಿ ಇಂದ ಬಚಗಾವ್ ಗೆ ಹೋಗುವ ರಸ್ತೆ ಇದು. ಕಳೆದ ವರ್ಷ ಒಂಬತ್ತು ಲಕ್ಷದ ಅನುದಾನದಲ್ಲಿ ಅಲ್ಪ ದೂರ ಸಿಮೆಂಟ್ ರಸ್ತೆ ಮಾಡಲಾಗಿದೆ.ಆದರೇ ಅನುದಾನ ಇಲ್ಲದ ಕಾರಣ 600 ಮೀಟರ್ ರಸ್ತೆಯನ್ನು ಹಾಗೆಯೇ ಬಿಡಲಾಗಿದೆ. ಮಳೆಯಿಂದಾಗಿ 600 ಮೀಟರ್ ಕಚ್ಚಾ ರಸ್ತೆ ಹೊಂಡಮಯವಾಗಿದ್ದು ದೊಡ್ಡ ದೊಡ್ಡ ಹೊಂಡದಿಂದಾಗಿ ವಾಹನಗಳು ಚಲಿಸುವುದೇ ಕಷ್ಟಕರವಾಗಿದೆ. ಹೀಗಾಗಿ ಈ ಭಾಗದ ಜನ ಬೇಸತ್ತು ಈ ಮಾರ್ಗ ಅನುಸರಿಸಿದ್ದಾರೆ.
ಇನ್ನು ಈ 600 ಮೀಟರ್ ರಸ್ತೆಯನ್ನು ಮಾಡಲು ಜಿಲ್ಲಾಪಂಚಾಯ್ತಿಯ ಕ್ರಿಯಾ ಯೋಜನೆಯ ಮೂಲಕ 25 ಲಕ್ಷದ ಅಭಿವೃದ್ಧಿ ಕಾರ್ಯಕ್ಕೆ ಕೈಹಾಕಲಾಗಿತ್ತು. ಎರಡು ವರ್ಷದಿಂದ ಬಾರದ ಅನುದಾನದಿಂದ ಇದೀಗ ಈ ರಸ್ತೆ ಹೊಂಡಮಯವಾಗಿಯೇ ಉಳಿದುಕೊಂಡಿದೆ.