ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Uttara kannada| ಇಂದಿನ ಹೈಲೆಟ್ಸ್ ಸುದ್ದಿ| ಎಲ್ಲಿ ಏನು?

Uttara Kannada:- uttara Kannada today news ,bhatkal ,karwar ,siddapur,sirsi, Taluk news
10:22 PM Nov 13, 2025 IST | ಶುಭಸಾಗರ್
Uttara Kannada:- uttara Kannada today news ,bhatkal ,karwar ,siddapur,sirsi, Taluk news
ರಾಜ್ಯದ ಪ್ರಮುಖ ಸುದ್ದಿಗಳು ಪ್ರತಿ ಜಿಲ್ಲೆಯ ವಿವರ ಇಲ್ಲಿದೆ.

Uttara kannada| ಇಂದಿನ ಹೈಲೆಟ್ಸ್ ಸುದ್ದಿ| ಎಲ್ಲಿ ಏನು?

Advertisement

ಉತ್ತರ ಕನ್ನಡ (uttara Kannada) ಜಿಲ್ಲೆಯ ಪ್ರತಿ ತಾಲೂಕಿನ ಸುದ್ದಿಗಳನ್ನು ಒಂದು ಲಿಂಕ್ ನಲ್ಲಿ ನೋಡಿ.

ಕಾರವಾರದಲ್ಲಿ ಭೀಕರ ಅಪಘಾತ ಬಾಲಕ ಸಾವು |ಇಬ್ಬರು ಗಂಭೀರ .

Advertisement

ಕಾರವಾರ: ಕಾರವಾರ ನಗರದ ಆರ್ ಟಿಓ  ಕಚೇರಿಯ ಬಳಿ ಗುರುವಾರ ಸಂಜೆ ಬೈಕ್ ಹಾಗೂ ಸ್ಕೂಟಿ ನಡುವೆ ರಸ್ತೆ ಅಪಘಾತ ಸಂಭವಿಸಿದ್ದು ಓರ್ವ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

ಯಲ್ಲಾಪುರ ತಾಲೂಕಿನ ಇಡಗುಂದಿಯ ಚಿರಂಜೀವ್ ಬೃಹ್ಮಾನಂದ ಕುಂಜಿ (15) ಮೃತ ಯುವಕ‌.

ತನ್ನ ತಾಯಿಯೊಂದಿಗೆ ಮಾಜಾಳಿಯ ಮನೆಯೊಂದರಲ್ಲಿ ಬಾಡಿಗೆ‌ ಇದ್ದ ಇವರು ಗುರುವಾರ ಸಂಜೆ ಕಾರವಾರಕ್ಕೆ ಬರುವಾಗ ಅಪಘಾತ ನಡೆದಿದೆ.  ಇಲ್ಲಿನ ಆರ್ಟಿಓ ಕಚೇರಿಯ ಬಳಿ ಹಿಂದಿನಿಂದ ಬಂದ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳ ಬುಲೆಟ್ ಬೈಕ್ ಡಿಕ್ಕಿ ಹೊಡೆದಿದ್ದು ಚಿರಂಜೀವ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

Karwar| ಜಿಲ್ಲಾಧಿಕಾರಿ ಕಚೇರಿಗೆ ದಾಳಿ ಇಟ್ಟ ಉಡ! ವಿಡಿಯೋ ನೋಡಿ

ಸ್ಥಳೀಯ ಪ್ರಯಾಣಿಕರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಅಂಬುಲೆನ್ಸ್ ಮೂಲಕ ಮೃತದೇಹ ಹಾಗೂ ಗಾಯಗೊಂಡವರನ್ನು ಜಿಲ್ಲಾಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗಿದೆ. ಅಪಘಾತದಲ್ಲಿ ಮೃತನ ತಾಯಿ ಹಾಗೂ ಮೆಡಿಕಲ್‌ ಕಾಲೇಜಿನ ವಿದ್ಯಾರ್ಥಿಗಳಿಗೆ  ಗಂಭೀರ ಗಾಯಗಳಾಗಿದ್ದು ಗೋವಾದ ಖಾಸಗಿ ಆಸ್ಪತ್ರೆಗೆ ಕಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಕಾರವಾರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಭಟ್ಕಳ: ಮೀನುಗಾರಿಕೆ ವೇಳೆ ಕುಸಿದು ಬಿದ್ದು ವ್ಯಕ್ತಿ ದುರ್ಮರಣ

ಭಟ್ಕಳ: ತಾಲೂಕಿನ ಮಾವಿನಕುರ್ವೆ ಸಮೀಪ ಸಮುದ್ರದಲ್ಲಿ ಮೀನುಗಾರಿಕೆಯ ವೇಳೆ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಮೃತಪಟ್ಟ ದುರಂತ ಘಟನಾ ನಡೆದಿದೆ.

ಮೃತರನ್ನು ಶ್ರೀಧರ ಪರಮೇಶ್ವರ ಖಾರ್ವಿ ಎಂದು ಗುರುತಿಸಲಾಗಿದೆ. ಅವರು ಮಾವಿನಕುರ್ವೆ ಬಂದರಿನಿಂದ ಸುಮಾರು 15 ಕಿ.ಮೀ ದೂರ ಸಮುದ್ರಕ್ಕೆ ಇಳಿದು ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಬಲೆ ಎಳೆಯುವ ಕೆಲಸದ ಮಧ್ಯದಲ್ಲಿ ಅಚಾನಕ್ ನೆಲಕ್ಕುರುಳಿ ಬಿದ್ದಿರುವುದಾಗಿ ಜೊತೆಯಲ್ಲಿದ್ದ ಮೀನುಗಾರರು ತಿಳಿಸಿದ್ದಾರೆ.

ತಕ್ಷಣವೇ ಅವರನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆಗೆ ಮುನ್ನವೇ ಅವರು ಮೃತರಾಗಿರುವುದನ್ನು ವೈದ್ಯರು ದೃಢಪಡಿಸಿದರು.

ಘಟನೆ ಕುರಿತು ಮೃತರ ಪುತ್ರ ರತೀಶ ಖಾರ್ವಿ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಆರಂಭಿಸಿದ್ದಾರೆ.

 

ಸಿದ್ದಾಪುರ: ಭಗತ್‌ ಸಿಂಗ್ ವೃತ್ತದ ಬಳಿ ಓಸಿ ಮಟಕಾ; ಓರ್ವನ ಬಂಧನ

 

ಸಿದ್ದಾಪುರ ನಗರದ ಭಗತ್ ಸಿಂಗ್ ವೃತ್ತದ ಬಳಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮ ಓಸಿ ಮಟಕಾ ಜೂಜಾಟ ನಡೆಸುತ್ತಿದ್ದ ಸಂಜಯ್ ತಂದೆ ವಿಠಲ ಭಂಡಾರಕರ್ ಎಂಬಾತನ ವಿರುದ್ಧ ಸಿದ್ದಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬುಧವಾರ ನಡೆದ ಈ ಕಾರ್ಯಾಚರಣೆಯಲ್ಲಿ, ಪಿಎಸ್‌ಐ ಶಾಂತಿನಾಥ್ ಕೆ. ಪಾಸಾನೆ ಅವರು ಸಿಬ್ಬಂದಿಯೊಂದಿಗೆ ದಾಳಿ ನಡೆಸಿ, ಆರೋಪಿಯಿಂದ ₹510 ನಗದು, ಓಸಿ ಚೀಟಿ ಮತ್ತು ಇತರ ಸಲಕರಣೆಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ತನ್ನ ಲಾಭಕ್ಕಾಗಿ ಜನರಿಂದ ಹಣ ಪಡೆದು ಜೂಜು ನಡೆಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ.

 

ಶಿರಸಿ: ಮಾಣಿ ಗದ್ದೆ ಬಳಿ ಓಸಿ ಮಟಕಾ; ಓರ್ವನ ಬಂಧನ

 

ಶಿರಸಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಮಾಣಿ ಗದ್ದೆ ಕ್ರಾಸ್

 

ಬಳಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮ ಓಸಿ ಮಟಕಾ ಜೂಜಾಟ ನಡೆಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಗುರುವಾರ ಪ್ರಕರಣ ದಾಖಲಿಸಿಕೊಂಡಿದ್ದು, ಇಟಗುಳಿ ಗ್ರಾಮದ ನಿರನಳ್ಳಿ ನಿವಾಸಿ, ರೈತ ಮಹೇಶ ತಂದೆ ಕೇಶವ ಹೆಗಡೆ (43) ಬಂಧಿತ ಆರೋಪಿ. ಆರೋಪಿಯು ಸಾರ್ವಜನಿಕರಿಂದ ಅಂಕೆ-ಸಂಖ್ಯೆಗಳ ಮೇಲೆ ₹1 ರೂಪಾಯಿಗೆ ₹80 ನೀಡುವ ಪಣವನ್ನು ಕಟ್ಟಿಸಿ ಜೂಜು ನಡೆಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ. ಪಿಎಸ್‌ಐ ಸಂತೋಷಕುಮಾ‌ರ್ ಎಂ. ನೇತೃತ್ವದಲ್ಲಿ ನಡೆದ ದಾಳಿಯ ವೇಳೆ, ಆರೋಪಿಯಿಂದ ₹520 ನಗದು ಹಣ, ಓಸಿ ಚೀಟಿಗಳು ಮತ್ತು ಒಂದು ಬಾಲ್ ಪೆನ್ ಸೇರಿದಂತೆ ಇತರ ಸಲಕರಣೆಗಳನ್ನು ವಶಪಡಿಸಿಕೊಳ್ಳಲಾಗಿದೆ.

 

ಕಾರವಾರ: ಪರವಾನಗಿ ಇಲ್ಲದೆ ಗೋವಾ ಮದ್ಯ ಮಾರಾಟ; ಓರ್ವನ ಬಂಧನ

 

ಕಾರವಾರ ತಾಲೂಕಿನ ಮುದಗಾ ಬಂದರು ಪ್ರದೇಶದಲ್ಲಿ ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಗೋವಾ ಮದ್ಯ ಮಾರಾಟ ಮಾಡುತ್ತಿದ್ದ ಅಂಗಡಿ ಮಾಲೀಕ ಸುರೇಶ್ ದುರ್ಗೇಕ‌ರ್ (61) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತನ ಅಂಗಡಿಯಿಂದ ₹4,108 ಮೌಲ್ಯದ 103ಕ್ಕೂ ಹೆಚ್ಚು ಗೋವಾ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಬುಧವಾರ ಪ್ರಕರಣ ದಾಖಲಿಸಲಾಗಿದೆ.

Advertisement
Tags :
Breking newsDistrict newsKarnatakaKarwar newsSirsi newsUttara Kannada news
Advertisement
Next Article
Advertisement