Uttara kannada |ಇಂದಿನ ಸುದ್ದಿಯ ಹೈಲೆಟ್ ಇಲ್ಲಿದೆ.
Uttara kannada |ಇಂದಿನ ಸುದ್ದಿಯ ಹೈಲೆಟ್ ಇಲ್ಲಿದೆ.
ಉತ್ತರ ಕನ್ನಡ (uttara kannada)ಜಿಲ್ಲೆಯ ಪ್ರಮುಖ ಸುದ್ದಿಗಳು ಒಂದು ಲಿಂಕ್ ನಲ್ಲಿ ನೀವು ಓದಬಹುದಾಗಿದ್ದು ಜಿಲ್ಲೆಯ ಪ್ರಮುಖ ತಾಲೂಕಿನ ಸುದ್ದಿಗಳು ಇಲ್ಲಿವೆ.
Honnavar |ಹಸು ಮೇಲೆ ಚಿರತೆ ದಾಳಿ |ಹಸು ಸಾವು
ಹೊನ್ನಾವರ ತಾಲೂಕಿನ ಸಾಲಕೊಳಿಯ ಶ್ರೀಮತಿ ಆಚಾರ್ ಎಂಬುವವರು ಸಾಕಿದ್ದ ಹಸುವಿನ ಮೇಲೆ ಚಿರತೆ ದಾಳಿಮಾಡಿ ಸಾಯಿಸಿದೆ. ಹಸುವನ್ನು ಮೇಯಿಸಲು ಬಿಟ್ಟ ಸಂದರ್ಭದಲ್ಲಿ ಚಿರತೆ ದಾಳಿ ಮಾಡಿದ್ದು ಹಸುವನ್ನು ಅರ್ಧ ಭಕ್ಷಿಸಿ ಹಾಗೆಯೇ ಬಿಟ್ಟು ಹೋಗಿದೆ. ಹಸು ಮನೆಗೆ ಬರದಿರುವುದನ್ನು ಗಮನಿಸಿ ಕಾಡಿನಲ್ಲಿ ನೋಡಿದಾಗ ಹಸುವಿನ ಕಳೆಬರ ಪತ್ತೆಯಾಗಿದೆ. ಇತ್ತೀಚಿಗೆ ಹೊನ್ನಾವರ ಸಾಲಕೋಡು ಭಾಗದಲ್ಲಿ ಚಿರತೆ ಕಾಟ ಮಿತಿಮೀರಿದ್ದು ಆಗಾಗ ಸಾಕುಪ್ರಾಣಿಗಳ ಮೇಲೆ ದಾಳಿ ಇಟ್ಟು ಭಕ್ಷಿಸುತ್ತಿದೆ.
Dandeli | ಬೀದಿ ನಾಯಿಗಳ ಹಾವಳಿ
ದಾಂಡೇಲಿ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದ್ದು ಕಳೆದ ನಾಲ್ಕು ದಿನದಲ್ಲಿ 10 ಕ್ಕೂ ಹೆಚ್ಚು ಜನರ ಮೇಲೆ ದಾಳಿ ಮಾಡಿದ್ದು ದಾಂಡೇಲಿ ನಗರದಲ್ಲಿ
ಆತಂಕದಲ್ಲೇ ಜನ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಶುಕ್ರವಾರ ಒಂದೇ ದಿನ ಐದಕ್ಕೂ ಹೆಚ್ಚು ಜನರ ಮೇಲೆ ಬೀದಿ ನಾಯಿ ದಾಳಿ ಮಾಡಿದೆ.
ಚಿಕ್ಕ ಮಕ್ಕಳು ವಯೋವೃದ್ಧರ ಮೇಲೆ ದಾಳಿ ಮಾಡಿದ್ದು ವೈಷ್ಣವಿ (14), ಹಜರತ್ (8), ರೋಜಿ (70), ಪೆಟ್ರಿನಾ(60), ನಾಗಮ್ಮ (5) ನಾಯಿ ದಾಳಿಗೆ ತುತ್ತಾದವರಾಗಿದ್ದು ,ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಇನ್ನು ಬೀದಿ ನಾಯಿ ಕಡಿದವರಿಗೆ ಚಿಕಿತ್ಸೆ ಕೊಟ್ಟು ಟಿ.ಹೆಚ್.ಓ ಅನಿಲ್ ಎಂಬುವವರಿಗೂ ಬೀದಿ ನಾಯಿ ದಾಳಿ ಮಾಡಿದೆ. ಬೀದಿ ನಾಯಿಗಳ ಹಾವಳಿ ಹೆಚ್ಚಾದರೂ ನಗರಸಭೆ ಸೂಕ್ತ ಕ್ರಮ ಕೈಗೊಳ್ಳದೇ ನಿರ್ಲಕ್ಷ ಮಾಡಿದ್ದು ಜನರು ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಭಟ್ಕಳ: ಗಾಂಜಾ ಸೇವನೆ ; ಇಬ್ಬರ ಬಂಧನ
ಶುಕ್ರವಾರ, ಭಟ್ಕಳ ತಾಲೂಕಿನ ವೆಂಕಟಾಪುರದ ಜಾಗಟೆಬೈಲ ಬಳಿ ಗಾಂಜಾ ಸೇವಿಸಿ ವಿಚಿತ್ರವಾಗಿ ವರ್ತಿಸುತ್ತಿದ್ದ ಇಬ್ಬರನ್ನು ಗ್ರಾಮೀಣ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಶಿರಾಲಿ ಮೊಗೇರಕೇರಿಯ ಹರ್ಷತ ಮೊಗೇರ (19) ಮತ್ತು ರೋಹಿತ್ ಮೊಗೇರ (19) ಸೇರಿದ್ದಾರೆ. ಆರೋಪಿಗಳ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ದೋಷ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯವು ಅವರಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಈ ಸಂಬಂಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭಟ್ಕಳ: ಪ್ರವಾಸಿಗ ಸಮುದ್ರದಲ್ಲಿ ಮುಳುಗಿ ಸಾವು
ಶುಕ್ರವಾರ ಮಧ್ಯಾಹ್ನ ಮುರ್ಡೇಶ್ವರಕ್ಕೆ ಪ್ರವಾಸಕ್ಕೆ ಬಂದಿದ್ದ ಶಿವಮೊಗ್ಗದ ನಿವಾಸಿ ಸುಭಾಷ ದೇವೇಂದ್ರಪ್ಪ (45) ಸಮುದ್ರದಲ್ಲಿ ಸ್ನಾನ ಮಾಡುವಾಗ ಭಾರೀ ಅಲೆಯ ಅಬ್ಬರಕ್ಕೆ ಸಿಲುಕಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಗುರುವಾರ ಸಂಜೆ ಸ್ನೇಹಿತರೊಂದಿಗೆ ಮುರ್ಡೇಶ್ವರಕ್ಕೆ ಬಂದಿದ್ದ ಅವರು, ಶುಕ್ರವಾರ ಮಧ್ಯಾಹ್ನ ಸಮುದ್ರ ಸ್ನಾನಕ್ಕೆ ಇಳಿದಿದ್ದರು. ಈ ಸಂಬಂಧ ಮುರುಡೇಶ್ವರ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.