Uttara kannada| ಒಂದೊಳ್ಳೆ ಕೆಲಸಕ್ಕೆ ನಾಂದಿ ಹಾಡಿದ ಆಡಳಿತ |ಏನದು ಗೊತ್ತಾ?
Uttara kannada| ಒಂದೊಳ್ಳೆ ಕೆಲಸಕ್ಕೆ ನಾಂದಿ ಹಾಡಿದ ಆಡಳಿತ |ಏನದು ಗೊತ್ತಾ?

Uttara kannada news 22 september 2025:- ಉತ್ತರ ಕನ್ನಡ ಜಿಲ್ಲೆಯಲ್ಲಿ ಟ್ರಾಫಿಕ್ ಸಮಸ್ಯೆಗಳು ದೊಡ್ಡ ತಲೆನೋವಾಗಿತ್ತು. ಜಿಲ್ಲೆಯಲ್ಲಿ ವಾಹನ ಸವಾರರು ಎಲ್ಲದರಲ್ಲಿ ವಾಹನ ಪಾರ್ಕಿಂಗ್ ಮಾಡಿದರೇ, ಸಂಚಾರಿ ನಿಯಮವನ್ನೇ ಗಾಳಿಗೆ ತೂರುತಿದ್ದರು. ಇನ್ನು ಜಿಲ್ಲೆಯಲ್ಲಿ ನಡೆಯುವ ವಾರದ ಸಂತೆಗಳು ಸಹ ಬೇಕಾ ಬಿಟ್ಟಿಯಾಗಿ ನಡೆಯುತಿದ್ದವು.
ಆದ್ರೆ ಇದೀಗ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ದೀಪನ್ ರವರು ಅಧಿಕಾರ ವಹಿಸಿಕೊಂಡ ನಂತರ ಸದ್ದಿಲ್ಲದೇ ಸಂಚಾರ ವ್ಯವಸ್ಥೆಯನ್ನು ಸರಿಪಡಿಸುವ ಕಾಯಕಕ್ಕೆ ಕೈ ಹಾಕಿದ್ದಾರೆ.
ಜಿಲ್ಲೆಯ ಸಂಚಾರಿ ವಿಭಾಗದ ಅಧಿಕಾರಿಗಳ ಸಭೆ ನಡೆಸಿದ ಎಸ್.ಪಿ ದೀಪನ್ ರವರು ಇದೀಗ ಸಂಚಾರಿ ಸೂತ್ರಗಳನ್ನ ಜಿಲ್ಲೆಯಲ್ಲಿ ಇಂಪ್ಲಿಮೆಂಟ್ ಮಾಡುವತ್ತ ಕೈ ಹಾಕಿದ್ದಾರೆ.
ಜಿಲ್ಲೆಯಲ್ಲಿನ ಸಂತೆಗಳಲ್ಲಿ ಸಂಚಾರಿ ನಿಯಮ

ಜಿಲ್ಲಾ ಕೇಂದ್ರ ಕಾರವಾರ ಸೇರಿದಂತೆ 12 ತಾಲೂಕಿನಲ್ಲಿ ನಡೆಯುವ ಸಂತೆಗಳ ಮೇಲೆ ಪೊಲೀಸರು ಮಾನೀಟರಿಂಗ್ ಮಾಡುತಿದ್ದಾರೆ. ಬೇಕಾ ಬಿಟ್ಟಿ ಮಳಿಗೆಗಳನ್ನು ತೆರೆಯುವವರಿಗೆ ಬಿಸಿ ಮುಟ್ಟಿಸಿದ್ದಾರೆ. ಸಂತೆಯಲ್ಲಿ ಗಿಜುಗುಡುವ ಜನರ ಮಧ್ಯೆ ವಾಹನ ತೆಗೆದುಕೊಂಡು ಹೋಗುವವರ ನಿಗ ಇಟ್ಟಿದ್ದು ಕಾರವಾರ ಸೇರಿದಂತೆ ಜಿಲ್ಲೆಯಲ್ಲಿ ನಡೆಯುವ ಸಂತೆ ಮಾರುಕಟ್ಟೆಗಳಲ್ಲಿ ಬ್ಯಾರಿಕೇಟ್ ಗಳನ್ನು ಅಳವಡಿಸಿ ಸಂಚಾರ ನಿಯಮ ಪಾಲಿಸುವಂತೆ ನೋಡಿಕೊಳ್ಳಲಾಗುತ್ತಿದೆ.
ದಂಡದ ಬಿಸಿ.

ಇನ್ನು ನೋ ಪಾರ್ಕಿಂಗ್ ಏರಿಯಾ, ವಾಹನ ನಿಗದಿ ಸ್ಥಳದಲ್ಲಿ ನಿಲ್ಲಿಸದೇ ಇರುವ ಸವಾರರಿಗೆ ಮೊದಲು ತಿಳಿಹೇಳಿ ದಂಡ ವಿಧಿಸಲಾಗುತ್ತಿದೆ. ಹೀಗೆ ಕಾರವಾರ ಸೇರಿದಂತೆ ಹಲವು ಭಾಗದಲ್ಲಿ ಪ್ರತಿ ದಿನ ಸಂಚಾರ ನಿಯಮ ಮೀರುವವರಿಗೆ ದಂಡ ವಿಧಿಸಲಾಗುತ್ತಿದೆ.
ಕಾರವಾರದಲ್ಲಿ ಸಂತೆ
ಕಾರವಾರ ನಗರದಲ್ಲಿ ಪ್ರತಿ ಭಾನುವಾರ ಸಂತೆ ನಡೆಯುತ್ತದೆ ಪ್ರತಿ ಸಂತೆಗೆ ಒಂದು ಸಾವಿರಕ್ಕೂ ಹೆಚ್ಚು ಜನ ವರ್ತಕರು ಬೇರೆ ಜಿಲ್ಲೆಗಳಿಂದ ಆಗಮಿಸುತ್ತಾರೆ. ಬೇಕಾ ಬಿಟ್ಟಿಯಾಗಿ ಅಂಗಡಿಯನ್ನು ತೆರೆಯುವುದರಿಂದ ಸಾವಿರಾರು ಜನ ಬರುವ ಈ ಸಂತೆಯಲ್ಲಿ ಸಾಕಷ್ಟು ಸಮಸ್ಯೆಗಳು ಆಗುತಿದ್ದು ಇದೀಗ ಪೊಲೀಸರು ನಗರಸಭೆ ಜೊತೆ ಸೇರಿ ಹೊಸ ನಿಯಮ ಜಾರಿಗೆ ತಂದಿದ್ದಾರೆ. ವರ್ತಕರಿಗಾಗಿ ರಸ್ತೆ ಬದಿಯಲ್ಲಿ ಲೈನ್ ನನ್ನು ನಿಗದಿ ಮಾಡಲಾಗಿದೆ.ಅದರ ಒಳಗೇ ವರ್ತಕರು ತಮ್ಮ ಮಳಿಗೆ ತೆರೆಯಬೇಕು.
ಇನ್ನು ಓಡಾಲು ಸಹ ಸಾಕಷ್ಟು ಜಾಗ ದೊರೆಯುತಿದ್ದು ಇದನ್ನು ಮಾನೀಟರಿಂಗ್ ಮಾಡಲು ನಗರಸಭೆಯಿಂದ ಎಂಟು ಜನ ಸಿಬ್ಬಂದಿಗಳ ತಂಡ ರಚಿಸಲಾಗಿದೆ. ಪ್ರತಿ ಭಾಗದಲ್ಲೂ ರಸ್ತೆಗಳಲ್ಲಿ ಬ್ಯಾರಿಕೇಟ್ ಅಳವಡಿಸಿ ಸುಲಭ ಸಂತೆ ನಡೆಯಲು ಅನುವು ಮಾಡಿಕೊಡಲಾಗಿದೆ.ಈ ರೀತಿ ಜಿಲ್ಲೆಯ ಎಲ್ಲಾ ಸಂತೆಗಳಲ್ಲೂ ತರಲು ಆಡಳಿತ ಮುಂದಾಗಿದೆ.
