Yallapura ಡಿಸೇಲ್ ಕಳ್ಳತನ ಮಾಡುತಿದ್ದ ಅಂತರ್ ರಾಜ್ಯ ಕಳ್ಳರ ಬಂಧನ
Yallapura news 27 December 2024:-ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ (yallapura)ತಾಲೂಕಿನ ಹೊಸಳ್ಳಿ ಗ್ರಾಮದ ಪೆಟ್ರೋಲ್ ಬಂಕ್ ಬಳಿ ನಿಲ್ಲಿಸಿಟ್ಟಿದ್ದ ಲಾರಿಗಳ ಟ್ಯಾಂಕ್ ನಿಂದ ಡಿಸೇಲ್ ಕಳ್ಳತನ ಮಾಡುತಿದ್ದ ಅಂತರ್ ರಾಜ್ಯ ಕಳ್ಳರನ್ನು ಯಲ್ಲಾಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಡಿಸೇಲ್ ಕಳ್ಳತನ ಪ್ರಕರಣದಲ್ಲಿ ಆರೋಪಿತರಾದ ಮಧ್ಯಪ್ರದೇಶ ಮೂಲದ ಅಮೀನ್ ಖಾನ್ ರಫೀಖ್ ಖಾನ್( 39) ಪಂಕಜ ಸಿಂಗ ನಾಯಕ ಗುಜರಸಿಂಗ್ ಚೌಹಾಣ,( 29 ) ಬಂಧಿತರಾದವರಾಗಿದ್ದಾರೆ.
ಆರೋಪಿತರಿಂದ ಕಳ್ಳತನ ಮಾಡಿದ 28ಸಾವಿರ ಮೌಲ್ಯದ 320 ಲೀಟರ್ ಡಿಸೇಲ್ ನನ್ನು ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ:-Yallapura |ಜನಪ್ರತಿನಿಧಿಗಳ ನಿರ್ಲಕ್ಷ ಮಕ್ಕಳಿಗಾಗಿ ಮಣ್ಣು ಹೊತ್ತ ಶಿಕ್ಷಕಿ.
ಡಿ.21 ರಂದು ಈ ಆರೋಪಿಗಳು ಹೊಸಳ್ಳಿಯ ಪೆಟ್ರೋಲ್ ಬಂಕ್ ಬಳಿ ನಿಲ್ಲಿಸಿಟ್ಟಿದ್ದ ಬಾಗು ಗೌಳಿ ಎಂಬುವವರ ಲಾರಿಯ ಡಿಸೇಲ್ ಟ್ಯಾಂಕ್ ನ ಮುಚ್ಚಳ ಒಡೆದು 320 ಲೀಟರ್ ಡಿಸೇಲ್ ಕಳ್ಳತನ ಮಾಡಿದ್ದರು.
ಇದಲ್ಲದೇ ಹಲವು ಕಡೆ ಇದೇ ಮಾದರಿಯಲ್ಲಿ ಡಿಸೇಲ್ ಕಳ್ಳತನ ಮಾಡಿ ಪರಾರಿಯಾಗುತಿದ್ದ ಈ ಕಳ್ಳರು ಲಾರಿ ಚಾಲಕ ಹಾಗೂ ಕ್ಲೀನರ್ ಆಗಿ ಕೆಲಸ ಮಾಡುತಿದ್ದರು.