For the best experience, open
https://m.kannadavani.news
on your mobile browser.
Advertisement

Uttara kannda: ಇಂದು ಎಲ್ಲಿ ಏನಾಯ್ತು? ವಿವರ ನೋಡಿನೋಡಿ.

ಕಾರವಾರ :- ಆಹಾರ ಅರಸಿ ಬಂದ ಕರಡಿಯೊಂದು ಹಲಸಿನಮರವೇರಿ ಹಣ್ಣು ಕೀಳುತ್ತಿರುವಾಗ ವಿದ್ಯತ್ ತಂತಿ ಸ್ಪರ್ಷಿಸಿ ಸಾ*' ಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ (joida) ತಾಲೂಕಿನ ಅರಣ್ಯ ವ್ಯಾಪ್ತಿಯ ಸದಾಶಿವಗಡ-ಔರಾಧ್ ರಾಜ್ಯ ಹೆದ್ದಾರಿ ಬಳಿಯ
10:12 PM May 11, 2025 IST | ಶುಭಸಾಗರ್
ಕಾರವಾರ :- ಆಹಾರ ಅರಸಿ ಬಂದ ಕರಡಿಯೊಂದು ಹಲಸಿನಮರವೇರಿ ಹಣ್ಣು ಕೀಳುತ್ತಿರುವಾಗ ವಿದ್ಯತ್ ತಂತಿ ಸ್ಪರ್ಷಿಸಿ ಸಾ*' ಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ (joida) ತಾಲೂಕಿನ ಅರಣ್ಯ ವ್ಯಾಪ್ತಿಯ ಸದಾಶಿವಗಡ-ಔರಾಧ್ ರಾಜ್ಯ ಹೆದ್ದಾರಿ ಬಳಿಯ
uttara kannda  ಇಂದು ಎಲ್ಲಿ ಏನಾಯ್ತು  ವಿವರ ನೋಡಿನೋಡಿ

Joida| ವಿದ್ಯುತ್ ಸ್ಪರ್ಷಿಸಿ ಕರಡಿ ಸಾ**

Uttara kannda/ಜೋಯಿಡಾ :- ಆಹಾರ ಅರಸಿ ಬಂದ ಕರಡಿಯೊಂದು ಹಲಸಿನಮರವೇರಿ ಹಣ್ಣು ಕೀಳುತ್ತಿರುವಾಗ ವಿದ್ಯತ್ ತಂತಿ ಸ್ಪರ್ಷಿಸಿ ಸಾ*" ಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ (joida) ತಾಲೂಕಿನ ಅರಣ್ಯ ವ್ಯಾಪ್ತಿಯ ಸದಾಶಿವಗಡ-ಔರಾಧ್ ರಾಜ್ಯ ಹೆದ್ದಾರಿ ಬಳಿಯ ನಾಗೋಡ ಕ್ರಾಸ್ ಬಳಿ ನೆಡೆದಿದೆ.

Advertisement

ಅಂದಾಜು 15 ರಿಂದ 18 ವಯಸ್ಸಿನ ಕರಡಿ ಇದಾಗಿದ್ದು , ವಿದ್ಯುತ್ ತಂತಿ ಮರಕ್ಕೆ ತಾಗಿ ಜೋತು ಬಿದ್ದಿದ್ದರಿಂದ ಈ ಘಟನೆ ಸಂಭವಿಸಿದೆ.

ಇದನ್ನೂ ಓದಿ:-Kumta :ಕರ್ತವ್ಯದಲ್ಲಿ ಮದ್ಯ ಸೇವಿಸಿ  ಹಿರಿಯ ಅಧಿಕಾರಿ ಜೊತೆ ಅನುಚಿತ ವರ್ತನೆ -ಸೇವೆಯಿಂದ ಅಮಾನತು.

ಸ್ಥಳಕ್ಕೆ ಅತಣ್ಯಾಧಿಕಾರಿಗಳು ಹಾಗೂ ಪಶು ವೈದ್ಯಾಧಿಕಾರಿ ಆಗಮಿಸಿ,ಪರಿಶೀಲನೆ ನಡೆಸಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.

Sirsi| ಇಸ್ಪೀಟ್ ಅಡ್ಡದ ಮೇಲೆ ದಾಳಿ-ಬಂಧನ.

Sirs | ಪೊಲೀಸ್ ಠಾಣೆ

ಶಿರಸಿ :- ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಆಡುತ್ತಿದ್ದ ವೇಳೆ ಶಿರಸಿ ಗ್ರಾಮೀಣ ಠಾಣೆ ಪೊಲೀಸರು ದಾಳಿ ನಡೆಸಿ ಐವರ ಮೇಲೆ ಪ್ರಕರಣ ಧಾಖಲಿಸಿಕೊಂಡ ಘಟನೆ ಶಿರಸಿ ತಾಲೂಕಿನ ಎಕ್ಕಂಬಿ ಸಮೀಪದ ಶಾಂತಿನಗರ ಗ್ರಾಮದಲ್ಲಿ ಭಾನುವಾರ ನಡೆದಿದೆ.

ಕೃಷ್ಣ ನಾಯ್ಕ, ಧರ್ಮಾ ನಾಯ್ಕ, ಕುಮಾರ ಮಡಿವಾಳ, ರಮೇಶ ಪೂಜಾರಿ ಹಾಗೂ ಅಶೋಕ ನಾಯ್ಕ ಎಂಬುವರ ಮೇಲೆ ಪ್ರಕರಣ ದಾಖಲಾಗಿದೆ. ಆರೋಪಿಗಳಿಂದ 15, 580ರೂ ನಗದು ಹಾಗೂ ಆಟಕ್ಕೆ ಬಳಸಲಾದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಕುರಿತು ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Sirsi| ಹುಲೇಕಲ್ ರಸ್ತೆ ರಟ್ಟಿನ ಗೋಡನ್ ಗೆ ಬೆಂಕಿ.

Sirsi news

ಶಿರಸಿ (sirsi) ತಾಲೂಕು ಹುಲೇಕಲ್ ರಸ್ತೆ ಮಂಜವಳ್ಳಿ ಸಮೀಪದ ರಟ್ಟಿನ (ಮೋಡಕ)ಗೋಡನ್ ಗೆ ಬೆಂಕಿ ಅನಾಹುತ ಸಂಭವಿಸಿ ಸಂಪೂರ್ಣ ಭಸ್ಮವಾದ ಘಟನೆ ಶನಿವಾತ ಮಧ್ಯರಾತ್ರಿ ಸಂಭವಿಸಿದೆ.

ಬಿಹಾರ ಮೂಲದ ಸೋನು ಎಂಬಾತ ರಟ್ಟಿನ ಗೋಡೌನ್ ಆಗಿದ್ದು, ಈತನ ಕಡೆಯವರು ಗೋಡೌನ್ ಮಾಲೀಕನ ಮದುವೆಯಲ್ಲಿ ಬಿಗಹಾರಕ್ಕೆ ತೆರಳಿದ ವೇಳೆಯಲ್ಲಿ ಈ ಘಟನೆ ಸಂಭವಿಸಿದೆ. ಬೆಳಗಿನ ಜಾವ 3 ಗಂಟೆಯ ವೇಳೆಯಲ್ಲಿ ನಡೆದಿದ್ದು, ಬೆಂಕಿ ಅನಾಹುತಕ್ಕೆ ಕಾರಣ ತಿಳಿದು ಬಂದಿಲ್ಲ. ಅಗ್ನಿಶಾಮಕ ದಳ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದೆ. ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ