For the best experience, open
https://m.kannadavani.news
on your mobile browser.
Advertisement

Bhatkal: ಅಲ್ಲಿಕೂತ ಇಲ್ಲಿ ಕೂತ ಪತ್ರಕರ್ತ ಎಲ್ಲಿ ಕೂತ! ಮತ್ಸ್ಯಮೇಳದಲ್ಲಿ ಪತ್ರಕರ್ತರ ಬಹಿಷ್ಕಾರ!

Bhatkal News 21 November 2024:- ಮುರ್ಡೇಶ್ವರದ RNS ರೆಸಾರ್ಟ್ ಗಾಲ್ಫ್ ಗ್ರೌಂಡ್ ನಲ್ಲಿ ನಡೆಯುತ್ತಿರುವ ಮತ್ಸ್ಯಮೇಳ -2024 ರ ಕಾರ್ಯಕ್ರಮ ಇಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ರವರು ಉದ್ಘಾಟನೆ ನೆರವೇರಿಸಿದರು.
07:40 PM Nov 21, 2024 IST | ಶುಭಸಾಗರ್
bhatkal  ಅಲ್ಲಿಕೂತ ಇಲ್ಲಿ ಕೂತ ಪತ್ರಕರ್ತ ಎಲ್ಲಿ ಕೂತ  ಮತ್ಸ್ಯಮೇಳದಲ್ಲಿ ಪತ್ರಕರ್ತರ ಬಹಿಷ್ಕಾರ

Bhatkal News 21 November 2024:- ಮುರ್ಡೇಶ್ವರದ RNS ರೆಸಾರ್ಟ್ ಗಾಲ್ಫ್ ಗ್ರೌಂಡ್ ನಲ್ಲಿ ನಡೆಯುತ್ತಿರುವ ಮತ್ಸ್ಯಮೇಳ -2024 ರ ಕಾರ್ಯಕ್ರಮ ಇಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ರವರು ಉದ್ಘಾಟನೆ ನೆರವೇರಿಸಿದರು.

Advertisement

ಆದರೇ ಅದಕ್ಕೂ ಮೊದಲು ಮೀನುಗಾರಿಕಾ ಇಲಾಖೆ ಮಾಡಿದ್ದ ಅವ್ಯವಸ್ಥೆ ಮೀನುಗಾರಿಕಾ ಸಚಿವ ಮಂಕಾಳು ವೈದ್ಯರ ಕ್ಷೇತ್ರದಲ್ಲೇ ಸ್ಥಳೀಯರ ಜೊತೆ ಪತ್ರಕರ್ತರೂ ಪ್ರತಿಭಟನೆ ಮಾಡುವಂತಾಯಿತು.

ಹೌದು ಗಾಲ್ಫ ಗ್ರೌಂಡ್ ನಲ್ಲಿ ಐದು ಕೋಟಿಗೂ ಹೆಚ್ಚು ಕರ್ಚುಮಾಡಿ ವಿಶ್ವ ಮೀನುಗಾರಿಕಾ ದಿನ ಹಾಗೂ ಮತ್ಸ್ಯಮೇಳ-2024 ನ್ನು ಆಯೋಜನೆ ಮಾಡಲಾಗಿತ್ತು.

ಇದನ್ನೂ ಓದಿ:-Bhatkal :ಪುರಸಭಾ ಮುಖ್ಯಾಧಿಕಾರಿ ಲೋಕಾಯುಕ್ತ ಬಲೆಗೆ ಆತ ಪಡೆದಿದ್ದ ಹಣವೆಷ್ಟು ಗೊತ್ತಾ?

ಆದರೇ ಪತ್ರಕರ್ತರಿಗೆ ಹಾಗೂ ಅಧಿಕಾರಿಗಳಿಗೆ ,ರಾಜಕೀಯ ಮುಖಂಡರಿಗೆ ಆಸನ ವ್ಯವಸ್ಥೆ ಸೆರಿಯಾಗಿ ಮಾಡದೇ ಎಡವಟ್ಟು ಮಾಡಿಕೊಂಡ ಮೀನುಗಾರಿಕಾ ಇಲಾಖೆ ಮೊದಲು ಪತ್ರಕರ್ತರಿಗೆ ಒಂದಡೆ ಕೂರಲು ಹೇಳಿದರೇ ಮತ್ತೊಂದೆಡೆ ಪೊಲೀಸ್ ಇಲಾಖೆ ಅಧಿಕಾರಿಗಳು ಬೇರೆಡೆ ಕೂರುವಂತೆ ಸೂಚಿಸಿದರು. ಹೀಗೆ ಅಲ್ಲಿ ಇಲ್ಲಿ ಎಂದು ನಾಲ್ಕೈದು ಬಾರಿ ಅಲೆಸಿದ ಅಧಿಕಾರಿಗಳು ಕೊನೆಗೆ ಎಲ್ಲಾ ಜಿಲ್ಲಾ ಪತ್ರಕರ್ತರು ಆಸನವೇ ಇಲ್ಲದೇ ನಿಲ್ಲುವಂತಾಯಿತು.

ಇನ್ನು ಮೊದಲೇ ಆಸನದಲ್ಲಿ ಕೂತಿದ್ದ ಅಧಿಕಾರಿಗಳನ್ನು, ಹಾಗೂ ಕುಟುಂಬ ಸಮೇತ ಬಂದಿದ್ದ ಮೀನುಗಾರ ಮುಖಂಡರನ್ನು ಸಹ ಎಬ್ಬಿಸಿ ಕಳಿಸಲಾಯಿತು.

ಆದ್ರೆ ಸೂಕ್ತ ವ್ಯವಸ್ಥೆ ಮಾಡದೇ ಪತ್ರಕರ್ತರು ,ಹಲವು ಮುಖಂಡರು ವೇದಿಕೆ ಪಕ್ಕದಲ್ಲೇ ನಿಲ್ಲುವಂತಾಯಿತು. ಇನ್ನು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬರುವ ಹೊತ್ತಾದರೂ ಸೂಕ್ತ ವ್ಯವಸ್ಥೆ ಮಾಡದ ಅಧಿಕಾರಿಗಳಿಂದ ಬೇಸೆತ್ತು ವೇದಿಕೆಯ ಭಾಗದಿಂದ ಹೊರಬಂದ ಪತ್ರಕರ್ತರು ಕಾರ್ಯಕ್ರಮ ಬಹಿಷ್ಕರಿಸಿದರು.

ವೇದಿಕೆಯ ಹೊರಭಾಗದಲ್ಲಿ ನೆಲದಮೇಲೆಯೇ ಕುಳಿತು ಪ್ರತಿಭಟನೆ ಮಾಡುವ ಮೂಲಕ ವರದಿ ಮಾಡಲು ಸಿದ್ದರಾದಾಗ ಕೆಲವು ಅಧಿಕಾರಿಗಳು, ಕಾಂಗ್ರೆಸ್ ಮುಖಂಡರು ಬಂದು ಮಾಧ್ಯಮದವರ ಮನವೊಲಿಸಿ ಒಳಗೆ ಕರೆದುಕೊಂಡು ಹೊಗಲು ಪ್ರಯತ್ನಿಸಿದ್ರು.

ತಮ್ಮಿಂದ ಅಧಿಕಾರಿಗಳ ತಲೆದಂಡ ಆಗದಿರಲಿ ಎಂಬ ಸದುದ್ದೆಶದಿಂದ ಕೊನೆಗೆ ಮಾಧ್ಯಮದವರು ವೇದಿಕೆ ಮುಂಭಾಗದ ಆಸನದಲ್ಲಿ ಕುಳಿತು ಸುದ್ದಿ ಮಾಡಿದರು.

ಕೆಟ್ಟುಹೋದ ವೈಫೈ , ಕುರ್ಚಿ ಇಲ್ಲದೇ ಎದ್ದು ಹೊರನಿಂತ ಕಾಂಗ್ರೆಸ್ ನಾಯಕರು!

ಇನ್ನು ಮಾಧ್ಯಮದವರಿಗೆ ಸುದ್ದಿ ಮಾಡಲು ವೈಫೈ ನೆಟ್‌ವರ್ಕ್‌ ವ್ಯವಸ್ಥೆ ಮಾಡದೇ ಕೊನೇ ಕ್ಷಣದಲ್ಲಿ ವ್ಯವಸ್ಥೆ ಮಾಡಿದರೂ ಅದು ಕೂಡ ಕೆಟ್ಟುಹೋಗಿ ಪತ್ರಿಕೆ ಹಾಗೂ ಟಿವಿ ಮಾಧ್ಯಮದವರು ಸುದ್ದಿ ಕಳುಹಿಸಲು ಪರದಾಡಿದರು. ವೇದಿಕೆಯಿಂದ ದೂರು ಹೋಗಿ ಕಳುಹಿಸುವಂತಾಯಿತು.

ಇನ್ನು ಮಾಧ್ಯಮದವರಿಗೆ ಚೇರ್ ನೀಡುವ ಸಲವಾಗಿ ಮೊದಲೇ ಕುಳಿತಿದ್ದ ಕಾಂಗ್ರೆಸ್ ನಾಯಕರು , ಅಧಿಕಾರಿಗಳನ್ನು ಎಬ್ಬಿಸಲಾಯಿತು. ಮೊದಲು ನಿಂತಿದ್ದ ಪತ್ರಕರ್ತರು ಕುಳಿತರೇ ಅಧಿಕಾರಿಗಳು , ಕಾಂಗ್ರೆಸ್ ಮುಖಂಡರು ನಿಲ್ಲುವಂತಾಯಿತು.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ