Uttara kannda :ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿದ ಬಸ್ ಹಲವರಿಗೆ ಗಾಯ
Siddapura news 26 december 2024:- ವಾಯವ್ಯ ಸಾರಿಗೆ ಬಸ್ ಪಲ್ಟಿಯಾಗಿ 15 ಜನರಿಗೆ ಗಾಯವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಗೋಳಗೊಡು ಬಳಿ ಸಂಜೆ ನೆಡೆದಿದೆ.
11:18 PM Dec 26, 2024 IST | ಶುಭಸಾಗರ್
Siddapura news 26 december 2024:- ವಾಯವ್ಯ ಸಾರಿಗೆ ಬಸ್ ಪಲ್ಟಿಯಾಗಿ 15 ಜನರಿಗೆ ಗಾಯವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ (siddapura )ತಾಲೂಕಿನ ಗೋಳಗೊಡು ಬಳಿ ಸಂಜೆ ನೆಡೆದಿದೆ.
Advertisement
ಸಾಗರದಿಂದ ಸಿದ್ದಾಪುರಕ್ಕೆ ಬರುತ್ತಿದ್ದ ಸಾರಿಗೆ ಸಂಸ್ಥೆ ಬಸ್ ಹೊಳೆಗೆ ಅಡ್ಡಲಾಗಿ ನಿರ್ಮಿಸಲಾದ ಸೇತುವೆಯಿಂದ ಉಂಟಾದ ಹಂಪ್ ನಿಂದಾಗಿ ಬಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಈ ಘಟನೆ ನಡೆದಿದೆ.
ಬಸ್ ಬಿದ್ದ ಹೊಡೆತಕ್ಕೆ ಸುಮಾರು 20 ಅಡಿ ಆಳಕ್ಕೆ ಬಿದ್ದಿದ್ದು ಬಸ್ ನಲ್ಲಿ ಸುಮಾರು 17 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು.
ಇದನ್ನೂ ಓದಿ:-Siddapura 10 ಸಾವಿರ ಪಿಗ್ಮಿ ಹಣಕ್ಕಾಗಿ ವೃದ್ದೆಯನ್ನೇ ಮುಗಿಸಿದ ಹಂತಕರು!
ಘಟನೆಯಲ್ಲಿ 3 ವಿದ್ಯಾರ್ಥಿಗಳು ಸೇರಿದಂತೆ 15 ಜನರಿಗೆ ಗಾಯಗಳಾಗಿದೆ.ಗಾಯಾಳುಗಳು ಸಿದ್ದಾಪುರ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲುಮಾಡಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement