For the best experience, open
https://m.kannadavani.news
on your mobile browser.
Advertisement

Uttara kannda ಪಶ್ಚಿಮ ಘಟ್ಟ ಭಾಗದಲ್ಲಿ ಭೂಕಂಪ ಅನುಭವ ಜಿಲ್ಲಾಧಿಕಾರಿ ಸ್ಪಷ್ಟನೆ ಹೀಗಿದೆ.

Uttara kannda news 01 December 2024:- ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟ (Western Ghat) ಭಾಗದ ಶಿರಸಿ ತಾಲ್ಲೂಕಿನ ಮತ್ತಿಘಟ್ಟಾ, ಸಂಪಖಂಡ, ಹೆಗಡೆಕಟ್ಟಾ, ಯಲ್ಲಾಪುರ ತಾಲ್ಲೂಕಿನ ಚೌವತ್ತಿ, ಸಿದ್ದಾಪುರ ತಾಲ್ಲೂಕಿನ ಕಾನಸೂರು, ತಟ್ಟಿಕೈ, ಮಾವಿನಗುಂಡಿ, ಹಲಗೇರಿ, ಕುಮಟಾ ಹಾಗೂ ಶಿರಸಿ ತಾಲ್ಲೂಕಿನ ಗಡಿ ಭಾಗವಾದ ದೇವಿಮನೆ ಘಟ್ಟ ಭಾಗಗಳಲ್ಲಿ ಇದ್ದಕ್ಕಿದ್ದಂತೆ ಭೂಮಿ ನಡುಗಿದ ಅನುಭವ (earthquake) ಕುರಿತು ಸಾರ್ವಜನಿಕರು ತಿಳಿಸಿದ್ದಾರೆ
06:39 PM Dec 01, 2024 IST | ಶುಭಸಾಗರ್
uttara kannda ಪಶ್ಚಿಮ ಘಟ್ಟ ಭಾಗದಲ್ಲಿ ಭೂಕಂಪ ಅನುಭವ ಜಿಲ್ಲಾಧಿಕಾರಿ ಸ್ಪಷ್ಟನೆ ಹೀಗಿದೆ

Uttara kannda news 01 December 2024:- ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟ (Western Ghat) ಭಾಗದ ಶಿರಸಿ ತಾಲ್ಲೂಕಿನ ಮತ್ತಿಘಟ್ಟಾ, ಸಂಪಖಂಡ, ಹೆಗಡೆಕಟ್ಟಾ, ಯಲ್ಲಾಪುರ ತಾಲ್ಲೂಕಿನ ಚೌವತ್ತಿ, ಸಿದ್ದಾಪುರ ತಾಲ್ಲೂಕಿನ ಕಾನಸೂರು, ತಟ್ಟಿಕೈ, ಮಾವಿನಗುಂಡಿ, ಹಲಗೇರಿ, ಕುಮಟಾ ಹಾಗೂ ಶಿರಸಿ ತಾಲ್ಲೂಕಿನ ಗಡಿ ಭಾಗವಾದ ದೇವಿಮನೆ ಘಟ್ಟ ಭಾಗಗಳಲ್ಲಿ ಇದ್ದಕ್ಕಿದ್ದಂತೆ ಭೂಮಿ ನಡುಗಿದ ಅನುಭವ (earthquake) ಕುರಿತು ಸಾರ್ವಜನಿಕರು ತಿಳಿಸಿದ್ದಾರೆ.

Advertisement

ಇದನ್ನೂ ಓದಿ:-Sirsi ಬಾಲಕಿ ಮೇಲಿನ ದೌರ್ಜನ್ಯಕ್ಕೆ 20 ವರ್ಷ ಶಿಕ್ಷೆ ವಿಧಿಸಿದ ನ್ಯಾಯಾಲಯ

ಈ ವಿಷಯ ಮಾಧ್ಯಮಗಳಲ್ಲೂ ಪ್ರಕಟವಾಗುತಿದ್ದಂತೆ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾರವರು ಈ ಕುರಿತು ಕರ್ನಾಟಕ ಪ್ರಕೃತಿ ವಿಕೋಪ ನಿರ್ವಹಣ ಕೇಂದ್ರ ದಲ್ಲಿ ಮಾಹಿತಿ ಕಲೆಹಾಕಿದಾಗ ಯಾವುದೇ ತರದ ಭೂಕಂಪನವಾದ ವರದಿಯಾಗಿಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:-Uttara kannda |ಶಿರಸಿ-ಕುಮಟಾ ಘಟ್ಟ ಭಾಗದಲ್ಲಿ ಭೂ ಕಂಪನ ! 

ನಾವು ನೈಸರ್ಗಿಕ ಪ್ರಕೃತಿ ವಿಕೋಪ ಕೇಂದ್ರದಲ್ಲಿ ವಿಚಾರಿಸಿದ್ದೇವೆ ಯಾವುದೇ ರೀತಿಯ ಭೂಕಂಪನವಾಗಿಲ್ಲ. ರಿಕ್ಟರ್ ಮಾಪನದಲ್ಲೂ ದಾಖಲಾಗಿಲ್ಲ, ಹೀಗಾಗಿ ಜನ ಭಯಪಡುವ ಅವಷ್ಯಕತೆ ಇಲ್ಲ. ಇನ್ನು ಈ ಭಾಗದಲ್ಲಿ ಹೆದ್ದಾರಿ ಕಾಮಗಾರಿಗಾಗಿ ಯಾವುದೇ ಸ್ಪೋಟ ನಡೆಸಿಲ್ಲ. ಜನರು ಹೇಳಿರುವ ಬಗ್ಗೆ ಮಾಹಿತಿ ಪಡೆಯುತ್ತೇವೆ - ಲಕ್ಷ್ಮಿ ಪ್ರಿಯಾ, ಜಿಲ್ಲಾಧಿಕಾರಿ.

ಸದ್ಯ ಪಶ್ಚಿಮ ಘಟ್ಟ ಭಾಗದಲ್ಲಿ ಭೂಕಂಪದ ಅನುಭವವನ್ನು ಹಲವು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಕೆಲವರು ನಾಲ್ಕೈದುಬಾರಿ ಭೂಮಿ ಕಂಪಿಸಿದೆ ಎಂದರೇ , ಹಲವರು ಗುಡುಗು ಬಂದಂತೆ ಅನುಭವವಾಗಿ ಭೂಮಿ ಕಂಪಿಸಿದೆ ಎಂದು ಹೇಳಿಕೊಂಡಿದ್ದಾರೆ.

ಯಾವುದು ಸದ್ದು?

ರಿಕ್ಟರ್ ಮಾಪನದಲ್ಲೂ ದಾಖಲಾಗದೇ ಹೀಗೆ ಕಂಪಿಸಿದ ಅನುಭವ ಆಗಿರುವುದು ಸಾಕಷ್ಟು ಪ್ರಶ್ನೆ ಏಳುವಂತೆ ಮಾಡಿದೆ. ಪಶ್ಚಿಮ ಘಟ್ಟ ಭಾಗದಲ್ಲಿ ನಡೆಯುತ್ತಿರುವ ಕಾಮಗಾರಿ ಪ್ರಭಾವ ಭೂಮಿಯ ಒಳಗೆ ಬದಲಾಗಿದೆಯಾ ? ಅಥವಾ ಯಾವುದಾದರೂ ದೊಡ್ಡ ಬಂಡೆಕಲ್ಲು ಜಾರಿತಾ? ಎಂಬ ಬಗ್ಗೆಯೂ ಪ್ರಶ್ನೆ ಎದ್ದಿದೆ.

ಈ ಹಿಂದೆ ಘಟ್ಟ ಭಾಗದಲ್ಲಿ ಭೂ ಕುಸಿತ ಸಹ ನಿರಂತರವಾಗಿ ಆಗಿದೆ. ಹೀಗಾಗಿ ಮತ್ತೆ ಭೂಮಿ ಕುಸಿಯುವ ಮುನ್ಸೂಚನೆಯಾ ಎಂಬ ಪ್ರಶ್ನೆ ಏಳುವಂತೆ ಮಾಡಿದೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ