For the best experience, open
https://m.kannadavani.news
on your mobile browser.
Advertisement

Uttara kannda |ಶಿರಸಿ-ಕುಮಟಾ ಘಟ್ಟ ಭಾಗದಲ್ಲಿ ಭೂ ಕಂಪನ !

Uttara kannda 01December 2024 :- ಒಂದೆಡೆ ಸೈಕ್ಲೋನ್ ನಿಂದ ಕರಾವಳಿ ಭಾಗದಲ್ಲಿ ಮಳೆ ಸುರಿಯುತಿದ್ದರೇ ಪಶ್ಚಿಮ ಘಟ್ಟದಲ್ಲಿ ಮೂರು ಸೆಕೆಂಡ್ ಗೂ ಅಧಿಕ ಭೂ ಕಂಪದ (Earthquake) ಅನುಭವವಾಗಿದೆ.
02:13 PM Dec 01, 2024 IST | ಶುಭಸಾಗರ್
uttara kannda  ಶಿರಸಿ ಕುಮಟಾ ಘಟ್ಟ ಭಾಗದಲ್ಲಿ ಭೂ ಕಂಪನ
Uttara Kannada Western Ghat earthquake

ಪ್ರಿಯ ಓದುಗರೇ ನಿಮ್ಮ ಬೆಂಬಲ ಹಾರೈಕೆ ಇದ್ದರೇ ಮತ್ತಷ್ಟು ಉತ್ತಮ ಸುದ್ದಿಗಳನ್ನು ನಾವು ನೀಡಬಹುದು ಕರಾವಳಿ ಮಲೆನಾಡಿನ ಪ್ರಮುಖ ಸುದ್ದಿಗಳ ಬಗ್ಗೆ ಮಾಹಿತಿ ಪಡೆಯಲು ನಮ್ಮ WhatsApp ಗ್ರೂಪ್ ಗೆ ಸೇರಲು ಈ ಅಕ್ಷರದ ಮೇಲೆ ಕ್ಲಿಕ್ ಮಾಡಿ.

Advertisement

Uttara kannda 01December 2024 :- ಒಂದೆಡೆ ಸೈಕ್ಲೋನ್ ನಿಂದ ಕರಾವಳಿ ಭಾಗದಲ್ಲಿ ಮಳೆ ಸುರಿಯುತಿದ್ದರೇ ಪಶ್ಚಿಮ ಘಟ್ಟದಲ್ಲಿ ಮೂರು ಸೆಕೆಂಡ್ ಗೂ ಅಧಿಕ ಭೂ ಕಂಪದ (Earthquake) ಅನುಭವವಾಗಿದೆ.

ಕುಮಟಾ -ಶಿರಸಿ ತಾಲೂಕು ಭಾಗದ ಘಟ್ಟ ಪ್ರದೇಶದಲ್ಲಿ ಭೂಮಿ ಕಂಪಿಸಿದ್ದು ಜನ ಒಂದುಕ್ಷಣ ಭಯಭೀತರಾಗಿದ್ದಾರೆ.

ಪಶ್ಚಿಮ ಘಟ್ಟ ಭಾಗ ಕುಮಟಾ-ಶಿರಸಿ ಮಾರ್ಗ ಫೋಟೋ ಕೃಪೆ ಜೋಲಿ ಕುಮಟಾ.
ಪಶ್ಚಿಮ ಘಟ್ಟ ಭಾಗ ಕುಮಟಾ-ಶಿರಸಿ ಮಾರ್ಗ ಫೋಟೋ ಕೃಪೆ ಜೋಲಿ ಕುಮಟಾ.

ಕುಮಟಾ (Kumta) ತಾಲೂಕಿನ ಪಶ್ಚಿಮ ಘಟ್ಟ ಪ್ರದೇಶದ ದೇವಿಮನೆ ಘಟ್ಟ ,ಶಿರಸಿ ತಾಲೂಕಿನ (sirsi) ಪಶ್ಚಿಮಘಟ್ಟ ( Western Ghat) ಗ್ರಾಮವಾದ ರಾಗಿ ಹೊಸಳ್ಳಿ,ಕಸಗೆ, ಬಂಡಳ ಭಾಗದಲ್ಲಿ ಮೂರು ಸೆಕೆಂಡ್ ಗೂ ಅಧಿಕ ಭೂಮಿ ಕಂಪಿಸಿದೆ.

ಇದನ್ನೂ ಓದಿ:-KUMTA- SIRSI ರಾಷ್ಟ್ರೀಯ ಹೆದ್ದಾರಿ 766 ಡಿಸೆಂಬರ್ 2 ರಿಂದ ಬಂದ್

ಈ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸಹ ನಡೆಯುತ್ತಿದೆ. ಗುಡ್ಡ ಕೊರೆದು ರಸ್ತೆ ಮಾಡಲಾಗುತಿದ್ದು ಕಲ್ಲುಗಳನ್ನು ಸಿಡಿಸಿರಬಹುದು ಎಂದು ಊಹಿಸಲಾಗಿತ್ತು.

ಆದರೇ ಹಿಂದೂ ಮಹಾಸಾಗರದಲ್ಲಿ 10 ಕಿಲೋಮೀಟರ್ ಆಳದ ರಿಡ್ಜ್ ಮಧ್ಯದಲ್ಲಿ ಅಲ್ಪ ಮಟ್ಟದ ಭೂ ಕಂಪನವಾಗಿದೆ.ಇದರಿಂದಲೇ ಪಶ್ಚಿಮ ಘಟ್ಟ ಭಾಗದಲ್ಲೂ ಭೂಮಿ ಕಂಪಿಸಿರುವ ಸಾಧ್ಯತೆ ಇದೆ ಎಂದು ತಜ್ಞರು ಊಹಿಸಿದ್ದಾರೆ.

ಹಿಂದೂ ಮಹಾಸಾಗರದಲ್ಲಿ ಭೂ ಕಂಪನ ಮಾಹಿತಿ ಚಿತ್ರ.

ಒಟ್ಟಿನಲ್ಲಿ ಹಿಂದೂ ಮಹಾಸಾಗರದಲ್ಲಿ ಕಂಪಿಸಿದ ಭೂಮಿಯಿಂದ ಪಶ್ಚಿಮ ಘಟ್ಟ ಭಾಗದಲ್ಲಿ ಸಹ ಅದರ ಪರಿಣಾಮ ಕಾಣಿಸಿಕೊಂಡಿದ್ದು ಜನರನ್ನು ಒಂದುಕ್ಷಣ ಭಯಭೀತರನ್ನಾಗಿಸಿತ್ತು.

ಒದನ್ನೂ ಓದಿ:-Kumta ರೈತನಿಗೆ ಪರಿಹಾರ ನೀಡದ ತಾಲೂಕು ಆಡಳಿತ ಕುಮಟಾ ಎಸಿ ಕಚೇರಿ ಜಪ್ತಿ!

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ