KUMTA -ವಿದ್ಯಾರ್ಥಿಗಳ ಮೇಲೆ ಹಲ್ಲೆಗೆ ಮುಂದಾದ KSRTC ನಿರ್ವಾಹಕ! ಮುಂದೇನಾಯ್ತು ?
Kumta news 06 December 2024 :- ತಮ್ಮ ಬಸ್ ನಲ್ಲಿ ಬಂದ್ರೆ ಯಾರೂ ಮೊಬೈಲ್ ನೋಡುವ ಹಾಗೆ ಇಲ್ಲ. ರಿಂಗಾಗುವ ಹಾಗೆ ಇಲ್ಲ. ಸೀಟ್ ನಲ್ಲಿ ಕೂತ್ರೂ ಕೂರಬೇಡಿ ಅಂತಾರೆ. ಬೇರೆ ಬಸ್ ನಲ್ಲಿ ಬನ್ನಿ ಅಂತಾರೆ. ಅವಾಚ್ಯ ಶಬ್ದದಿಂದ ನಿಂದಿಸುತ್ತಾರೆ ಗೋಕರ್ಣ -ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗುವ KSRTC ಬಸ್ ನಿರ್ವಾಹಕ
ಹೀಗಂತ ಕುಮಟಾ,(Kumta) ಗೋಕರ್ಣಭಾಗದಿಂದ ಬರುವ ಕಾಲೇಜು ವಿದ್ಯಾರ್ಥಿಗಳು ವಿಡಿಯೋ ಸಮೇತ ದೂರಿದ್ದು ಅವರ ವಿರುದ್ಧ ಕ್ರಮ ಜರಿಗಿಸುವಂತೆ ಕುಮಟಾ ಡಿಪೋದ ಮ್ಯಾನೇಜರ್ ಗೆ ವಿದ್ಯಾರ್ಥಿ ಪರಿಷತ್ ದೂರು ನೀಡಿದೆ.
ಕುಮಟಾ - ಕುಕ್ಕೆ ಸುಬ್ರಹ್ಮಣ್ಯ ಕ್ಕೆ ತೆರಳುವ ಬಸ್ ನಲ್ಲಿ ಗೋಕರ್ಣ ಸೇರಿದಂತೆ ಹಲವು ಭಾಗದ ವಿದ್ಯಾರ್ಥಿಗಳು ಹೊನ್ನಾವರ (Honnavara) ,ಕುಮಟಾ(kumta) ಭಾಗದ ಕಾಲೇಜುಗಳಿಗೆ ತೆರಳುತ್ತಾರೆ.
ಈ ಬಸ್ ನಲ್ಲಿ ವಿದ್ಯಾರ್ಥಿಗಳೇ ಹೆಚ್ಚು ಬರುತ್ತಾರೆ. ಆದರೇ ಈ ಬಸ್ ನ KSRTC ನಿರ್ವಾಹಕ ವಿದ್ಯಾರ್ಥಿಗಳಿಗೆ ಅವಾಚ್ಯ ಶಬ್ದದಿಂದ ನಿಂದಿಸಿ ಹಲ್ಲೆ ಮಾಡಲು ಮುಂದಾಗಿದ್ದು ಘಟನೆ ವಿದ್ಯಾರ್ಥಿಗಳ ಮೊಬೈಲ್ ನಲ್ಲಿ ಚಿತ್ರೀಕರಣವಾಗಿದೆ.
ವಿದ್ಯಾರ್ಥಿಗಳು ಚಿತ್ರೀಕರಿಸಿದ ವಿಡಿಯೋ ಇಲ್ಲಿದೆ.:-
ಇನ್ನು ಪ್ರತಿ ದಿನ ವಿದ್ಯಾರ್ಥಿಗಳಿಗೆ ಅವಾಚ್ಯ ಶಬ್ದದಿಂದ ನಿಂದಿಸುತ್ತಾರೆ. ಕಾರಣವಿಲ್ಲದೇ ಹಲ್ಲೆ ಮಾಡಲು ಬರುತ್ತಾರೆ. ನಮ್ಮ ಬಸ್ ಗೆ ಬರಬೇಡಿ ಎಂದು ಗದರಿಸುತ್ತಾರೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.

ಇನ್ನು KSTTC ನಿರ್ವಾಹಕ ವಿದ್ಯಾರ್ಥಿಗಳಿಗೆ ಅವಾಚ್ಯ ಶಬ್ದ ನಿಂದನೆ ,ಹಲ್ಲೆಗೆ ಮುಂದಾಗಿರುವುದು ವಿಡಿಯೋ ದಲ್ಲಿ ಸ್ಪಷ್ಟವಾಗಿದೆ. ಆತ ಹೀಗೆ ಅನುಚಿತ ವರ್ತನೆಗೆ ಕಾರಣ ತಿಳಿದಿಲ್ಲದಿದ್ದರೂ ಮಕ್ಕಳ ಮುಂದೆ ಕೆಟ್ಟ ಶಬ್ದ ಬಳಸಿ ಹಲ್ಲೆಗೆ ಮುಂದಾಗಿರುವುದು ಖಂಡನೀಯ.
ಈ ಕುರಿತು ಡಿಪೋ ಮ್ಯಾನೇಜರ್ ಗೆ ಈಗಾಗಲೇ ಮಾಹಿತಿ ನೀಡಲಾಗಿದೆ. ಏನು ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.