Uttara kannda ಜಿಲ್ಲೆಯಲ್ಲಿ ಮಳೆಗೆ ಹಾನಿ -ವಿದ್ಯುತ್ ಸಂಪರ್ಕ ಕಡಿತ! ಎಲ್ಲಿ ಏನಾಯ್ತು?
Uttara kannda ಜಿಲ್ಲೆಯಲ್ಲಿ ಮಳೆಗೆ ಹಾನಿ -ವಿದ್ಯುತ್ ಸಂಪರ್ಕ ಕಡಿತ! ಎಲ್ಲಿ ಏನಾಯ್ತು?
ಉತ್ತರ ಕನ್ನಡ ಜಿಲ್ಲೆಯಾಧ್ಯಾಂತ ಅಬ್ಬರದ ಮಳೆ (Rain) ಸುರಿದಿದ್ದು ರಾತ್ರಿಯಿಡಿ ಗುಡುಗು ಸಹಿತ ಅಬ್ಬರದ ಗಾಳಿ ಮಳೆಯಿಂದ ಜಿಲ್ಲೆಯ ಸಿದ್ದಾಪುರ, (suddapura) ಶಿರಸಿ,(sirsi)ಯಲ್ಲಾಪುರ,(yallapur)ಮುಂಡಗೋಡು, ಕುಮಟಾ,ಅಂಕೋಲ ಭಾಗದಲ್ಲಿ ಹಾನಿ ಸಂಭವಿಸಿದೆ.
ಸಿದ್ದಾಪುರ ತಾಲೂಕಿನಾದ್ಯಂತ ಗುಡುಗಿನ ಆರ್ಭಟ,ಆಲಿಕಲ್ಲು ಸಹಿತ ಭಾರಿ ಗಾಳಿ,ಮಳೆಗೆ 25ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮುರಿದು ಬಿದ್ದು ತಾಲೂಕಿನ ಹಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಮಂಗಳವಾರ ಮಧ್ಯಾಹ್ನ ಗಾಳಿ-ಮಳೆಯಿಂದಾಗಿ ಬಿಳಗಿಯಲ್ಲಿ ತೆಂಗಿನ ಮರವೊಂದು ವಿದ್ಯುತ್ ಕಂಬದ ರಸ್ತೆ ಮೇಲೆ ಬಿದ್ದು ರಸ್ತೆ ಸಂಚಾರಕ್ಕೆ ವ್ಯತ್ಯಯವಾಗಿದೆ.
ಬಿಳಗಿ,ದೊಡ್ಮನೆ,ಹೇರೂರು,ಹಾರ್ಸಿಕಟ್ಟಾ ಫೀಡರ್ ವ್ಯಾಪ್ತಿಯಲ್ಲಿ ಗಾಳಿ ಮಳೆಗೆ ಹೆಚ್ಚು ವಿದ್ಯುತ್ ಕಂಬಗಳು ಮುರಿದು ಬಿದ್ದ ಪರಿಣಾಮ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಂಪರ್ಕ ಇಲ್ಲದಂತಾಗಿದೆ.
ಇನ್ನು ಮುಂಡಗೋಡಿನ ಶಾಲೆಯೊಂದರ ಮೇಲ್ಚಾವಣಿ ಗಾಳಿ ಅಬ್ಬರಕ್ಕೆ ಕಿತ್ತುಬಂದಿದ್ದು ಹಾನಿ ಸಂಭವಿಸಿದೆ.ಜಿಲ್ಲೆಯಲ್ಲಿ 150 ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿ ಹಾನಿ ಸಂಭವಿಸಿದೆ.