Karnataka:-ಮಿನರಲ್ ವಾಟರ್ ಕುಡಿಯುವವರೇ ಎಚ್ಚರ. ಪ್ರತಿಯೊಬ್ಬರು ಓದಲೇಬೇಕಾದ ಸ್ಟೋರಿ!
Karnataka:-ಮಿನರಲ್ ವಾಟರ್ ಕುಡಿಯುವವರೇ ಎಚ್ಚರ. ಪ್ರತಿಯೊಬ್ಬರು ಓದಲೇಬೇಕಾದ ಸ್ಟೋರಿ!
ಬೆಂಗಳೂರು: ರಾಜ್ಯವನ್ನು ಕಲುಷಿತದಿಂದ ಮುಕ್ತಿಗೊಳಿಸಲು ಆರೋಗ್ಯ ಇಲಾಖೆ ಆಪರೇಷನ್ ಆಹಾರ ಶುರು ಮಾಡಿದೆ. ರೋಡಲ್ಲಿ ಸಿಗೋ, ಹೋಟೆಲ್ಗಳಲ್ಲಿ ಸಿಗೋ ಆಹಾರದ ಸ್ಯಾಂಪಲ್ಗಳನ್ನ ಪಡೆದು ಪರಿಶೀಲನೆ ಮಾಡಿದೆ. 2024 ರಿಂದ ಆರಂಭವಾಗಿರೋ ಈ ಪರ್ವ 2025ರಲ್ಲೂ ಮುಂದುವರೆದ್ದು ಇದೀಗ ಮಿನರಲ್ ವಾಟರ್ ಸರದಿ. ಈ ಬಗ್ಗೆ ಆರೋಗ್ಯ ಸಚಿವರೇ ಮಾಹಿತಿ ನೀಡಿದ್ದು ಉತ್ತರ ಕನ್ನಡ(uttara kannda) ಹಾಗೂ ಶಿವಮೊಗ್ಗ (shivamogga)ಜಿಲ್ಲೆಯಲ್ಲಿ ಕುಡಿಯಲು ಯೋಗ್ಯವಲ್ಲದ ಮಿನರಲ್ ವಾಟರ್ ಯಾವುದು ಎಂಬ ಬಗ್ಗೆ ವಿವರ ಇಲ್ಲಿದೆ.
ಬಾಟಲ್‌ನಲ್ಲಿ ನೀರು ಕುಡಿಯುವವರಿಗೆ ಶಾಕ್!.
ಕಳೆದ ಫೆಬ್ರವರಿಯಲ್ಲಿ ಬಾಟಲ್‌ನಲ್ಲಿ ಕುಡಿಯುವ ನೀರು ಸೇಫ್ ಅಲ್ಲಾ ಅನ್ನೋ ದೂರು ಬರ್ತಿದ್ದಂತೆ ಆರೋಗ್ಯ ಇಲಾಖೆ ರಾಜ್ಯದ ಹಲವಡೆ ಬಾಟಲ್ಗಳನ್ನ ಸಂಗ್ರಹಿಸಿ ಪರಿಶೀಲನೆಗೆ ಕಳಿಸಿತ್ತು. ಅದರ ರಿಪೋರ್ಟ್ ಇದೀಗ ಆರೋಗ್ಯ ಇಲಾಖೆ ಕೈ ಸೇರಿದೆ.
ರಾಜ್ಯದಲ್ಲಿ ಬಳಕೆಯಾಗುತ್ತಿರುವ ವಾಟರ್ ಬಾಟಲ್‌ಗಳಲ್ಲಿ ಬಹುತೇಕ ಬ್ರಾಂಡ್‌ಗಳು ಅನ್‌ಸೇಫ್ ಅನ್ನೋದು ವರದಿಯಿಂದ ಗೊತ್ತಾಗಿದೆ. ನೀರಿನ ಬಾಟಲಿಯ 287 ಸ್ಯಾಂಪಲ್ ಪೈಕಿ 89 ಅನ್‌ಸೇಫ್ ಎನ್ನಲಾಗಿದೆ.
ವಾಟರ್ ಬಾಟಲ್‌ಗಳಲ್ಲಿ ( water bottle) ನಿಗದಿಗಿಂದ ಹೆಚ್ಚು ಮಿನರಲ್ಸ್, ಬ್ಯಾಕ್ಟೀರಿಯಾ ಫ್ಲೋರೈಡ್, ಕ್ಯಾಲ್ಸಿಯಮ್, ಮೆಗ್ನಿಷಿಯಂ ಪತ್ತೆಯಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಆಕ್ಸಿಡ್ಯೂ, ಕೊಂಕಣ್ ಅಕ್ವಾ, ಅಕ್ವಾ ಪ್ಲಸ್ ಕುಡಿಯಲು ಯೋಗ್ಯವಾಗಿಲ್ಲ.
ಇನ್ನು ಶಿವಮೊಗ್ಗ ಜಿಲ್ಲೆಯಲ್ಲಿ ಡ್ಯೂ ಡ್ರಾಪ್ ,ಸಿಗ್ನೇಚರ್, ಸುಜನ್ ರಾಜ್ ನೀರಿನ ಬಾಟಲ್ ಗಳು ಕುಡಿಯಲು ಯೋಗ್ಯವಾಗಿಲ್ಲ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಮಾಹಿತಿ ಮೂಲ- ಆರೋಗ್ಯ ಇಲಾಖೆ ,ಕರ್ನಾಟಕ ಸರ್ಕಾರ ಹಾಗೂ ಫಸ್ಟ್ ನ್ಯೂಸ್.