UCC ಉತ್ತರಾಖಂಡದಲ್ಲಿ ಮದುವೆ, ವಿಚ್ಛೇದನ, ಆಸ್ತಿ ಹಂಚಿಕೆ ಎಲ್ಲಾ ಧರ್ಮಿಯರಿಗೆ ಒಂದೇ ಕಾನೂನುಜಾರಿ|ಏನಿದು ಕಾನೂನು ?
ಡೆಹ್ರಾಡೂನ್:- ಉತ್ತರಾಖಾಂಡದಲ್ಲಿ ದೇಶದಲ್ಲೇ ಮೊದಲಬಾರಿಗೆ ಏಕರೂಪ ನಾಗರೀಕ ಸಂಹಿತೆಯನ್ನು ಸರ್ಕಾರ ಜಾರಿ ಮಾಡಿದೆ. (Uniform Civil Code)
ಈ ಮೂಲಕ ದೇಶದಲ್ಲೇ ಸ್ವತಂತ್ರ ಬಂದ ನಂತರ ಏಕರೂಪ ನಾಗರೀಕ ಸಂಹಿತೆ ಜಾರಿಗೆ ತಂದ ಮೊದಲರಾಜ್ಯವಾಗಿದೆ.

ಏಕರೂಪ ನಾಗರೀಕ ಸಂಹಿತೆ ಎಂದರೇನು?
ಮದುವೆ, ವಿಚ್ಛೇದನ, ದತ್ತು, ಉತ್ತರಾಧಿಕಾರ ಮುಂತಾದ ವಿಚಾರಗಳಲ್ಲಿ ಧರ್ಮಾಧಾರಿತ ಕಾನೂನುಗಳನ್ನು ಬಿಟ್ಟು ಎಲ್ಲಾ ಜಾತಿ, ಧರ್ಮಗಳಿಗೆ ಒಂದೇ ಕಾನೂನು ಅನ್ವಯಮಾಡುವುದೇ ಏಕರೂಪ ನಾರೀಕ ಸಂಹಿತೆ.
ಯಾವುದೇ ಜಾತಿ, ಧರ್ಮ, ಪ್ರಾಂತ್ಯಭೇದ ಮಾಡದೇ ದೇಶದ ( national) ಎಲ್ಲರಿಗೂ ಒಂದೇ ಕಾನೂನು ಇರಬೇಕು ಎನ್ನುವುದೇ ಏಕರೂಪ ನಾಗರಿಕ ಸಂಹಿತೆ ಮುಖ್ಯ ಉದ್ದೇಶ. ಕಾನೂನಿನ ಮುಂದೆ ಎಲ್ಲರೂ ಒಂದೇ ಎಂಬುದು ಇದರ ಪ್ರತಿಪಾದನೆ.
ಏಕರೂಪ ನಾಗರೀಕ ಸಂಹಿತೆಯು (Uniform Civil Code)ಭಾರತದಲ್ಲಿನ ನಾಗರಿಕರ ವೈಯಕ್ತಿಕ ಕಾನೂನುಗಳನ್ನು ರೂಪಿಸಲು ಮತ್ತು ಕಾರ್ಯಗತಗೊಳಿಸಲು ಒಂದು ಪ್ರಸ್ತಾಪವಾಗಿದೆ, ಅದು ಅವರ ಧರ್ಮವನ್ನು ಲೆಕ್ಕಿಸದೆ ಎಲ್ಲಾ ನಾಗರಿಕರಿಗೆ ಸಮಾನವಾಗಿ ಅನ್ವಯಿಸುತ್ತದೆ. ಪ್ರಸ್ತುತ, ವಿವಿಧ ಸಮುದಾಯಗಳ ವೈಯಕ್ತಿಕ ಕಾನೂನುಗಳು ಅವರ ಧಾರ್ಮಿಕ ಗ್ರಂಥಗಳಿಂದ ನಿಯಂತ್ರಿಸಲ್ಪಡುತ್ತವೆ. ವೈಯಕ್ತಿಕ ಕಾನೂನುಗಳು ಮದುವೆ, ವಿಚ್ಛೇದನ, ಉತ್ತರಾಧಿಕಾರ, ದತ್ತು ಮತ್ತು ನಿರ್ವಹಣೆಯನ್ನು ಒಳಗೊಳ್ಳುತ್ತವೆ .

ಇದನ್ನೂ ಓದಿ:-Karwar ಅರಬ್ಬಿ ಸಮುದ್ರದಲ್ಲಿ ಮುಳುಗಿದ ಬೋಟ್ ಎಂಟು ಜನ ಮೀನುಗಾರರ ರಕ್ಷಣೆ.
ಈ ಹಿಂದೆ ಈ ಸಂಹಿತೆಯನ್ನು ಜಾರಿಗೆ ತರಲು ಮುಂದಾದಾಗ ಪರ ವಿರೋಧ ಚರ್ಚೆಗಳು ಜೋರಾಗಿದ್ದು ಹಲವು ರಾಜ್ಯದ ಸರ್ಕಾರಗಳು ವಿರೋಧಿಸಿದ್ದವು. ಮುಖ್ಯವಾಗಿ ಕಾಂಗ್ರೆಸ್ ಇದನ್ನು ವಿರೋಧ ಮಾಡುತ್ತಾ ಬಂದಿದೆ.

ಏಕರೂಪದ ನಗರೀಕ ಸಂಹಿತೆಯಲ್ಲಿ ಏನಿದೆ?
ಮದುವೆ ಮತ್ತು ವಿಚ್ಛೇದನ: ಈ ಕಾಯಿದೆಯು ಪುರುಷರು ಮತ್ತು ಮಹಿಳೆಯರಿಗೆ (ಕ್ರಮವಾಗಿ 21 ಮತ್ತು 18 ವರ್ಷಗಳು) ಮದುವೆಯ ಕಾನೂನುಬದ್ಧ ವಯಸ್ಸನ್ನು ಪ್ರಮಾಣೀಕರಿಸುತ್ತದೆ ಮತ್ತು ಎಲ್ಲಾ ಧರ್ಮಗಳಲ್ಲಿ ವಿಚ್ಛೇದನಕ್ಕೆ ಏಕರೂಪದ ಆಧಾರಗಳು ಮತ್ತು ಕಾರ್ಯವಿಧಾನಗಳನ್ನು ಕಡ್ಡಾಯಗೊಳಿಸುತ್ತದೆ.
ಬಹುಪತ್ನಿತ್ವ ನಿಷೇಧ: ಯುಸಿಸಿ ಅನ್ವಯವಾಗುವ ಸಮುದಾಯಗಳಲ್ಲಿ ಬಹುಪತ್ನಿತ್ವವನ್ನು ನಿಷೇಧಿಸಲಾಗಿದೆ.
ವಿವಾಹ ನೋಂದಣಿ: ಕಾಯ್ದೆ ಜಾರಿಯಾದ ನಂತರ ನಡೆಸುವ ವಿವಾಹಗಳನ್ನು 60 ದಿನಗಳ ಒಳಗೆ ನೋಂದಾಯಿಸಬೇಕು, ಪ್ರಕ್ರಿಯೆಯನ್ನು ಸರಳಗೊಳಿಸಲು ಆನ್‌ಲೈನ್ ಸೌಲಭ್ಯಗಳು ಉತ್ತರಾಖಾಂಡ ಸರ್ಕಾರ ವದಗಿಸಿದೆ.
ಇದನ್ನೂ ಓದಿ:-Honnavara ಗರ್ಭಧರಿಸಿದ್ದ ಗೋಹತ್ಯೆ ಮಾಡಿದ್ದ ಓರ್ವ ಆರೋಪಿ ಬಂಧನ ! ಕೆಂಡ ಹಿಡಿದು ನಿಂತವರ ಸುತ್ತಾ ಹಲವು ಪ್ರಶ್ನೆ? ಏನದು
ಲಿವ್-ಇನ್ ಸಂಬಂಧಗಳು: ಮದುವೆಯಂತೆ ಲಿವ್-ಇನ್ ಸಂಬಂಧ ನೋಂದಣಿ ಕಡ್ಡಾಯ. ಇದು ಉತ್ತರಾಖಂಡದಲ್ಲಿ ನೆಲೆಸಿರುವ ಅಥವಾ ಅನ್ಯ ರಾಜ್ಯಗಳಲ್ಲಿ ನೆಲೆಸಿರುವ ಉತ್ತರಾಖಂಡ ಮೂಲದವರಿಗೆ ಅನ್ವಯ. ಇದರಡಿ ಇಬ್ಬರ ಹೆಸರು, ವಯಸ್ಸಿನ ಸಾಕ್ಷಿ, ದೇಶ, ಧರ್ಮ, ಹಿಂದಿನ ಸಂಬಂಧ, ಸಂಪರ್ಕ ಸಂಖ್ಯೆ ಕುರಿತ ಮಾಹಿತಿಯನ್ನು ನೀಡಬೇಕು. ಇಂತಹ ಸಂಬಂಧದಿಂದ ಮಗು ಜನಿಸಿದರೆ ಜನನ ಪ್ರಮಾಣ ಪತ್ರ ದೊರೆತ 7 ದಿನಗಳೊಳಗಾಗಿ ಕಡ್ಡಾಯವಾಗಿ ನೋಂದಣಿ ಮಾಡಿಸಬೇಕಾಗುತ್ತದೆ.
ಉತ್ತರಾಧಿಕಾರ ಉಯಿಲುಗಳು: ಉಯಿಲು ಬರೆಯುವವರು ತಮ್ಮ ಹಾಗೂ ಉತ್ತರಾಧಿಕಾರಿಯ ಆಧಾರ್ ಮಾಹಿತಿ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ನೀಡಬೇಕು. 2 ಸಾಕ್ಷಿಗಳು ಉಯಿಲು ಪತ್ರವನ್ನು ಓದುವ ವಿಡಿಯೋವನ್ನೂ ಅಪ್‌ಲೋಡ್ ಮಾಡಬೇಕಾಗುತ್ತದೆ.
ಯುದ್ಧದಲ್ಲಿ ಭಾಗವಹಿಸಿದ ಸೈನಿಕರು, ವಾಯುಪಡೆಯ ಸಿಬ್ಬಂದಿ ಮತ್ತು ನಾವಿಕರು ವಿಶೇಷ ನಿಬಂಧನೆಗಳ ಅಡಿಯಲ್ಲಿ ವಿಶೇಷ ಸವಲತ್ತು ಪಡೆದ ವಿಲ್‌ಗಳನ್ನು ರಚಿಸಲು ಅನುಮತಿ ಇದೆ.
ಗೋವಾದಲ್ಲಿದೆ ಯುಸಿಸಿ: ಸ್ವಾತಂತ್ರ್ಯಾನಂತರ ದೇಶದಲ್ಲಿ ಯುಸಿಸಿಯನ್ನು ಜಾರಿಗೊಳಿಸಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಉತ್ತರಾಖಂಡ ಪಾತ್ರವಾದರೆ ಸ್ವಾತಂತ್ರ್ಯಪೂರ್ವದಲ್ಲಿ ಪೋರ್ಚುಗೀಸ್ ಕಾಲದಲ್ಲಿಯೇ ಗೋವಾದಲ್ಲಿ ಯುಸಿಸಿ ಜಾರಿಯಾಗಿತ್ತು.
ಪೋರ್ಚುಗೀಸ್ ಸಿವಿಲ್ ಕೋಡ್-1867ರ ಪ್ರಕಾರ ಪೋರ್ಚುಗೀಸ್ ಆಳ್ವಿಕೆ ವಿಮೋಚನೆಯ ನಂತರ, ಗೋವಾ, ದಮನ್ ಮತ್ತು ದಿಯು ಆಡಳಿತ ಕಾಯಿದೆ-1962ರ ಸೆಕ್ಷನ್ 5(1) ರ ಮೂಲಕ ಈಗಲೂ ಮುಂದುವರೆದಿದೆ.
ಏಕರೂಪ ನಾಕರೀಕ ಸಂಹಿತೆ ಜಾರಿ ಏಕೆ ಮಹತ್ವದ್ದಾಗಿದೆ ?(Uniform Civil Code)
ಏಕರೂಪ ನಾಕರಿಕ ಸಂಹಿತೆಯು ಏಕರೂಪದ ಕಾನೂನು ಜಾರಿಗೆ ಪ್ರಯತ್ನಿಸುತ್ತದೆ. ಈ ಮೂಲಕ ಸಮಾನತೆ ಉತ್ತೇಜಿಸುವುದು ಮತ್ತು ರಾಷ್ಟ್ರೀಯ ಏಕೀಕರಣ ಉತ್ತೇಜಿಸುವ ಗುರಿ ಹೊಂದಿದೆ. ಅಂದಹಾಗೆ ಇದೀಗ ಇರುವ, ಪ್ರಸ್ತುತ ಹಿಂದೂ ವಿವಾಹ ಕಾಯ್ದೆ, ಶರಿಯತ್ ಕಾನೂನು & ಕ್ರಿಶ್ಚಿಯನ್ ವಿವಾಹ ಕಾಯ್ದೆಗಳ ರೀತಿ ವೈವಿಧ್ಯಮಯ ಧಾರ್ಮಿಕ ಕಾನೂನುಗಳಿಂದ ನಿಯಂತ್ರಿಸಲ್ಪಡುತ್ತದೆ. ಯುಸಿಸಿ ಅಂತಿಮ ಗುರಿ ಸಮಾನತೆಯನ್ನು ಖಾತ್ರಿಪಡಿಸುವುದು ಆಗಿದೆ.
ಇದನ್ನೂ ಓದಿ:-Kumta ಬಿಜೆಪಿ ಮಹಿಳಾ ಮೋರ್ಚ ಅಧ್ಯಕ್ಷೆ ಜಯಪ್ರಕಾಶ್ ಶೇಟ್ ನಿಂದ ವಂಚನೆ -ಕೋರ್ಟ ನಿಂದ ಜಾಮೀನು ರಹಿತ ಬಂಧನ ವಾರೆಂಟ್ ಜಾರಿ.
ಏಕರೂಪ ನಾಗರಿಕ ಸಂಹಿತೆ ಏನೆಲ್ಲಾ ಒಳಗೊಂಡಿದೆ
ಎಲ್ಲಾ ಸಮುದಾಗಳಲ್ಲೂ ಎರಡು ಮದುವೆ ಪದ್ಧತಿಗೆ ನಿಷೇಧ ಇರಲಿದೆ.
ತ್ರಿವಳಿ ತಲಾಖ್, ಒತ್ತಾಯ ಪೂರ್ವಕ ಅಥವಾ ಕಾನೂನು ಬಾಹಿರ ವಿಚ್ಛೇದನದಂತಹ ಅಮಾನವೀಯ ಆಚರಣೆಗಳನ್ನು ನಿಷೇಧಿಸಲಾಗಿದೆ.
ಶಾಸ್ತ್ರೋಕ್ತವಾಗಿ ನಡೆಯುವ ಹಾಗೂ ಸಂಪ್ರದಾಯ ಬದ್ಧವಾಗಿ ನಡೆಯುವ ವಿವಾಹಗಳನ್ನು ಕಾನೂನು ಬದ್ಧ ಎಂದು ಪರಿಗಣಿಸಲಾಗುತ್ತದೆ.
ವಿವಾಹಗಳ ಕಡ್ಡಾಯ ನೋಂದಣಿ
ವಿವಾಹವಾದ ತಕ್ಷಣ ದಂಪತಿಗಳು ವಿವಾಹವನ್ನು ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ.
ವಿವಾಹ ನೋಂದಣಿಗೆ ವಿಫಲವಾದರೆ 25,000 ರೂಪಾಯಿ ದಂಡ ವಿಧಿಸಲಾಗುತ್ತದೆ.
ಸಹಬಾಳ್ವೆ ಸಂಬಂಧಗಳನ್ನು ನೋಂದಾಯಿಸದಿದ್ದರೆ ಜೈಲು ಶಿಕ್ಷೆಗೆ ಗುರಿಯಾಗಬಹುದು.
ವಿವಾಹಗಳಲ್ಲಿ ವಂಚನೆ ಅಥವಾ ಎರಡು ಮದುವೆ ಆಗುವುದನ್ನು ತಡೆಗಟ್ಟಲು ನೋಂದಣಿ ದಾಖಲೆಗಳನ್ನು ಸಾರ್ವಜನಿಕವಾಗಿಡಬಹುದು.
ಮಕ್ಕಳ ಪಾಲನೆ ಹಾಗೂ ಪೋಷಣೆ
ಮಗುವಿನ ತಂದೆ ಎನಿಸಿಕೊಂಡವರು ಕಾನೂನುಬದ್ಧ ಪೋಷಕ ಸ್ಥಾನವನ್ನು ಹೊಂದಿರುತ್ತಾರೆ. ತಾಯಿ ಎನಿಸಿಕೊಂಡವರು ಪಾಲಕರ ಸ್ಥಾನವನ್ನು ಹೊಂದಬಹುದಾಗಿದೆ.
ಸಾಮಾನ್ಯವಾಗಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಪಾಲನೆಯನ್ನು ತಾಯಂದಿರಿಗೆ ನೀಡಲಾಗುತ್ತದೆ.
ಸಹಬಾಳ್ವೆ ಅಥವಾ ಕಾನೂನುಬಾಹಿರ ಸಂಬಂಧಗಳಲ್ಲಿ ಜನಿಸಿದ ಎಲ್ಲಾ ಮಕ್ಕಳಿಗೂ ಸಮಾನ ಅನುವಂಶಿಕ ಹಕ್ಕುಗಳು ಸಿಗಲಿವೆ.
ದತ್ತು ನಿಯಮಾವಳಿ.
ಹಿಂದೂ ದತ್ತು ಮತ್ತು ನಿರ್ವಹಣೆ ಕಾಯ್ದೆ ಹಾಗೂ ಬಾಲ ನ್ಯಾಯ ಕಾಯ್ದೆಗಳನ್ನು ದತ್ತು ನಿಯಮಾವಳಿಗಳಿಗೆ ಮಾರ್ಗದರ್ಶಕವಾಗಿ ಇರುವುದನ್ನು ಮುಂದುವರಿಸಲಾಗುತ್ತದೆ.
ಏಕರೂಪ ನಾಗರಿಕ ಸಂಹಿತೆಯು ಹಿಂದೂಗಳ ದತ್ತು ನೋಂದಣಿಯನ್ನು ಕಡ್ಡಾಯಗೊಳಿಸುವುದಿಲ್ಲ.
ವೈಯಕ್ತಿಕ ಕಾನೂನು ಹಾಗೂ ಪದ್ಧತಿಗಳು
ಮರು ಮದುವೆಗೆ ಷರತ್ತುಗಳನ್ನು ವಿಧಿಸುವ ಹಳೆಯ ಪದ್ದತಿಗಳನ್ನು ಈ ಮಸೂದೆಯ ಮೂಲಕ ಕಾನೂನು ಬಾಹಿರಗೊಳಿಸುತ್ತದೆ.
ಪಂಚಾಯತಿಗಳಲ್ಲಿ ನಿರ್ಧರಿಸಲಾಗುವ ವಿಚ್ಛೇದನದಂತಹ ಸ್ಥಳೀಯ ಕಾನೂನುಗಳನ್ನು ರದ್ದು ಮಾಡಲಾಗುತ್ತದೆ.
ವಿವಾಹ ವಿಚ್ಛೇದನದಂತಹ ಸಂದರ್ಭಗಳಲ್ಲಿ ಜೀವನ ನಿರ್ವಹಣೆಗೆ ಜೀವನಾಂಶವನ್ನು ನೀಡುವ ಕಾನೂನನ್ನು ಈ ಮಸೂದೆಯು ಎತ್ತಿಹಿಡಿಯುತ್ತದೆ.
ಹೆಚ್ಚಿನ ಕಣ್ಗಾವಲು ಹಾಗೂ ದಂಡಗಳಂತಹ ಕ್ರಮಗಳು
ಅಲ್ಪಸಂಖ್ಯಾತ ಸಮುದಾಯಗಳ ವಿರುದ್ಧ ಬಹುಸಂಖ್ಯಾತ ಸಮುದಾಯಗಳು ನಡೆಸುವ ದಬ್ಬಾಳಿಕೆಗಳನ್ನು ಕ್ರಿಮಿನಲ್ ಕಾನೂನುಗಳ ವ್ಯಾಪ್ತಿಯಲ್ಲಿ ತರಲಾಗುತ್ತದೆ.
ಧಾರ್ಮಿಕ ಹಾಗೂ ಸಾಂಸ್ಕೃತಿಕ ಆಚರಣೆಗಳ ಮೇಲೆ ಏಕರೂಪ ನಾಕರಿಕ ಸಂಹಿತೆಯು ಪರಿಣಾಮ ಬೀರಬಹುದು ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.
ಸಧ್ಯ ಪರ ವಿರೋಧದ ಚರ್ಚೆ ನಡುವೆ ಇದೀಗ ಉತ್ತರಾಖಾಂಡ್ ಬಿಜೆಪಿ ಸರ್ಕಾರ ಈ ನಿಯಮ ಜಾರಿಮಾಡಿದೆ.