ಶಿರೂರು ಶೋಧ| ನಾಲ್ಕನೇ ಪಾಯಂಟ್ ನಲ್ಲಿದೆ ಅರ್ಜುನ್ ಲಾರಿ!
ಅಂಕೋಲ:- ಉತ್ತರ ಕನ್ನಡ ಜಿಲ್ಲೆಯ ಶಿರೂರಿನ ಭೂ ಕುಸಿತ ಪ್ರದೇಶದಲ್ಲಿ ಮೂರನೇ ಹಂತದ ನಾಲ್ಕನೇ ದಿನದ ಶೋಧ ಕಾರ್ಯ ಮುಂದುವರೆದಿದ್ದು ಇಂದು ತಮಿಳುನಾಡು ಮೂಲದ ಗ್ಯಾಸ್ ಟ್ಯಾಂಕರ್ ನ ಹಿಂಭಾಗದ ಚಕ್ರಗಳನ್ನು ಹೊರತೆಗೆಯಲಾಗಿದ್ದು ಕೇರಳ ಮೂಲದ ಅರ್ಜುನ್ ರವರ ಲಾರಿಯಲ್ಲಿದ್ದ ಕಟ್ಟಿಗೆ ತುಂಡು ಸಹ ದೊರತಿದೆ.
ಇದಲ್ಲದೇ ದೆಹಲಿಯಿಂದ ದ್ರೋಣ ತಜ್ಞ ಕ್ಯಾಪ್ಟನ್ ಇಂದ್ರಬಾಲನ್ ಸಹ ಸ್ಥಳಕ್ಕೆ ಭೇಟಿ ನೀಡಿದ್ದು ಈ ಹಿಂದೆ ನಾಲ್ಕು ಕಡೆಗಳಲ್ಲಿ ಮೆಟಲ್ ಡಿಟೆಕ್ಟ್ ಮಾಡಿದ್ದರು. ಈ ಹಿಂದೆ ಗುರುತಿಸಿದ ಮೂರು ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿ ಕೆಲವು ವಸ್ತುಗಳನ್ನು ಹೊರತೆಗೆಯಲಾಗಿದ್ದು ನಾಲ್ಕನೇ ಪಾಯಿಂಟ್ ನಲ್ಲಿ ಅರ್ಜುನ್ ಲಾರಿ ಇದ್ದು ಈವರೆಗೂ ಶೋಧ ಕಾರ್ಯ ಆ ಭಾಗದಲ್ಲಿ ನಡೆಸಿಲ್ಲ.
ಇದನ್ನೂ ಓದಿ:- Shirur ಶೋಧ | ನದಿಯಲ್ಲಿ ಸಿಕ್ಕ ಮೂಳೆ ಯಾವುದು ಗೊತ್ತಾ?
ಲಾರಿಯು ನದಿಯ ನೀರಿನ ಮಟ್ಟದಿಂದ ಐದು ಫೀಟ್ ಕೆಳಗಿದ್ದು ಲಾರಿಯ ಮೇಲ್ಭಾಗ ಮಣ್ಣು ದೊಡ್ಡ ಕಲ್ಲುಗಳಿಂದ ಕೂಡಿದೆ. ಹೀಗಾಗಿ ಈಗಿರುವ ಡ್ರಜ್ಜಿಂಗ್ ಮಿಷನ್ ಸಾಮರ್ಥ್ಯ ನೋಡಿ ಕಾರ್ಯಾಚರಣೆ ನಡೆಸಲಾಗುವುದೆಂದು ಕ್ಯಾಪ್ಟನ್ ಇಂದ್ರಬಾಲನ್ ತಿಳಿಸಿದ್ದಾರೆ.