Shirur| ಸಿಕ್ಕ ಮೂಳೆಗೆ ಹೆಚ್ಚಿನ ಕೆಮಿಕಲ್ ವೈದ್ಯ ಸಿಬ್ಬಂದಿ ಎಡವಟ್ಟು ಸಿಗುತ್ತಿಲ್ಲ DNA Report !
ಅಂಕೋಲ :- ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಶಿರೂರಿನ ಮೂರನೇ ಹಂತದ ಶೋಧ ಕಾರ್ಯದಲ್ಲಿ ಗಂಗಾವಳಿ ನದಿಯಲ್ಲಿ ಸಿಕ್ಕ ಮನುಷ್ಯನ ಎದೆ ಹಾಗೂ ಕೈಯ ಮೂಳೆಗಳನ್ನು DNA ವರದಿಗೆ ಕಳಿಸುವಾಗ ಅಂಕೋಲದ ವೈದ್ಯ ಸಿಬ್ಬಂದಿ ಎಡವಟ್ಟಿನಿಂದಾಗಿ ಕೆಮಿಕಲ್ ಹೆಚ್ಚಿನ ಪ್ರಮಾಣದಲ್ಲಿ ಹಾಕಿದ್ದು ಇದೀಗ ಐದು ದಿನ ಕಳೆದ್ರೂ ಡಿಎನ್ ಎ ವರದಿ ಸಿಗದಂತಾಗಿದೆ.
ಇದನ್ನೂ ಓದಿ:-Shirur ಭೂ ಕುಸಿತ ದುರಂತ| ಕೇರಳದ ಮೃತ ಅರ್ಜುನ್ ಲಾರಿ ಮಾಲೀಕ ಮುನಾಫ್ ವಿರುದ್ಧ ಪ್ರಕರಣ ದಾಖಲು.
ಭೂ ಕುಸಿತದಲ್ಲಿ ಮೃತಪಟ್ಟ ಜಗನ್ನಾಥ್ ನಾಯ್ಕ ಹಾಗೂ ಲೋಕೇಶ್ ರವರ ಕುಟುಂಬ ಮೂಳೆ ಸಿಕ್ಕಿದ್ದರಿಂದ ತಮ್ಮವರ ಗುರುತು ಪತ್ತೆಯಾಗಬಹುದು ಎಂದು ಆಶಾಭಾವನೆಯಲ್ಲಿ ಕಾದು ಕುಳಿತಿದ್ದರು .ಆದ್ರೆ ಇದೀಗ DNA ಗೆ ಕಳುಹಿಸಿ ಐದು ದಿನಗಳು ಕಳೆದಿದ್ದು ಕೆಮಿಕಲ್ ಹೆಚ್ಚಿನ ಪ್ರಮಾಣದಲ್ಲಿ ಹಾಕಿದ್ದರಿಂದ ವರದಿ ವಿಳಂಬವಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಇದನ್ನೂ ಓದಿ:-Shirur ಶೋಧ ಕಾರ್ಯಾಚರಣೆ| ಕಾರ್ಯ ನಿಲ್ಲಿಸಿದ ಡ್ರಜ್ಜಿಂಗ್ ಬಾರ್ಜ -ಮುಳುಗಿದ ಈಜು ತಜ್ಞರು!
ಸದ್ಯ DNA ವರದಿಗಾಗಿ ಹುಬ್ಬಳ್ಳಿ ಕಿಮ್ಸ್ ಗೆ ರವಾನೆ ಮಾಡಲಾಗಿದೆ. ಆದ್ರೆ ಇದೀಗ ಕೆಮಿಕಲ್ ಹೆಚ್ಚು ಹಾಕಿದ್ದರಿಂದ ಅಕ್ಟೋಬರ್ 30 ರಂದು ಕಳುಹಿಸಿದ ಮೂಳೆಗಳ DNA ವರದಿ ಏನಾಗುತ್ತೋ ಎನ್ನುವ ಆತಂಕ ಸಹ ಎದುರಾಗಿದೆ.