For the best experience, open
https://m.kannadavani.news
on your mobile browser.
Advertisement

Shirur ರಾತ್ರಿಯೂ ನಡೆದ ಕಾರ್ಯಾಚರಣೆ ಇಡೀದಿನ ಸಿಕ್ಕ ವಸ್ತುಗಳೇನು ವಿವರ ಇಲ್ಲಿದೆ.

ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ಅಂಕೋಲದ (ankola) ಶಿರೂರಿನ ಭೂ ಕುಸಿತ ಪ್ರದೇಶದ ಗಂಗಾವಳಿ ನದಿ ಭಾಗದಲ್ಲಿ ದುರಂತದಲ್ಲಿ ಕಾಣೆಯಾದವರ ಶವ ಶೋಧ ಕಾರ್ಯ ನಾಲ್ಕನೇ ದಿನವೂ ರಾತ್ರಿಯವರೆಗೂ ಶೋಧ ಕಾರ್ಯ ನಡೆಸಲಾಯಿತು.
11:05 PM Sep 23, 2024 IST | ಶುಭಸಾಗರ್
shirur ರಾತ್ರಿಯೂ ನಡೆದ ಕಾರ್ಯಾಚರಣೆ ಇಡೀದಿನ ಸಿಕ್ಕ ವಸ್ತುಗಳೇನು ವಿವರ ಇಲ್ಲಿದೆ

ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ಅಂಕೋಲದ (ankola) ಶಿರೂರಿನ ಭೂ ಕುಸಿತ ಪ್ರದೇಶದ ಗಂಗಾವಳಿ ನದಿ ಭಾಗದಲ್ಲಿ ದುರಂತದಲ್ಲಿ ಕಾಣೆಯಾದವರ ಶವ ಶೋಧ ಕಾರ್ಯ ನಾಲ್ಕನೇ ದಿನವೂ ರಾತ್ರಿಯವರೆಗೂ ಶೋಧ ಕಾರ್ಯ ನಡೆಸಲಾಯಿತು.

Advertisement

ಇದನ್ನೂ ಓದಿ:-Karwar|ನಗರಸಭೆ ವಾರ್ಡ ಗೆ ರಸ್ತೆ ಇಲ್ಲ ಕಟ್ಟಿಗೆ ಕಂಬಕ್ಕೆ ಶವ ಕಟ್ಟಿ ಹೊತ್ತ ವಾರ್ಡ ಜನ

ಇಂದು ಶೋಧ ಕಾರ್ಯದಲ್ಲಿ ತಮಿಳುನಾಡು ಮೂಲದ ಗ್ಯಾಸ್ ಟ್ಯಾಂಕರ್ ಇಂಜಿನ್ ಭಾಗಗಳು ,ಹಿಂಭಾಗದ ಟಯರ್ ಗಳು ,ಹೈಪವರ್ ಲೈನ್ ನ ತುಂಡಾದ ಕಂಬಗಳು,ಲಾರಿಯ ವೈಫರ್ ,ಕಬ್ಬಿಣದ ಕೆಲವು ತುಂಡುಗಳು, ಕೆಲವು ಬಟ್ಟೆಗಳು ದೊರೆತಿವೆ.

Shiruru news

Shiruru ankola

Shiruru newsಇಂದ್ರಬಾಲನ್ ರಿಂದ ಕಾರ್ಯಾಚರಣೆ.

Kannadavani news fatafat news ದೆಹಲಿಯಿಂದ ಆಗಮಿಸಿದ ದ್ರೋಣ್ ತಜ್ಞ ಕ್ಯಾಪ್ಟನ್ ಇಂದ್ರಬಾಲನ್ ಈ ಹಿಂದೆ ಗುರುತಿಸಿಸ ಮೂರು ಭಾಗಗಳಲ್ಲಿ ಶೋಧ ನಡೆಸಿದ್ದು ,ಕೆಲವು ಅವಶೇಷ ಹೊರತೆಗೆಯಲಾಗಿದೆ. ಆದರೇ ನಾಲ್ಕನೇ ಭಾಗದಲ್ಲಿ ನಾಳೆಯಿಂದ ಶೋಧ ಕಾರ್ಯ ಪ್ರಾರಂಭವಾಗಲಿದ್ದು ಇಂದು ಈ ಹಿಂದೆ ಗುರುತಿಸಿದ ನಾಲ್ಕನೇ ಭಾಗದಲ್ಲಿ ಥರ್ಮಲ್ ರ್ಯಾಡರ್ ಮೂಲಕ ದೋಣಿಯಲ್ಲಿ ಸಾಗಿ ಮತ್ತೊಮ್ಮೆ ಪರಿಶೀಲನೆ ನಡೆಸಿದ್ದು ನಾಳೆ ಇದೇ ಭಾಗದಲ್ಲಿ ಡ್ರಜ್ಜಿಂಗ್ ಬಾರ್ಜ ನಿಂದ ಹಾಗೂ ಮುಳುಗು ತಜ್ಞರಿಂದ ಶೋಧ ಕಾರ್ಯ ನಡೆಯಲಿದೆ. 

ಹಣದ ಕೊರತೆ ಇಲ್ಲ- ಶಾಸಕ ಸತೀಶ್ ಸೈಲ್.

ಗೋವಾ ದಿಂದ ಆಗಮಿಸಿದ ಡ್ರಜ್ಜಿಂಗ್ ಬಾರ್ಜ ಕೆಲಸ ಮಾಡಲು ಯಾವುದೇ ಹಣದ ಸಮಸ್ಯೆ ಇಲ್ಲ ,ನಾನು ದಾನಿಗಳಿಂದ ಹಣ ಕೊಡಿಸಿದ್ದು ,ನನ್ನ ಶಾಸಕ ನಿಧಿ ,ಶಿರಸಿ ಶಾಸಕ ಭೀಮಣ್ಣ ನಾಯ್ಕ ,ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಶಾಸಕ ನಿಧಿಯಿಂದ ತಲಾ 10 ಲಕ್ಷ ನೀಡಲಾಗಿದೆ. ಇನ್ನೂ ಹೆಚ್ಚಿನ ಸಮಯ ಹಿಡಿದರೂ ಶೋಧ ಕಾರ್ಯಕ್ಕೆ ಹಣದ ಕೊರತೆ ಇಲ್ಲ, ನಾನು ಈ ಹಿಂದೆ ಹೇಳಿದ ಭಾಗದಲ್ಲಿ ಡ್ರಜ್ಜಿಂಗ್ ಬಾರ್ಜ ಕಾರ್ಯ ನಿರ್ವಹಿಸಿ ಹಲವು ವಸ್ತುಗಳನ್ನು ಶೋಧಿಸಿ ಹೊರತೆಗೆದಿದೆ. ಸರ್ಕಾರದಿಂದ ಪೂರ್ಣ ಸಹಕಾರ ನೀಡಲಾಗುತ್ತದೆ ಎಂದರು.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ