Shirur ರಾತ್ರಿಯೂ ನಡೆದ ಕಾರ್ಯಾಚರಣೆ ಇಡೀದಿನ ಸಿಕ್ಕ ವಸ್ತುಗಳೇನು ವಿವರ ಇಲ್ಲಿದೆ.
ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ಅಂಕೋಲದ (ankola) ಶಿರೂರಿನ ಭೂ ಕುಸಿತ ಪ್ರದೇಶದ ಗಂಗಾವಳಿ ನದಿ ಭಾಗದಲ್ಲಿ ದುರಂತದಲ್ಲಿ ಕಾಣೆಯಾದವರ ಶವ ಶೋಧ ಕಾರ್ಯ ನಾಲ್ಕನೇ ದಿನವೂ ರಾತ್ರಿಯವರೆಗೂ ಶೋಧ ಕಾರ್ಯ ನಡೆಸಲಾಯಿತು.
ಇದನ್ನೂ ಓದಿ:-Karwar|ನಗರಸಭೆ ವಾರ್ಡ ಗೆ ರಸ್ತೆ ಇಲ್ಲ ಕಟ್ಟಿಗೆ ಕಂಬಕ್ಕೆ ಶವ ಕಟ್ಟಿ ಹೊತ್ತ ವಾರ್ಡ ಜನ
ಇಂದು ಶೋಧ ಕಾರ್ಯದಲ್ಲಿ ತಮಿಳುನಾಡು ಮೂಲದ ಗ್ಯಾಸ್ ಟ್ಯಾಂಕರ್ ಇಂಜಿನ್ ಭಾಗಗಳು ,ಹಿಂಭಾಗದ ಟಯರ್ ಗಳು ,ಹೈಪವರ್ ಲೈನ್ ನ ತುಂಡಾದ ಕಂಬಗಳು,ಲಾರಿಯ ವೈಫರ್ ,ಕಬ್ಬಿಣದ ಕೆಲವು ತುಂಡುಗಳು, ಕೆಲವು ಬಟ್ಟೆಗಳು ದೊರೆತಿವೆ.
ಇಂದ್ರಬಾಲನ್ ರಿಂದ ಕಾರ್ಯಾಚರಣೆ.
ಹಣದ ಕೊರತೆ ಇಲ್ಲ- ಶಾಸಕ ಸತೀಶ್ ಸೈಲ್.
ಗೋವಾ ದಿಂದ ಆಗಮಿಸಿದ ಡ್ರಜ್ಜಿಂಗ್ ಬಾರ್ಜ ಕೆಲಸ ಮಾಡಲು ಯಾವುದೇ ಹಣದ ಸಮಸ್ಯೆ ಇಲ್ಲ ,ನಾನು ದಾನಿಗಳಿಂದ ಹಣ ಕೊಡಿಸಿದ್ದು ,ನನ್ನ ಶಾಸಕ ನಿಧಿ ,ಶಿರಸಿ ಶಾಸಕ ಭೀಮಣ್ಣ ನಾಯ್ಕ ,ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಶಾಸಕ ನಿಧಿಯಿಂದ ತಲಾ 10 ಲಕ್ಷ ನೀಡಲಾಗಿದೆ. ಇನ್ನೂ ಹೆಚ್ಚಿನ ಸಮಯ ಹಿಡಿದರೂ ಶೋಧ ಕಾರ್ಯಕ್ಕೆ ಹಣದ ಕೊರತೆ ಇಲ್ಲ, ನಾನು ಈ ಹಿಂದೆ ಹೇಳಿದ ಭಾಗದಲ್ಲಿ ಡ್ರಜ್ಜಿಂಗ್ ಬಾರ್ಜ ಕಾರ್ಯ ನಿರ್ವಹಿಸಿ ಹಲವು ವಸ್ತುಗಳನ್ನು ಶೋಧಿಸಿ ಹೊರತೆಗೆದಿದೆ. ಸರ್ಕಾರದಿಂದ ಪೂರ್ಣ ಸಹಕಾರ ನೀಡಲಾಗುತ್ತದೆ ಎಂದರು.