For the best experience, open
https://m.kannadavani.news
on your mobile browser.
Advertisement

Ankola| ನಿವೃತ್ತ ನೌಕರನ ಮನೆ ಕಳ್ಳತನ ನಗ ನಾಣ್ಯಲೂಟಿ

Ankola:ಅಂಕೋಲಾ ತಾಲೂಕಿನಲ್ಲಿ ನಿರಂತರ ಕಳ್ಳತನ (Theft) ಪ್ರಕರಣಗಳು ನಡೆಯುತ್ತಿದ್ದು, ಮನೆ ಬಿಟ್ಟು ತೆರಳಿದರೆ ಕಳ್ಳತನ ಫಿಕ್ಸ್ ಎಂಬ ಭಾವನೆ ಅಂಕೋಲಿಗರದ್ದಾಗಿದೆ
12:35 PM Sep 30, 2024 IST | ಶುಭಸಾಗರ್
ankola  ನಿವೃತ್ತ ನೌಕರನ ಮನೆ ಕಳ್ಳತನ ನಗ ನಾಣ್ಯಲೂಟಿ

Ankola:ಅಂಕೋಲಾ ತಾಲೂಕಿನಲ್ಲಿ ನಿರಂತರ ಕಳ್ಳತನ (Theft) ಪ್ರಕರಣಗಳು ನಡೆಯುತ್ತಿದ್ದು, ಮನೆ ಬಿಟ್ಟು ತೆರಳಿದರೆ ಕಳ್ಳತನ ಫಿಕ್ಸ್ ಎಂಬ ಭಾವನೆ ಅಂಕೋಲಿಗರದ್ದಾಗಿದೆ.

Advertisement

ಹೀಗೆ ಎಂಬಂತೆ ಪಟ್ಟಣದ ಕೇಣಿ ರಸ್ತೆಯಲ್ಲಿರುವ ಕಲಭಾಗದಲ್ಲಿ ನಿವೃತ್ತ ಸರಕಾರಿ ನೌಕರರೊಬ್ಬರ ಮನೆಯನ್ನು ಕಳ್ಳರು ಗುಡಿಸಿ ಗುಂಡಾಂತರ ಮಾಡಿದ್ದು ಅಪಾರ ಮೌಲ್ಯದ ಸ್ವತ್ತನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.

ನಿವೃತ್ತ ನೌಕಾರರಾದ ಮೋಹನ ನಾರಾಯಣ ನಾಯಕ ಸೆ.28 ರಂದು ವೈದ್ಯಕೀಯ ಚಿಕಿತ್ಸೆಗಾಗಿ ಪಕ್ಕದ ಜಿಲ್ಲೆ ಉಡುಪಿಗೆ ತೆರಳಿದ್ದು ಸರಿಸುಮಾರು ಬೆಳಗಿನ 4.30 ಗಂಟೆಯಿಂದ ಸಾಯಂಕಾಲ 7.00 ಗಂಟೆ ನಡುವಿನ ಅವಧಿಯಲ್ಲಿ ಕಳ್ಳತನ ಮಾಡಿರಬಹುದು ಎಂದು ಅಂದಾಜಿಸಲಾಗಿದೆ.

ಎಷ್ಟು ಕಳ್ಳತನ?

ಮನೆಯ ಬಾಗಿಲನ್ನು ಮುರಿದು ಒಳನುಗ್ಗಿದ ಖದೀಮರು ಕಪಾಟಿನ ಬಾಗಲನ್ನು ತೆರೆದು, ಅದರಲ್ಲಿದ್ದ ಅಂದಾಜು ಒಟ್ಟೂ ರೂ 3.60,000 ಮೌಲ್ಯದ 4 ಬಂಗಾರದ ಬಳೆಗಳು (Gold jewel), 1 ಲಕ್ಷ 75 ಸಾವಿರ ಅಂದಾಜು ಮೌಲ್ಯದ ಮಂಗಳ ಸೂತ್ರ ಹಾಗೂ ಇನ್ನೊಂದು ಬೆಡ್ ರೂಮಿನಲ್ಲಿದ್ದ ಲಾಕರ್ ಮುರಿದು  ಅದರಲ್ಲಿ ಇಟ್ಟಿದ್ದ ಬಂಗಾರದ ಆಭರಣಗಳಾದ  1 ಲಕ್ಷ 25 ಸಾವಿರ ಮೌಲ್ಯದ 2 ಮಂಗಳಸೂತ್ರ,  ಬಂಗಾರದ ಕಿವಿಯೋಲೆ 3 ಜೊತೆ ಅಂದಾಜು ಕಿಮ್ಮತ್ತು 75 ಸಾವಿರ ಮತ್ತು ನಗದು ರೂ 50 ಸಾವಿರ ಸೇರಿ ನಗದು ಮತ್ತು ಅಭರಣ ಸೇರಿ ಒಟ್ಟೂ ಅಂದಾಜು 7 ಲಕ್ಷ 80 ಸಾವಿರ ಮೌಲ್ಯದ ಸ್ವತ್ತನ್ನು ಎಗರಿಸಿದ್ದಾರೆ ಎನ್ನಲಾಗಿದೆ.

ನಾಯಕ ದಂಪತಿಗಳು ಮನೆಯಲ್ಲಿ ಇಲ್ಲದನ್ನು ತಿಳಿದು ಕಳ್ಳತನ ಕೃತ್ಯ ಮಾಡಿರಬಹುದೆಂದು ಶಂಕಿಸಿ, ಗೊತ್ತಿರುವವರು ಯಾರೋ ಕಳ್ಳತನ ನಡೆಸಿರಬಹುದೆಂದು ಅಂದಾಜಿಸಲಾಗಿದೆ.

ಇದನ್ನೂ ಓದಿ:-Ration Card |ರೇಷನ್ ಕಾರ್ಡ ಇದ್ದವರು ಸೆ.30ರೊಳಗೆ ಈ ಕೆಲಸ ಮಾಡದಿದ್ರೆ ರೇಷನ್ ಸ್ಥಗಿತ!

ಸ್ಥಳಕ್ಕೆ ಶ್ವಾನದಳ ಮತ್ತು ಬೆರಳಚ್ಚು ತಜ್ಞರ ತಂಡವೂ ಅಗಮಿಸಿ, ಸಾಕ್ಷ್ಯ ಪತ್ತೆಗೆ ಮುಂದಾಗಿದೆ. ಹತ್ತಿರದಲ್ಲಿ ಯಾವುದೇ ಸಿಸಿ ಕ್ಯಾಮರಾಗಳು ಇಲ್ಲದಿದ್ದರಿಂದ ಕಳ್ಳರ ಚಲನವಲನಗಳ ಬಗ್ಗೆ ಯಾವುದೇ ಕುರುಹು ಪತ್ತೆಯಾಗಿಲ್ಲದಿದ್ದರಿಂದ ಕಳ್ಳತನ ಪ್ರಕರಣ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.ಸುದ್ದಿ ತಿಳಿದಂತೆ ತಕ್ಷಣ ಆಗಮಿಸಿದಸ್ಥಳಕ್ಕೆ ಪಿಎಸೈ ಸುಹಾಸ್ ಆರ್ ಸ್ಥಳ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ