Shirur ಶೋಧ ಕಾರ್ಯಾಚರಣೆ| ಕಾರ್ಯ ನಿಲ್ಲಿಸಿದ ಡ್ರಜ್ಜಿಂಗ್ ಬಾರ್ಜ -ಮುಳುಗಿದ ಈಜು ತಜ್ಞರು!
ಅಂಕೋಲ :- ಉತ್ತರ ಕನ್ನಡ ಜಿಲ್ಲೆಯ(Uttra kannda) ಅಂಕೋಲದ (ankola) ಶಿರೂರು ಭೂ ಕುಸಿತ (shiruru landslide )ದುರಂತದ ಮೂರನೇ ಹಂತದ ಶೋಧ ಕಾರ್ಯವು 13 ದಿನ ಪೂರೈಸಿದ ಹಿನ್ನೆಲೆಯಲ್ಲಿ ಡ್ರಜ್ಜಿಂಗ್ ಬೋಟ್ ಮೂಲಕ ನಡೆಸುತಿದ್ದ ಕಾರ್ಯಾಚರಣೆಯನ್ನು ಸ್ಥಗಿತಮಾಡಲಾಗಿದೆ.
ಇದನ್ನೂ ಓದಿ:-Ankola| ಶಿರೂರಿಗೆ ಬಂದಿಳಿದ ಡ್ರಜ್ಜರ್ |ಕಾರ್ಯಾಚರಣೆ ವಿವರ ಇಲ್ಲಿದೆ.
ಕಳೆದ 13 ದಿನದಿಂದ ಅಂಕೋಲದ ಗಂಗಾವಳಿ ನದಿಯಲ್ಲಿ (Gangavali river) ಓಷಿಯನ್ ಕಂಪನಿ ನಿರಂತರ ಕಾರ್ಯಾಚರಣೆ ನಡೆಸಿತ್ತು.
90 ಲಕ್ಷದ ಮೂತ್ತದಲ್ಲಿ 13 ದಿನ ಕಾರ್ಯಾಚರಣೆ ಪೂರ್ಣ ಗೊಂಡಿದ್ದು ಈ 13 ದಿನದ ಕಾರ್ಯಾಚರಣೆಯಲ್ಲಿ ಕೇರಳ ಮೂಲದ ಅರ್ಜುನ್ ಶವ ಹಾಗೂ ಲಾರಿ ಹೊರತೆಗೆದಿದ್ದು ನಂತರ ಮನುಷ್ಯನ ಮೂಳೆಗಳು ಕೆಲವು ವಸ್ತುಗಳನ್ನು ಸಹ ಹೊರತೆಗೆಯಲಾಗಿತ್ತು.
ಇದನ್ನೂ ಓದಿ:-Karwar | ಮೀನು ತುಂಬಿದ ವಾಹನ ಹರಿದು ಕಾರ್ಮಿಕ ಸಾವು
ಇದಾದ ನಂತರ ಗಂಗಾವಳಿ ನದಿಯಲ್ಲಿ ಬಿದ್ದಿದ್ದ ಬೃಹತ್ ಆಲದ ಮರ ಹೊರತೆಗೆಯಲಾಗಿತ್ತು. ಆದರೇ ಇದೀಗ ಡ್ರಜ್ಜಿಂಗ್ ಕಾರ್ಯಾಚರಣೆ ಸ್ಥಗಿತ ಮಾಡಿ ಇದರ ಬದಲಿಗೆ ಇಂದಿನಿಂದ ಇಬ್ಬರು ಮುಳುಗು ತಜ್ಞರು , ಹಾಗೂ ಪೋಕ್ ಲೈನ್ ಮೂಲಕ. ಹೋಟಲ್ ಕುಸಿದುಹೋದ ನಿಗದಿ ಮಾಡಿದ ಎರಡನೇ ಪಾಯಂಟ್ ನಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಭೂ ಕುಸಿತ ದುರಂತದಲ್ಲಿ ಸತತ 77 ದಿನದ ದೀರ್ಘ ಕಾರ್ಯಾಚರಣೆ ಇದಾಗಿದ್ದು ಒಟ್ಟು ಮೂರು ಹಂತದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ.
ಸಧ್ಯ ಸಿಕ್ಕ ಮೂಳೆಗಳ ಡಿ.ಎನ್.ಎ ವರದಿ ಬರಬೇಕಿದ್ದು ಕಾಣೆಯಾದ ಜಗನ್ನಾಥ್ ,ಲೋಕೇಶ್ ಶವ ಶೋಧ ನಡೆಯಬೇಕಿದೆ.
ಇದನ್ನೂ ಓದಿ:-Daily Astrology| ದಿನಭವಿಷ್ಯ 03 actober 2024