For the best experience, open
https://m.kannadavani.news
on your mobile browser.
Advertisement

Shirur|ಕಾರ್ಯಾಚರಣೆ ಇಡೀ ದಿನ ಏನಾಯ್ತು|ಸಿಕ್ಕಿದ್ದೇನು?

ಕಾರವಾರ : ಅಂಕೋಲದ ಶಿರೂರು (shirur) ದುರಂತದಲ್ಲಿ ಕಣ್ಮರೆಯಾದ ಮೂವರಿಗಾಗಿ ಎರಡು ದಿನದಿಂದ ಮೂರನೇ ಹಂತದ ಕಾರ್ಯಾಚರಣೆ ಆರಂಭವಾಗಿದೆ.
11:31 PM Sep 21, 2024 IST | ಶುಭಸಾಗರ್
shirur ಕಾರ್ಯಾಚರಣೆ ಇಡೀ ದಿನ ಏನಾಯ್ತು ಸಿಕ್ಕಿದ್ದೇನು

ಕಾರವಾರ : ಅಂಕೋಲದ ಶಿರೂರು (shirur) ದುರಂತದಲ್ಲಿ ಕಣ್ಮರೆಯಾದ ಮೂವರಿಗಾಗಿ ಎರಡು ದಿನದಿಂದ ಮೂರನೇ ಹಂತದ ಕಾರ್ಯಾಚರಣೆ ಆರಂಭವಾಗಿದೆ.

Advertisement

ಕಳೆದ ಎರಡು ದಿನದಿಂದ ಗೋವಾ (goa) ದಿಂದ ಶಿರೂರಿಗೆ ಆಗಮಿಸಿದ ಡ್ರಜ್ಜಿಂಗ್ ಬೋಟ್ ಮೂಲಕ ಶೋಧ ಕಾರ್ಯ ನಡೆಸಲಾಗುತ್ತಿದೆ. ಮೂರನೇ ಹಂತದ ಕಾರ್ಯಾಚರಣೆ ವೇಳೆ ಮಲ್ಪೆಯ ಈಶ್ವರ್ ರವರು ಗಂಗಾವಳಿ ನದಿಯಲ್ಲಿ ಮುಳುಗಿ ಲಾರಿಯ ಬಿಡಿಭಾಗಗಳನ್ನು ಗುರುತುಮಾಡಿ ಮೇಲೆತ್ತುವಲ್ಲಿ ಯಶಸ್ವಿಯಾಗಿದ್ದಾರೆ.

ಕಾರ್ಯಾಚರಣೆಯಲ್ಲಿ ಗ್ಯಾಸ್ ಟ್ಯಾಂಕರ್ ಎರಡು ಬಿಡಿ ಭಾಗಗಳು ಹಾಗೂ ಕಣ್ಮರೆಯಾಗಿದ್ದ ಲಾರಿ ಚಾಲಕ ಅರ್ಜುನ ಲಾರಿ ಮೂಲಕ ಒಯ್ಯುತ್ತಿದ್ದ ಕಟ್ಟಿಗೆಗಳ ಪೈಕಿ ಒಂದು ಕಟ್ಟಿಗೆ ತುಂಡು ದೊರೆತಿದೆ.

ತಂದೆಯ ಮೂಳೆಯನ್ನಾದರೂ ಹುಡುಕಿ ಕೊಡಿ

ಬೆಳಗಿನಿಂದ ತಮ್ಮ ತಂದೆಯ ಶವ ಸಿಗಬಗುದೆಂದು ಕಾಯುತಿದ್ದ ಜಗನ್ನಾಥ್ ಪುತ್ರಿ ಕೊನೆ ಪಕ್ಷ ತಮ್ಮ ತಂದೆಯ ಮೂಳೆಯನ್ನಾದರೂ ಹುಡುಕಿಕೊಡುವಂತೆ ಕೋರಿಕೊಂಡಿದ್ದಾರೆ.

ಇನ್ನು ಕೇರಳದ (Kerala ) ಅರ್ಜುನ್ ಚಲಾಯುಸುತಿದ್ದ ಲಾರಿ ಮಾಲೀಕ ಮುನಫ್ ಸಹ ನಮ್ಮ ವಾಹನ ಇರುವಕಡೆ ಹುಡುಕಬೇಕು ಇನ್ನೂ ಕೂಡ ಈವರೆಗೆ ಆಗಿಲ್ಲ ನಾಳೆ ಹುಡುಕಿ ನಮ್ಮವರ ಶವ ಶೋಧ ಮಾಡುತ್ತಾರೆ ಎಂಬ ನಂಬಿಕೆ ಇದೆ. ಈಗ ಸಿಕ್ಕಿರುವ ಕಟ್ಟಿಗೆ ಹೊರತುಪಡಿಸಿ ಉಳಿದ ಲಾರಿಯ ಅವಶೇಷ ನಮ್ಮದಲ್ಲ ಎಂದಿದ್ದಾರೆ.

ಸಿಕ್ಕ ಅವಶೇಷ ಯಾರದ್ದು?

ಇನ್ನು ಗುರುತು ಮಾಡಿರುವ ನದಿ ಭಾಗದ ಪ್ರದೇಶದಲ್ಲಿ ತಮಿಳುನಾಡು ಮೂಲದ ಚಿಣ್ಣನ್ ರವರ ಹೆಚ್.ಪಿ ಗ್ಯಾಸ್ ಕಂಪನಿಯ ಟ್ಯಾಂಕರ್ ನ ತಳಭಾಗದ ಅವಶೇಷಗಳು ,ಚಕ್ರಗಳು ಪತ್ತೆಯಾಗಿದೆ.

ಇದಲ್ಲದೆ ಅರ್ಜುನ್ ರವರ ಲಾರಿಯಲ್ಲಿದ್ದ ಕಟ್ಟಿಗೆ ತುಂಡು ಪತ್ತೆಯಾಗಿದ್ದು ತಳಭಾಗದಲ್ಲಿ ಲಾರಿ ಎರಡು ಭಾಗವಾಗಿ ಬಿದ್ದಿರುವ ಸಾಧ್ಯತೆ ಇದ್ದು ಹೆಚ್ಚಿನ ಪರಿಕರಗಳನ್ನು ತರಿಸಲು ಜಿಲ್ಲಾಡಳಿತ ಸೂಚನೆ ನೀಡಿದೆ.

ಇನ್ನು ಶೋಧ ಕಾರ್ಯದಲ್ಲಿ ಭಾಗವಹಿಸಿರುವ ಈಶ್ವರ್ ಮಲ್ಪೆಯವರು ಸಹ ನಾಳೆ ಶವ ಶೋಧ ಕಾರ್ಯ ಮಾಡುವ ಭರವಸೆ ನೀಡಿದ್ದು ಮುಂಜಾನೆಯಿಂದ ಮತ್ತೆ ಕಾರ್ಯಾಚರಣೆ ನಡೆಯಲಿದೆ.

ಇದನ್ನೂ ಓದಿ:-Shirur| ಕಾರ್ಯಾಚರಣೆ ಪ್ರಾರಂಭ -ಶಾಸಕ ಸತೀಶ್ ಸೈಲ್.

ಒಟ್ಟಿನಲ್ಲಿ ಎರಡು ತಿಂಗಳ ನಂತರ ಶಿರೂರು ಗುಡ್ಡು ಕುಸಿತ ದುರಂತದಲ್ಲಿ ಕಾಣೆಯಾದವರ ಶೋಧ ಕಾರ್ಯಕ್ಕೆ ಮತ್ತೆ ವೇಗ ಪಡೆದಿದ್ದು , ಭಾನುವಾರ ಏನೆಲ್ಲಾ ದೊರೆಯಲಿದೆ ,ಶವ ದೊರೆಯಬಹುದೇ ಎಂಬುದನ್ನು ಕಾದು ನೋಡಬೇಕಿದೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ