Ankola : ಪ್ರಾವಾಹ ಸಂತ್ರಸ್ತರ ಪರಿಹಾರ ಹಣಕ್ಕೆ ಕತ್ತರಿ ದಾಖಲೆ ಕೊರತೆ ತಂದೊಡ್ಡಿತು ಸಮಸ್ಯೆ!
Ankola news 07 November 2024 :- ಉತ್ತರ ಕನ್ನಡ ಜಿಲ್ಲೆಯ ಪ್ರವಾಹ ಸಂತ್ರಸ್ತರಿಗೆ ಇದೀಗ ಸಂಕಷ್ಟ ಎದುರಾಗಿದೆ.
ರಾಜ್ಯ ಸರ್ಕಾರ ( state government) ಪ್ರವಾಹ ಸಂತ್ರಸ್ತರಿಗೆ ನೀಡುವ ಪರಿಹಾರ ಕಡಿತ ಮಾಡಿದರೇ, ಕಂದಾಯ ಇಲಾಖೆ ಸೂಕ್ತ ದಾಖಲೆ ಕೊರತೆ ಎಂದು ಪರಿಹಾರ ನಿರಾಕರಿಸಿದೆ.
ಇದನ್ನೂ ಓದಿ:-Ankola police ಕಾರ್ಯಾಚರಣೆ:ಬೇಲಿಕೇರಿಯಲ್ಲಿ ಮಹಿಳೆಗೆ ಬಲವಂತವಾಗಿ ವೇಷ್ಯಾವಾಟಿಕೆ ದಂಧೆಗೆ ತೊಡಗಿಸಿದವರ ಬಂಧನ
ಉತ್ತರ ಕನ್ನಡ ಜಿಲ್ಲೆಯಲ್ಲಿ ಜೂನ್ ನಿಂದ ಅಕ್ಟೋಬರ್ ಮೊದಲ ವಾರದವರೆಗೂ ಮಳೆ ಆರ್ಭಟ ಸಾಕಷ್ಟು ಅನಾಹುತ ತಂದೊಡ್ಡಿತ್ತು.
ಜಿಲ್ಲೆಯ ಜನ ಪ್ರವಾಹ ದಿಂದ ಸಂಕಷ್ಟದಲ್ಲಿ ದಿನ ದೂಡುವಂತಾಗಿದ್ರೆ ,ನದಿ ಪ್ರವಾಹ ,ಭೂ ಕುಸಿತ ,ಹೆದ್ದಾರಿ ಅವೈಜ್ಞಾನಿಕ ಕಾಮಗಾರಿಯಿಂದ ಕೃತಕ ಪ್ರವಾಹದಿಂದ ಸಾವಿರಾರು ಕುಟುಂಬಗಳು ಜಿಲ್ಲೆಯಲ್ಲಿ ತಮ್ಮದನ್ನು ಕಳೆದುಕೊಂಡು ಬೀದಿಗೆ ಬರುವಂತಾಯಿತು.
ಮಳೆಯ ಅಬ್ಬರಕ್ಕೆ ಅಂಕೋಲದ ಶಿರೂರಿನಲ್ಲಿ ಭೂ ಕುಸಿತದಿಂದ ಮೃತರಾದ ಇಬ್ಬರ ಶವ ಕೂಡ ಈವರೆಗೆ ದೊರೆತಿಲ್ಲ.

ಇನ್ನು ಗಂಗಾವಳಿ ನದಿ ಪ್ರವಾಹಕ್ಕೆ ಹಲವು ಗ್ರಾಮಗಳು ನೀರು ತುಂಬಿ ಹಾನಿಯಾಗಿದ್ದವು.ಕುದ್ದು ಮುಖ್ಯಮಂತ್ರಿ, ಕಂದಾಯ ಸಚಿವರು ಸಹ ಭೇಟಿ ನೀಡಿ ಪರಿಹಾರದ ಭರವಸೆ ನೀಡಿದ್ದರು.
ಇದನ್ನೂ ಓದಿ:-Uttrakannada| ಶಿರೂರು ಭೂಕುಸಿತ ದುರಂತ ಈವರೆಗೆ ಆಗಿದ್ದೇನು? ವಿವರ ಇಲ್ಲಿದೆ.
ಆದ್ರೆ ಇದೀಗ ಅಂಕೋಲದ ಗಂಗಾವಳಿ ನದಿ ಪಾತ್ರದ ಬಿಳೆಹೊಂಗೆ, ಬೆಳಂಬರ,ಉಳವರೆ ಸೇರಿದಂತೆ ಹಲವು ಗ್ರಾಮದ ಪ್ರವಾಹ ಸಂತ್ರಸ್ತ ಜನರಿಗೆ ಮನೆಗೆ ನೀರು ನುಗ್ಗಿದ ಫೋಟೋ ಕಾಫಿ ಇಲ್ಲ, ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿಲ್ಲ ಎಂಬ ನೆಪವೊಡ್ಡಿ ಪರಿಹಾರದ ಹಣವನ್ನು ನೀಡಲು ನಿರಾಕರಿಸಲಾಗುತ್ತಿದೆ.
ಪ್ರವಾಹ ಸಂತ್ರಸ್ತರಿಗೆ ನೀಡಿದ ಹಿಂಬರಹ ಪ್ರತಿ:-

ಅರ್ಜಿ ನೀಡಿದ ಪ್ರವಾಹ ಸಂತ್ರಸ್ತರಿಗೆ ಈ ಕುರಿತು ಕಂದಾಯ ಇಲಾಖೆಯಿಂದ ಹಿಂಬರಹ ನೀಡಲಾಗಿದೆ.ಇನ್ನು ಈ ಬಗ್ಗೆ ಸಂತ್ರಸ್ತರು ಸಹ ಅಕ್ರೋಶ ವ್ಯಕ್ತಪಡಿಸಿದ್ದು, ನದಿ ಪ್ರವಾಹದಿಂದ ಮನೆಗಳಲ್ಲಿ ನೀರು ನಿಂತು ವಸ್ತುಗಳ ನಷ್ಟವಾಗಿವೆ.ಹೀಗಿರುವಾಗ ಇಲ್ಲದ ನೆಪ ಹೇಳಿ ಬರುವ ಅಲ್ಪ ಪರಿಹಾರಕ್ಕೆ ಕತ್ತರಿ ಹಾಕಲಾಗಿದೆ ಎಂದು ದೂರಿದ್ದಾರೆ.
ಇನ್ನು ಜಿಲ್ಲೆಯಲ್ಲಿ ಅಂಕೋಲದ 90 ಕ್ಕೂ ಹೆಚ್ಚು ಕುಟುಂಬಗಳಿಗೆ ಪರಿಹಾರ ಹಣ ನಿರಾಕರಿಸಿ ಅರ್ಜಿ ನೀಡಿದವರಿಗೆ ಕಂದಾಯ ಇಲಾಖೆ ಹಿಂಬರಹ ನೀಡಿದೆ.
ಉಳಿದಂತೆ ಇತರೆ ತಾಲೂಕಿನಲ್ಲಿ ಪರಿಹಾರ ವಿತರಿಸಲಾಗಿದೆ. ಪ್ರವಾಹ ಬಂದಾಗ ಗ್ರಾಮ ಆಡಳಿತಾಧಿಕಾರಿ,ಪಿಡಿಓ ಮೂಲಕ ವರದಿ ಪಡೆದು NDRF ಮತ್ತು SDRP ನಿಯಮಾವಳಿ ಪ್ರಕಾರ 48 ತಾಸುಗಳು ನೀರು ನಿಂತ ಮನೆಗಳಿಗೆ ಐದು ಸಾವಿರ ಪರಿಹಾರ ನೀಡಲಾಗುತ್ತದೆ.
ಇದನ್ನೂ ಓದಿ:-Ankola ಕೆಟ್ಟು ನಿಂತ ವಾಹನಕ್ಕೆ ಗುದ್ದಿದ ಲಾರಿಯಲ್ಲಿ ಸಿಕ್ತು ಕಸಾಯಿ ಖಾನೆಗೆ ಹೋಗುತಿದ್ದ 15 ಅಕ್ರಮ ಜಾನುವಾರು
ಗ್ರಾಮ ಮಟ್ಟದ ಅಧಿಕಾರಿಗಳು ನೀಡುವ ವರದಿಯನ್ನು ಪರಿಗಣಿಸಿ ತಾಲೂಕಿನ ತಹಶಿಲ್ದಾರ್ ಹಣ ಬಿಡುಗಡೆ ಮಾಡುತ್ತಾರೆ.
ಆದರೇ ಹಲವು ಭಾಗದಲ್ಲಿ ನೀರು ನಿಂತ ದಾಖಲೆಗಳಿದ್ದರೂ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿಲ್ಲ ಎಂಬ ಸಬೂಬು ಹೇಳಿ ತಿರಸ್ಕರಿಸಲಾಗುತ್ತಿದೆ.
ಈ ಕುರಿತು ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ
ಸಹ ಮಾಹಿತಿ ಕಲೆಹಾಕಿದ್ದು , ದಾಖಲೆ ಇಲ್ಲದ ಹಾಗೂ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆಯದಿರುವವರಿಗೆ ಮಾತ್ರ ತಿರಸ್ಕರಿಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಆದ್ರೆ ಈವರೆಗೆ ಅಂಕೋಲದ ಗಂಗಾವಳಿ ನದಿ ಪಾತ್ರದ 25 ಮನೆಗಳಿಗೆ ಮಾತ್ರ ಪರಿಹಾರದ ಹಣ ಸಂದಾಯವಾಗಿದ್ರೆ ,90 ಕ್ಕೂ ಹೆಚ್ಚು ಕುಟುಂಬಗಳು ನೀಡಿದ ಅರ್ಜಿಗಳನ್ನು ಸೂಕ್ತ ದಾಖಲೆ ಕೊರತೆ ಹಿನ್ನಲೆಯಲ್ಲಿ ಪರಿಹಾರ ನಿರಾಕರಿಸಲಾಗುತ್ತಿದೆ.
ಪರಿಹಾರ ಹಣಕ್ಕೂ ಕತ್ತರಿ!

ಇನ್ನು ರಾಜ್ಯ ಸರ್ಕಾರ ಪ್ರವಾಹ ಸಂತ್ರಸ್ತರಿಗೆ ನೀಡುವ ಹಣವನ್ನೂ ಸಹ ಮೊಟಕು ಗೊಳಿಸಿದೆ.ಈ ಹಿಂದೆ ಮನೆ ಹಾನಿಗೆ 5 ಲಕ್ಷ ವಿದ್ದರೇ ,ಮನೆಗಳಿಗೆ ನೀರು ನುಗ್ಗಿದರೇ 10 ಸಾವಿರ ಪರಿಹಾರ ನೀಡುತಿತ್ತು.
ಆದ್ರೆ ಇದೀಗ ಮನೆ ಹಾನಿಗೆ 1.20 ಲಕ್ಷ ,ವಸತಿ ಯೋಜನೆಯಡಿ ಮನೆ,ಹಾಗೂ ಮನೆಗೆ ನೀರು ನುಗ್ಗಿದರೇ 5 ಸಾವಿರ ಪರಿಹಾರ ನೀಡುತ್ತಿದೆ.
ಈ ಮೂಲಕ ಸರ್ಕಾರ ಪರಿಹಾರ ಹಣಕ್ಕೂ ಕತ್ತರಿ ಹಾಕಿದೆ.ಹೀಗಾಗಿ ಪರಿಹಾರ ಹಣ ಹೆಚ್ಚಿಸಿ ಪ್ರವಾಹದಿಂದ ತೊಂದರೆಗೊಳಗಾದವರಿಗೆ ಸೂಕ್ತ ಪರಿಹಾರ ಶೀಘ್ರ ನೀಡಬೇಕು ಎಂಬುದು ಸಂತ್ರಸ್ತರ ಆಗ್ರಹ.