For the best experience, open
https://m.kannadavani.news
on your mobile browser.
Advertisement

Uttra kannda:ಮಂಕಾಳು ವೈದ್ಯ ಪ್ರತಿಷ್ಟೆ ಖಾಲಿ ಉಳಿದ ಅಪರ ಜಿಲ್ಲಾಧಿಕಾರಿ ಕುರ್ಚಿ!

ಕಾರವಾರ :- ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಹಾಗೂ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ ದೇಶಪಾಂಡೆ ಪ್ರತಿಷ್ಟೆಯ ಕದನದಿಂದ ಕಾರವಾರದ ಅಪರ ಜಿಲ್ಲಾಧಿಕಾರಿ ಕುರ್ಚಿ ಖಾಲಿ ಉಳಿಯುವಂತಾಗಿದೆ.
12:40 PM Oct 16, 2024 IST | ಶುಭಸಾಗರ್
uttra kannda ಮಂಕಾಳು ವೈದ್ಯ ಪ್ರತಿಷ್ಟೆ ಖಾಲಿ ಉಳಿದ ಅಪರ ಜಿಲ್ಲಾಧಿಕಾರಿ ಕುರ್ಚಿ
Minister Mankalu Vaidya Pratishte has left the post of Additional Collector vacant

Uttra kannda:ಮಂಕಾಳು ವೈದ್ಯ ಪ್ರತಿಷ್ಟೆ ಖಾಲಿ ಉಳಿದ ಅಪರ ಜಿಲ್ಲಾಧಿಕಾರಿ ಕುರ್ಚಿ.

Advertisement

ಕಾರವಾರ :- ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಹಾಗೂ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ ದೇಶಪಾಂಡೆ ಪ್ರತಿಷ್ಟೆಯ ಕದನದಿಂದ ಕಾರವಾರದ ಅಪರ ಜಿಲ್ಲಾಧಿಕಾರಿ ಕುರ್ಚಿ ಖಾಲಿ ಉಳಿಯುವಂತಾಗಿದೆ.

ತಮ್ಮ ಗಮನಕ್ಕೆ ಬಾರದೇ ಅಪರ ಜಿಲ್ಲಾಧಿಕಾರಿ ವರ್ಗಾವಣೆ ಮಾಡಿದ್ದಾರೆ ಎಂದು ವರ್ಗಾವಣೆ ಗೊಂಡ ಹಿರಿಯ ಕೆ.ಎ.ಎಸ್ ಅಧಿಕಾರಿ ಸಜೀದ್ ಮುಲ್ಲಾ ರವರಿಗೆ ಅಧಿಕಾರ ಸ್ವೀಕರಿಸಲು ಅನುಮತಿ ನೀಡಿಲ್ಲ.

ರಾಜಕಾರಣಿಗಳ ಸ್ವ ಪ್ರತಿಷ್ಟೆಗೆ ಹತ್ತು ದಿನಕ್ಕೂ ಹೆಚ್ಚು ದಿನ ಕಳೆದಿದ್ದು KAS ಅಧಿಕಾರಿ ಅಧಿಕಾರ ವಹಿಸಿಕೊಳ್ಳದೇ ಬೆಂಗಳೂರಿನಲ್ಲೇ ಮೊಕ್ಕಾಂ ಹೂಡಿದ್ದಾರೆ.

ಸದ್ಯ ಕಾರವಾರದ ಜಿಲ್ಲಾಧಿಕಾರಿ ಕಚೇರಿಯ ಅಪರ ಜಿಲ್ಲಾಧಿಕಾರಿ ಕಚೇರಿಗೆ ಬೀಗ ಹಾಕಲಾಗಿದೆ.

ಹೌದು ಕಳೆದ ಹತ್ತು ದಿನಗಳ ಹಿಂದೆ ಅಪರ ಜಿಲ್ಲಾಧಿಕಾರಿ ಆಗಿದ್ದ ಪ್ರಕಾಶ್ ರಜಪೂತ ಬಾಗಲಕೊಟೆ ಗೆ ವರ್ಗಾವಣೆ ಆಗಿದ್ದರು ಅವರ ಸ್ಥಾನಕ್ಕೆ ಹಿರಿಯ ಕೆ.ಎ.ಎಸ್ ಅಧಿಕಾರಿ ಸಜೀದ್ ಮುಲ್ಲಾ ನೇಮಕ ಮಾಡಲಾಗಿತ್ತು.

ಆದರೇ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ಬಾರದೇ ಅಪರ ಜಿಲ್ಲಾಧಿಕಾರಿ ನೇಮಕ ಮಾಡಲಾಗಿದೆ. ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಗಂಗೂಬಾಯಿ ಮಾನಕರ್ ರನ್ನು ಸಹ ತನಗೆ ತಿಳಿಯದಂತೆ ವರ್ಗಾವಣೆ ಮಾಡಲಾಗಿದೆ ಎಂದು ಸಚಿವರು ಗರಂ ಆಗಿದ್ದಾರೆ.

ಇದನ್ನೂ ಓದಿ:-ಮೂಲಸೌಕರ್ಯ,ಸಿಬ್ಬಂದಿ ನೇಮಕ ಕೊರತೆ ಕಾರವಾರದ ಮೆಡಿಕಲ್ ಕಾಲೇಜಿಗೆ ದಂಡ ವಿಧಿಸಿದ NMC

ಇದರಿಂದ ಎಲ್ಲಾ ಕೆಲಸವೂ ಜಿಲ್ಲಾಧಿಕಾರಿ ಹೆಗಲ ಮೇಲೆ ಬೀಳುವಂತಾಗಿದ್ದು ಕಾಂಗ್ರೆಸ್ ನಾಯಕರ ಪ್ರತಿಷ್ಟೆಯ ಜಟಾಪಟಿಗೆ ಅಧಿಕಾರಿ ಬಲಿಪಶುವಾಗಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಸ್ವ ಪಕ್ಷದ ಶಾಸಕರ ಅಸಮಾಧಾನ

ಇನ್ನು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಆಡಳಿತ ವೈಕರಿ ಜಿಲ್ಲೆಯ ಅಭಿವೃದ್ಧಿ ಇಳಿಮುಖದತ್ತ ಸಾಗುತ್ತಿದೆ.

ಪ್ರವಾಸೋದ್ಯಮ ನೆಲ ಕಚ್ಚಿದ್ದು ಸ್ವ ಪ್ರತಿಷ್ಟೆಯಿಂದ ಪ್ರವಾಸೋದ್ಯಮ ಇಲಾಖೆ ಬಡವಾಗಿದೆ. ಇದಲ್ಲದೇ ಅಭಿವೃದ್ಧಿ ವಿಷಯದಲ್ಲೂ ಜಿಲ್ಲೆಗೆ ಬರಬೇಕಾದ ಅನುದಾನ ಬರುತ್ತಿಲ್ಲ. ಶಾಸಕ ಸಮಸ್ಯೆ ಆಲಿಸುತ್ತಿಲ್ಲ ಎಂಬ ಅಸಮದಾನವಿದೆ. ಹೀಗಾಗಿ ಸ್ವ ಪಕ್ಷದ ಶಾಸಕರುಗಳೇ ಮಂಕಾಳು ವೈದ್ಯ ವಿರುದ್ಧ ಅಸಮಧಾನ ಹೊಂದಿದ್ದು ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆಗೆ ಹೆಚ್ಚಿನ ಒತ್ತಡ ಕೇಳಿಬಂದಿದೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ