ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Sirsi | ಕರ್ತವ್ಯದಲ್ಲಿ ಮದ್ಯ ಸೇವಿಸದ ಅಬಕಾರಿ ಚಾಲಕ| ಬುದ್ದಿ ಹೇಳಿದ ತಪ್ಪಿಗೆ ಆತ್ಮಹತ್ಯೆ ಬೆದರಿಕೆ

ಶಿರಸಿ: ಮದ್ಯ ಸೇವಿಸಿ ಕಚೇರಿಗೆ ಬರುತ್ತಿದ್ದ ವಾಹನ ಚಾಲಕನಿಗೆ ಹಿರಿಯ ಅಧಿಕಾರಿಗಳು ಬುದ್ಧಿಮಾತು ಹೇಳಿದ್ದು, ಇದೇ ವಿಷಯವಾಗಿ ರೊಚ್ಚಿಗೆದ್ದ ಆತ ಮೇಲಾಧಿಕಾರಿಗಳ ಹೆಸರು ಬರೆದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದ ಘಟನೆ ಶಿರಸಿಯಲ್ಲಿ ನಡೆದಿದೆ.
10:11 PM Oct 08, 2024 IST | ಶುಭಸಾಗರ್

ಶಿರಸಿ: ಮದ್ಯ ಸೇವಿಸಿ ಕಚೇರಿಗೆ ಬರುತ್ತಿದ್ದ ವಾಹನ ಚಾಲಕನಿಗೆ ಹಿರಿಯ ಅಧಿಕಾರಿಗಳು ಬುದ್ಧಿಮಾತು ಹೇಳಿದ್ದು, ಇದೇ ವಿಷಯವಾಗಿ ರೊಚ್ಚಿಗೆದ್ದ ಆತ ಮೇಲಾಧಿಕಾರಿಗಳ ಹೆಸರು ಬರೆದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದ ಘಟನೆ ಶಿರಸಿಯಲ್ಲಿ ನಡೆದಿದೆ.

Advertisement

ಇದನ್ನೂ ಓದಿ:-SIRSI |ಸೇಲ್ ಆಗದೇ ಉಳಿದ 2 ಲಕ್ಷ ಮದ್ಯ ಚಿರಂಡಿ ಪಾಲು!

ಆತ್ಮಹತ್ಯೆ ಮಾಡಿಕೊಳ್ಳುವುದು ಅಪರಾಧ ಎಂದು ಅರಿತ ಅಧಿಕಾರಿಗಳು ತಮ್ಮದೇ ವಾಹನ ಚಾಲಕನ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಅಬಕಾರಿ ಇಲಾಖೆಯಲ್ಲಿ ವಾಹನ ಚಾಲಕರಾಗಿರುವ ಡಿ ಎಂ ಗಾಯಕವಾಡ ಎಂಬಾತರು ಮದ್ಯ ಸೇವಿಸಿ ಕಚೇರಿಗೆ ಆಗಮಿಸುತ್ತಿದ್ದು, ಇದರಿಂದ ಅಲ್ಲಿನ ನೌಕರರು ಬೇಸತ್ತಿದ್ದರು. ಎಷ್ಟು ಬಾರಿ ಹೇಳಿದರೂ ಗಾಯಕವಾಡ ಅವರು ಕುಡಿಯುವುದನ್ನು ಬಿಟ್ಟಿರಲಿಲ್ಲ. ಹೀಗಾಗಿ ಅಬಕಾರಿ ಅದೀಕ್ಷಕ ಶಿವಪ್ಪ ಎಚ್ ಎಸ್ ಗಾಯಕವಾಡರ ವರ್ತನೆಯ ಬಗ್ಗೆ ಮೇಲಧಿಕಾರಿಗಳಿಗೆ ದೂರು ನೀಡಿದ್ದರು. ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಆ ವರದಿಯನ್ನು ಸಹ ಮೇಲಧಿಕಾರಿಗಳಿಗೆ ರವಾನಿಸಿದ್ದರು.

Advertisement

ಇದನ್ನೂ ಓದಿ:- ಶಿರಸಿ -ಕುಮಟಾ ರಾಜ್ಯಹೆದ್ದಾರಿಯಲ್ಲಿ ಗುಂಡಿತುಂಬ ಮೀನು! ಹೆದ್ದಾರಿಯಲ್ಲಿ ಅರಳಿದ ಬಾಳೆ ಗಿಡ ವೀಕ್ಷಿಸಿದ ಕುಮಟ AC

ಈ ಹಿನ್ನಲೆ ಚಾಲಕನ ಮೇಲೆ ಶಿಸ್ತು ಕ್ರಮ ಜರುಗಿಸುವಂತೆ ಪ್ರಾಧಿಕಾರದಿಂದ ಅಬಕಾರಿ ಅದೀಕ್ಷಕರಿಗೆ ಸೂಚನೆ ಬಂದಿತ್ತು. ಸೆ 19ರಂದು ಚಾಲಕ ಡಿ ಎಂ ಗಾಯಕವಾಡ ಅವರಿಗೆ ಅಬಕಾರಿ ಅದೀಕ್ಷಕ ಶಿವಪ್ಪ ಎಚ್ ಎಸ್ ಅವರು ನೋಟಿಸ್ ನೀಡಿದ್ದರು. ನೋಟಿಸ್ ನೋಡಿ ಸಿಟ್ಟಾದ ಚಾಲಕ `ನಾನು ಸಾವಿಗೆ ಶರಣಾಗುವೆ' ಎಂದು ಕಾರವಾರ ವಿಳಾಸದೊಂದಿಗೆ ಅಬಕಾರಿ ಆಯುಕ್ತರಿಗೆ ಪತ್ರ ರವಾನಿಸಿದ್ದಾರೆ. `ಹಿರಿಯ ಅಧಿಕಾರಿಗಳ ಕಿರುಕುಳದಿಂದ ನಾನು ಸಾವನಪ್ಪುತ್ತೇನೆ. ನನ್ನ ಸಾವಿಗೆ ಹಿರಿಯ ಅಧಿಕಾರಿಗಳೇ ಕಾರಣ' ಎಂದು ಪತ್ರದ ಮೂಲಕ ಬೆದರಿಕೆ ಒಡ್ಡಿದ್ದಾರೆ.

ಇದನ್ನು ಅರಿತ ಶಿವಪ್ಪ ಅವರು ಅದೇ ದಿನ ರಾತ್ರಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದು, ನ್ಯಾಯಾಲಯದ ಸೂಚನೆ ಮೇರೆಗೆ ಅಕ್ಟೊಬರ್ 7ರಂದು ಆತ್ಮಹತ್ಯೆ ಬೆದರಿಕೆ ಒಡ್ಡಿದವನ ವಿರುದ್ಧ ಪ್ರಕರಣ ದಾಖಲಾಗಿದೆ.

Advertisement
Tags :
%title% Uttra kanndadriver threatenedexcise officerKannda newsKarnatakaSirsi
Advertisement
Next Article
Advertisement