Terrorist|ಉಗ್ರ ಮೌಸೀನ್ ಐದು ವರ್ಷದಲ್ಲಿ ಐದು ಮಕ್ಕಳ ತಂದೆ! ಹೊರಬಂತು ಕುಟುಂಬದ ರಹಸ್ಯ! ಎಸ್ ಪಿ ಹೇಳಿದ್ದೇನು
Terrorist|ಉಗ್ರ ಮೌಸೀನ್ ಐದು ವರ್ಷದಲ್ಲಿ ಐದು ಮಕ್ಕಳ ತಂದೆ! ಹೊರಬಂತು ಕುಟುಂಬದ ರಹಸ್ಯ! ಎಸ್ ಪಿ ಹೇಳಿದ್ದೇನು?
ಕಾರವಾರ:- ಉಗ್ರ ಸಂಘಟನೆ ಹಾಗೂ ಪಾಕಿಸ್ತಾನದ ಜೊತೆ ಅವಿನಾಭವ ಸಂಬಂಧ ಹೊಂದಿದದ್ದ ಆರೋಪಿ ಮೌಸೀನ್ ಶುಕುರ್ ಹೊನ್ನಾವರ ಇಂದು ಶಿರಸಿ JMFC ಕೋರ್ಟ್ ಮುಂದೆ ಶಿರಸಿ(sirsi) ಪೊಲೀಸರು ಹಾಜರು ಪಡಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಎಸ್ಪಿ ಎಂ.ನಾರಾಯಣ ನೇತೃತ್ವದಲ್ಲಿ ಆರೋಪಿ ಹಾಗೂ ಈತನ ರಹಸ್ಯವನ್ನು ಬಚ್ಚಿಟ್ಟು ಮಾಹಿತಿ ನೀಡದ ಈತನ ಕುಟುಂಬಸ್ಥರಾದ 28 ಜನರನ್ನು ಪೊಲೀಸರ ವಶಕ್ಕೆ ಪಡೆದಿದ್ದಾರೆ.
ಪೊಲೀಸರ ಕೈಗೆ ಸಿಗದೆ 6 ವರ್ಷದಲ್ಲಿ 5 ಮಕ್ಕಳನ್ನ ಮಾಡಿರುವ ಉಗ್ರ ಮೌಸೀನ್, ಉತ್ತರಕನ್ನಡ ಜಿಲ್ಲೆಯ ಶಿರಸಿ ಟಿಪ್ಪು ನಗರ ನಿವಾಸಿಯಾಗಿದ್ದ .ಪಿಎಫ್‌ಐ ಮುಖಂಡನಾಗಿದ್ದ ಮೌಸೀನ್ ಶುಕುರ್ ಹೊನ್ನಾವರ ಉಗ್ರರಿಂದ ತರಬೇತಿ ಪಡೆದಿದ್ದ ಆರೋಪಿ ಕಳೆದ 6 ವರ್ಷಗಳಿಂದ ಮೌಸೀನ್ ಗಾಗಿ ಶಿರಸಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರು.
ಇದನ್ನೂ ಓದಿ:-Sirsi : ಉಗ್ರರ ಗುಂಡೇಟಿನಿಂದ ತಪ್ಪಿಸಿಕೊಂಡ ಶಿರಸಿಯ ದಂಪತಿಗಳು -ವಿಡಿಯೋ ರಿಲೀಸ್ ,ಏನಂದ್ರು ನೋಡಿ
ಉತ್ತರಕನ್ನಡ ಜಿಲ್ಲಾ ಎಸ್ಪಿ ಎಂ.ನಾರಾಯಣ್ ನೇತೃತ್ವದ ಸ್ಪೆಷಲ್ ಆಪರೇಷನ್ ಮೂಲಕ ಆರೋಪಿಯನ್ನು ಶನಿವಾರ ಬಿಜಾಪುರದ ಸಿಂಧಗಿಯಲ್ಲಿ ಆರೋಪಿಯನ್ನು ಬಂಧಿಸಿದ್ದರು.
ಈ ಹಿಂದೆ ಉಗ್ರ ಚಟುವಟಿಕೆ ಸಂಬಂಧಿಸಿ ಶಿರಸಿಯಲ್ಲಿ NIAಯಿಂದ ಬಂಧಿತನಾಗಿದ್ದ ಸಾದಿಕ್‌ನನ್ನು ತಯಾರುಗೊಳಿಸಿದ್ದ ಮೌಸೀನ್, ಶಿರಸಿಯ ಗಣೇಶ್ ನಗರದ ಅನೀಶ್ ಎಂಬಾತನ ಕೊಲೆ ಪ್ರಕರಣ A6 ಆರೋಪಿಯಾಗಿದ್ದ . ಕೆಜೆ ಹಳ್ಳಿ -ಡಿಜೆಹಳ್ಳಿ ಪ್ರಕರಣದಲ್ಲೂ ಈತ ಆರೋಪಿಯಾಗಿದ್ದು ಉಗ್ರ ಚಟುವಟಿಯಲ್ಲಿ ಆಕ್ಟಿವ್ ಆಗಿದ್ದನು.ಮಿಟ್ಟೂರು ನಲ್ಲಿ NIA ರೈಡ್ ಮಾಡಿತ್ತು ಆ ಟ್ರೈನಿಂಗ್ ಸೆಂಟರ್ ಗೆ ಈತ ಮುಖ್ಯಸ್ತನಾಗಿದ್ದ .ಕೊಲೆ ವಂಚನೆ ಸೇರಿದಂತೆ ಹಲವು ಆರೋಪ ಈತನ ಮೇಲಿದೆ. ಇದಲ್ಲದೇ ಈತನ ಅಣ್ಣ ಸಹ ಶಿರಸಿಯಲ್ಲಿ ರೌಡಿ ಶೀಟರ್ ಆಗಿದ್ದನು.