Weather: ಹವಾಮಾನ ವರದಿ 22 November 2024
Weather forecast 22 November 2024:- ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಭಾಗದಲ್ಲಿ ಚಳಿಯ ವಾತಾವರಣ ನಿರ್ಮಾಣವಾಗಿದೆ.
ಡಿಸೆಂಬರ್, ಜನವರಿ ಅಂತ್ಯವರೆಗೆ ಚಳಿಯ ಅಬ್ಬರ ಜೋರಾಗಿರಲಿದ್ದು, ವಾಡಿಕೆಗಿಂತ 2-3 ಡಿಗ್ರಿಯಷ್ಟು ಉಷ್ಣಾಂಶ ಕಡಿಮೆ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಇದನ್ನೂ ಓದಿ:-Bhatkal: ಅಲ್ಲಿಕೂತ ಇಲ್ಲಿ ಕೂತ ಪತ್ರಕರ್ತ ಎಲ್ಲಿ ಕೂತ! ಮತ್ಸ್ಯಮೇಳದಲ್ಲಿ ಪತ್ರಕರ್ತರ ಬಹಿಷ್ಕಾರ!
ಕಾಸರಗೋಡು, ದಕ್ಷಿಣ ಕನ್ನಡ, ಕೊಡಗು, ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ಬೆಂಗಳೂರು, ಕೋಲಾರ ಜಿಲ್ಲೆಗಳಲ್ಲಿ ಸಂಜೆ, ರಾತ್ರಿ ಅಲ್ಲಲ್ಲಿ ಹಗುರ ಮೋಡಗಳು ಆವರಿಸುವ ಸಾಧ್ಯತೆಗಳಿವೆ. ಮಳೆಯ ಸಾಧ್ಯತೆಗಳಿಲ್ಲ.
ಉತ್ತರ ಸುಮಾತ್ರ ಕರಾವಳಿಯಲ್ಲಿ ಉಂಟಾಗಿರುವ ತಿರುವಿಕೆಯು ಪ್ರಭಲಗೊಂಡು, ನವೆಂಬರ್ 26ರ ಸುಮಾರಿಗೆ ಚಂಡಮಾರುತವಾಗಿ ಶ್ರೀಲಂಕಾ ಕರಾವಳಿಗೆ ಅಪ್ಪಳಿಸುವ ಲಕ್ಷಣಗಳಿವೆ.
ಅಲ್ಲಿಂ ದುರ್ಬಲಗೊಂಡು ಉತ್ತರಾಭಿಮುಖವಾಗಿ ಚಲಿಸಿ ತಮಿಳುನಾಡು, ಆಂದ್ರಾ ಕರಾವಳಿಗೆ ತಲಪುವ ನಿರೀಕ್ಷೆಯಿದೆ.
ಇದರ ಪ್ರಭಾವದಿಂದ ಕರ್ನಾಟಕದಲ್ಲಿ (Karnataka) ನವೆಂಬರ್ 27ರಿಂದ ಡಿಸೆಂಬರ್ 2ರ ತನಕ ಅಲ್ಲಲ್ಲಿ ಮಳೆಯ ಮುನ್ಸೂಚೆನೆ ಇದೆ.