Rain| ಮುಂದು ವರೆಯಲಿರುವ ಮಳೆ |ಹೇಗಿರಲಿದೆ ವಾತಾವರಣ ವಿವರ ಇಲ್ಲಿದೆ
Rain| ಮುಂದು ವರೆಯಲಿರುವ ಮಳೆ |ಹೇಗಿರಲಿದೆ ವಾತಾವರಣ ವಿವರ ಇಲ್ಲಿದೆ.
Rain news :-ಅಕ್ಟೋಬರ್ 26: ಆಂಧ್ರಪ್ರದೇಶದ ಕರಾವಳಿ ಪ್ರದೇಶಗಳಲ್ಲಿ ಮುಂದಿನ ವಾರ ಭಾರೀ ಮಳೆಯಾಗುವ(rain) ಸಾಧ್ಯತೆ ಇದೆ. ಬಂಗಾಳಕೊಲ್ಲಿಯಲ್ಲಿ ರೂಪುಗೊಳ್ಳುತ್ತಿರುವ ಚಂಡಮಾರುತ(Cyclone)ವು ಆಂಧ್ರ ಕರಾವಳಿಯತ್ತ ವೇಗವಾಗಿ ಚಲಿಸುತ್ತಿದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಕೆ ನೀಡಿದೆ. ಈ ಚಂಡಮಾರುತಕ್ಕೆ ಥೈಲ್ಯಾಂಡ್ “ಮೊಂಥಾ” ಎಂದು ಹೆಸರಿಸಿದೆ. ಇದು ಈ ತಿಂಗಳ ಎರಡನೇ ಚಂಡಮಾರುತವಾಗಲಿದೆ.
Karnataka|ಸೆಲ್ಫಿ ತೆಗೆಯಲು ಹೋಗಿ ಸಮುದ್ರಪಾಲಾದ ಶಿವಮೊಗ್ಗದ ಪ್ರವಾಸಿಗ
ರಾಜ್ಯದ ಅನೇಕ ಕರಾವಳಿ ಜಿಲ್ಲೆಗಳಲ್ಲಿ, ವಿಶೇಷವಾಗಿ ಪೂರ್ವ ಗೋದಾವರಿ, ಪಶ್ಚಿಮ ಗೋದಾವರಿ, ವಿಶಾಖಪಟ್ಟಣಂ, ಕಾಕಿನಾಡ ಮತ್ತು ಶ್ರೀಕಾಕುಳಂನಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಕೆಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಅಕ್ಟೋಬರ್ 29ರವರೆಗೂ ಕರ್ನಾಟಕ ರಾಜ್ಯದ ಬಹುತೇಕ ಭಾಗಗಳಲ್ಲಿ ಹೆಚ್ಚಿನ ಮಳೆಯಾಗಲಿದೆ. ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಯ ಕೆಲವು ಭಾಗಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.
Rain damage| ಮಳೆ ಅಬ್ಬರ ಮಾವಿನ ಮರ ಬಿದ್ದು ಏಳು ಬೈಕ್ ಜಕಂ, ಆಕಳು ಸಾವು
ಇಂದು ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗವಾದ ಕಾರವಾರ,ಅಂಕೋಲ,ಕುಮಟಾ,ಹೊನ್ನಾವರ,ಭಟ್ಕಳ ಭಾಗದಲ್ಲಿ ಮಳೆ ಇದ್ದು ಮಧ್ಯಹ್ನಾ ಅಥವಾ ಸಂಜೆ ವೇಳೆಯಲ್ಲಿ ಹೆಚ್ಚಾಗಲಿದೆ.
ಇನ್ನು ಆರೆಂಜ್ ಅಲರ್ಟ ಇದ್ದು ಮೀನುಗಾರರಿಗೆ ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಇಂದು ಭಾನುವಾರ ಮೂರು ತಾಸಿನ ಒಳಗೆ ಮಳೆ ಬೀಳುವ ಸೂಚನೆ ನೀಡಲಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಅಲ್ಪ ಮಳೆ ಬೀಳಲಿದ್ದು ಕೆಲವು ಭಾಗದಲ್ಲಿ ಗಾಳಿ ಸಹಿತ ಮಳೆಯಾಗುವ ಎಚ್ಚರಿಕೆ ನೀಡಲಾಗಿದೆ.
ರಾಜ್ಯದಲ್ಲಿ ಎಲ್ಲಿ ಎಷ್ಟು ಮಳೆಯಾಗಿದೆ(rain)? ವಿವರ ನೋಡಿ.
And for orders more than 2499 rs 15% discount ( for Deepavali)
We also take birthday parties and family get together etc also