For the best experience, open
https://m.kannadavani.news
on your mobile browser.
Advertisement

Weekly horoscope| ಈ ವಾರ ಯಾವ ರಾಶಿಗೆ ಏನುಫಲ|ಡಿಸೆಂಬರ್ ಮೊದಲವಾರದ ಫಲ ಇಲ್ಲಿದೆ.

Weekly Horoscope for December 1st week 2025: Check zodiac predictions for career, finances, health, and family. Discover auspicious timings and spiritual guidance for a successful week.
12:54 AM Dec 01, 2025 IST | ಶುಭಸಾಗರ್
Weekly Horoscope for December 1st week 2025: Check zodiac predictions for career, finances, health, and family. Discover auspicious timings and spiritual guidance for a successful week.
weekly horoscope  ಈ ವಾರ ಯಾವ ರಾಶಿಗೆ ಏನುಫಲ ಡಿಸೆಂಬರ್ ಮೊದಲವಾರದ ಫಲ ಇಲ್ಲಿದೆ

Weekly horoscope| ಈ ವಾರ ಯಾವ ರಾಶಿಗೆ ಏನುಫಲ|ಡಿಸೆಂಬರ್ ಮೊದಲವಾರದ ಫಲ ಇಲ್ಲಿದೆ.

Advertisement

ಜ್ಯೋತಿಷ್ಯ ಲೇಖನ- ತಿರುಮಲ ಶರ್ಮ . ಬೆಂಗಳೂರು.ಆಧ್ಯಾತ್ಮ ಚಿಂತಕರು.ಜ್ಯೋತಿಷ್ಯ ಅಧ್ಯಯನಕಾರರು.

ಜ್ಯೋತಿಷ್ಯ ತಿಳಿಯಲು ನಮ್ಮ ಗ್ರೂಪ್ ಗೆ ಸೇರಿ:-

https://chat.whatsapp.com/HbI3YG8zHwtAYxenaKEbAg?mode=ems_copy_ta

ವಾರ ಜ್ಯೋತಿಷ್ಯದ ಪ್ರಕಾರ ಧನು ರಾಶಿಯಲ್ಲಿ ಸೂರ್ಯ ಸಂಚಾರ (Sun in Sagittarius) ಮಾಡಲಿದ್ದಾನೆ.ಡಿಸೆಂಬರ್ ತಿಂಗಳ ಹೆಚ್ಚಿನ ಭಾಗದಲ್ಲಿ ಸೂರ್ಯ ಧನು ರಾಶಿಯಲ್ಲಿ ಇರುತ್ತಾನೆ.ಇದರ ಫಲವಾಗಿ ಜನರಲ್ಲಿ ಉತ್ಸಾಹ,ಹೊಸ ಕಾರ್ಯ,ಶುಭಕಾರ್ಯದಲ್ಲಿ ಭಾಗಿಯಾಗುವರು. ಧೈರ್ಯ ,ಹೊಸಕಾರ್ಯ ದಲ್ಲಿ ಜನರಲ್ಲಿ ಉತ್ಸಾಹ ಇರುವುದು.

ಗುರು (Jupiter) ಸ್ಥಿರವಾದ ಪ್ರಭಾವ ಹೊಂದಿದ್ದಾನೆ.ಮಧ್ಯ ತಿಂಗಳಲ್ಲಿ ಗುರು ಗ್ರಹದ ಪ್ರಭಾವ ಪ್ರಮುಖವಾಗುತ್ತದೆ.ಶುಭ ಫಲ,ಜ್ಞಾನ, ಹಣದ ಹರಿವು, ಧರ್ಮ ಪೂಜೆ ಚಟುವಟಿಕೆಗಳು ಹೆಚ್ಚಾಗುತ್ತದೆ.ಮಂಗಳನ (Mars) ಚಲನೆಯಲ್ಲಿ ಬದಲಾವಣೆ ಇದೆ.

ಶೀತ ಋತುವಾಗಿದ್ದು  ಚಂದ್ರನ ಪ್ರಭಾವ ಹೆಚ್ಚಿರುತ್ತದೆ.ಈ ವಾರ ಚಂದ್ರನು ಹಲವು ಶುಭ ನಕ್ಷತ್ರಗಳಲ್ಲಿ ಸಂಚಾರ ಮಾಡುತ್ತಾನೆ.ಮನಶಾಂತಿ, ಕುಟುಂಬ ಸುಖ, ಆಧ್ಯಾತ್ಮ ಚಿಂತನೆ ಹೆಚ್ಚಾಗುವ ಸಮಯವಾಗಿದೆ.

ಚಂದ್ರನ ಜಲತತ್ತ್ವದ ಪ್ರಭಾವದಿಂದ ಭಾವನೆಗಳ ತಿಳಿವು,ಕುಟುಂಬ ಹಾಗೂ ಸಂಬಂಧಗಳಿಗೆ ಹೆಚ್ಚಾದ ಮಹತ್ವ ಸಿಗಲಿದೆ.ಸೂರ್ಯ–ಮಂಗಳ ಪ್ರಭಾವ ದಿಂದ ಸಿಂಹ, ಮೇಷ, ಧನು ರಾಶಿಗಳಿಗೆ ಹೆಚ್ಚುವರಿ ಶಕ್ತಿ ಉತ್ಸಾಹ ತರಲಿದೆ.ಈ ರಾಶಿಗಳಿಗೆ ಕೆಲಸ-ವ್ಯಾಪಾರದಲ್ಲಿ ವೇಗ, ಒಳ್ಳೆಯ ಅವಕಾಶಗಳು ದೊರೆಯಲಿದೆ.

ಈ ವಾರದ ರಾಹುಕಾಲ ಹೀಗಿದೆ.

  • ಸೋಮವಾರ ಬೆಳಿಗ್ಗೆ 7:30 – 9:00
  • ಮಂಗಳವಾರ ಮಧ್ಯಾಹ್ನ 15:00 – 16:30
  • ಬುಧವಾರ ಮಧ್ಯಾಹ್ನ 12:00 – 13:30
  • ಗುರುವಾರ ಮಧ್ಯಾಹ್ನ 13:30 – 15:00
  • ಶುಕ್ರವಾರ ಬೆಳಿಗ್ಗೆ 10:30 – 12:00
  • ಶನಿವಾರ ಬೆಳಿಗ್ಗೆ 9:00 – 10:30
  • ಭಾನುವಾರ ಸಂಜೆ 16:30 – 18:00

ಈ ವಾರದ ಗುಳಿಗ ಕಾಲ

  • ಸೋಮವಾರ ಮಧ್ಯಾಹ್ನ 13:30 – 15:00
  • ಮಂಗಳವಾರ ಬೆಳಿಗ್ಗೆ 9:00 – 10:30
  • ಬುಧವಾರ ಬೆಳಿಗ್ಗೆ 7:30 – 9:00
  • ಗುರುವಾರ ಸಂಜೆ 15:00 – 16:30
  • ಶುಕ್ರವಾರ ಬೆಳಿಗ್ಗೆ 6:00 – 7:30
  • ಶನಿವಾರ ಮಧ್ಯಾಹ್ನ 12:00 – 13:30
  • ಭಾನುವಾರ ಬೆಳಿಗ್ಗೆ 10:30 – 12:00.

ಈ ವಾರದ ಯಮಗಂಡ ಕಾಲ

  • ಸೋಮವಾರ ಬೆಳಿಗ್ಗೆ 10:30 – 12:00
  • ಮಂಗಳವಾರ ಬೆಳಿಗ್ಗೆ 7:30 – 9:00
  • ಬುಧವಾರ ಸಂಜೆ 15:00 – 16:30
  • ಗುರುವಾರ ಬೆಳಿಗ್ಗೆ 6:00 – 7:30
  • ಶುಕ್ರವಾರ ಮಧ್ಯಾಹ್ನ 13:30 – 15:00
  • ಶನಿವಾರ ಬೆಳಿಗ್ಗೆ 10:30 – 12:00
  • ಭಾನುವಾರ ಮಧ್ಯಾಹ್ನ 12:00 – 13:30

ಈ ವಾರದ ರಾಶಿಫಲ .

ಮೇಷ :- ಉದ್ಯೋಗದಲ್ಲಿ ಕೆಲಸಗಳು ಯೋಜನೆಯಂತೆ ಪೂರ್ಣಗೊಳ್ಳುತ್ತವೆ, ಹೊಸ ಅವಕಾಶಗಳು ಸಿಗಬಹುದು. ಲಾಭ-ನಷ್ಟದಲ್ಲಿ ಆರ್ಥಿಕ ಸ್ಥಿರತೆ ಇರಲಿ, ದೊಡ್ಡ ಹೂಡಿಕೆ ತಪ್ಪಿಸಿ. ಆರೋಗ್ಯ ಉತ್ತಮ, ಆದರೆ ಒತ್ತಡ ನಿಯಂತ್ರಿಸಿ.

Karwar| ಮರದ ಎಲೆಗೆ ಹಚ್ಚಿದ ಬೆಂಕಿ ಆವರಿಸಿದ್ದು ಕಾಲೇಜು ಕಟ್ಟಡಕ್ಕೆ! ಏನಾಯ್ತು ವಿವರ ನೋಡಿ.

ವೃಷಭ:- ರಾಶಿಉದ್ಯೋಗದಲ್ಲಿ ಹೊಸ ಅವಕಾಶಗಳು ಮತ್ತು ಆತ್ಮವಿಶ್ವಾಸ ಹೆಚ್ಚುತ್ತದೆ, ವ್ಯಾಪಾರಿಗಳಿಗೆ ಲಾಭ. ಹಣಕಾಸಿನಲ್ಲಿ ಜಾಗ್ರತೆ ಬೇಕು, ದೊಡ್ಡ ಖರ್ಚು ತಪ್ಪಿಸಿ. ಆರೋಗ್ಯ ಚೆನ್ನಾಗಿರುತ್ತದೆ.

ಮಿಥುನ:-  ರಾಶಿಉದ್ಯೋಗದಲ್ಲಿ ಬಡ್ತಿ ಅಥವಾ ಒಳ್ಳೆಯ ಅವಕಾಶ ಸಿಗುತ್ತದೆ, ವೃತ್ತಿ ಉತ್ತಮ. ಆರ್ಥಿಕ ಚಿಂತೆ ಇಲ್ಲ, ಲಾಭ ಸಾಧ್ಯ. ಆರೋಗ್ಯಕ್ಕೆ ಗಮನ ಹರಿಸಿ. ಈ ರಾಶಿಯವರಿಗೆ ಈ ವಾರ ಜಾಗ್ರತೆಯಿಂದ ಇರುವುದು ಒಳಿತು ತಲೆ ಶೂಲೆ, ಬಿಪಿ ಸಮಸ್ಯೆ ಕಾಡುತ್ತದೆ.

ಕರ್ಕಾಟಕ:- ಉದ್ಯೋಗಿಗಳು ಮತ್ತು ವ್ಯಾಪಾರಿಗಳಿಗೆ ಉತ್ತಮ, ಲಾಭ ಗಳಿಸಬಹುದು. ಹಣಕಾಸಿನ ನಿರ್ಧಾರ ಆತುರದಿಂದ ತೆಗೆದುಕೊಳ್ಳಬೇಡಿ. ಆರೋಗ್ಯದಲ್ಲಿ ನಿರ್ಲಕ್ಷ್ಯ ತಪ್ಪಿಸಿ.

ಸಿಂಹ :-ಉದ್ಯೋಗದಲ್ಲಿ ಸವಾಲುಗಳು, ಹೆಚ್ಚಿನ ಶ್ರಮ ಬೇಕು. ಆರ್ಥಿಕವಾಗಿ ಉತ್ತಮ ಆದರೆ ಸಾಲ ನೀಡಬೇಡಿ. ಆರೋಗ್ಯ ಸಮಸ್ಯೆಗಳು ಸುಧಾರಿಸುತ್ತವೆ, ವಯಕ್ತಿಕ ಪ್ರಭಾವ ಹೆಚ್ಚಲಿದೆ,ರಾಜಕಾರಣಿಗಳಿಗೆ ಉತ್ತಮ ಫಲ,

Karnataka| KMF ನಿಂದ ಬೆಂಬಲ ಬೆಲೆಯಲ್ಲಿ ಜೋಳ ಖರೀದಿ| ಎಲ್ಲೆಲ್ಲಿ ಖರೀದಿ ಕೇಂದ್ರ ವಿವರ ನೋಡಿ

ಕನ್ಯಾ :- ಉದ್ಯೋಗದಲ್ಲಿ (job)ಗುರಿಯತ್ತ ಫೋಕಸ್ ಬೇಕು, ಶ್ರಮ ಹೆಚ್ಚು. ಶ್ರಮಕ್ಕೆ ಪ್ರಶಂಸೆ ಸಿಗಲಿದೆ,ಹಣಕಾಸಿನ ನಿರ್ಧಾರ ಚಿಂತಿಸಿ ತೆಗೆದುಕೊಳ್ಳಿ. ಆರೋಗ್ಯ ಉತ್ತಮ.ವಿಷ್ಣು ಸ್ಮರಣೆ ಇರಲಿ, ದೇಹದ ದಣಿವು ,ನರದೋಷ, ಕಾಲುಗಳ ನೋವು ಕಾಡುವುದು,

ತುಲಾ :-ಉದ್ಯೋಗದಲ್ಲಿ ಬಡ್ತಿ ಸಾಧ್ಯ, ವ್ಯಾಪಾರ ಅನುಕೂಲಕರ.ಆರ್ಥಿಕ ಪ್ರಗತಿ, ಖರ್ಚು ನಿಯಂತ್ರಿಸಿ. ಆರೋಗ್ಯ ಚೆನ್ನಾಗಿರುತ್ತದೆ.

ವೃಶ್ಚಿಕ :-ಉದ್ಯೋಗದಲ್ಲಿ ಕಠಿಣ ಪರಿಶ್ರಮಕ್ಕೆ ಫಲ, ಹೊಸ ಅವಕಾಶ. ಆರ್ಥಿಕ ಸ್ಥಿತಿ ಉತ್ತಮ, ಸರ್ಕಾರಿ ಕೆಲಸಗಳಲ್ಲಿ ಯಶಸ್ಸು. ಆರೋಗ್ಯ ಒಳ್ಳೆಯದು.

ಧನು :- ಉದ್ಯೋಗದಲ್ಲಿ ಅಧಿಕಾರಿಗಳ ಬೆಂಬಲ, ಪ್ರಗತಿ ಸಾಧ್ಯ, ಆರ್ಥಿಕ ಲಾಭ, ವೃತ್ತಿ ಉನ್ನತಿ. ಆರೋಗ್ಯ ಚೆನ್ನಾಗಿರುತ್ತದೆ.ಉದ್ಯೋಗಾವಕಾಶ,ವಿದೇಶಿ ಯೋಗ ಶುಭ ಫಲಗಳಿವೆ.ಅಧಿಕಾರ ಯೋಗಸಹ ಇದ್ದು ರಾಜಕಾರಣಿಗಳಿಗೆ ಶುಭ.

ಮಕರ :- ಉದ್ಯೋಗದಲ್ಲಿ ಹೊಸ ಅವಕಾಶಗಳು, ವ್ಯಾಪಾರ ಉತ್ತಮ. ಆರ್ಥಿಕ ಸ್ಥಿರತೆ ಸಾಧ್ಯ. ಆರೋಗ್ಯದಲ್ಲಿ ಚಿಂತೆ ತಪ್ಪಿಸಿ.

ಕುಂಭ :- ಉದ್ಯೋಗದಲ್ಲಿ ಹೊಸ ಅವಕಾಶಗಳು, ವ್ಯಾಪಾರ ಲಾಭ. ಅನಿರೀಕ್ಷಿತ ಆರ್ಥಿಕ ಲಾಭ, ಹೃದಯ/ಶ್ವಾಸಕೋಶ ಜಾಗ್ರತೆ. ಆರೋಗ್ಯ ಗಮನ ಬೇಕು.ಸಣ್ಣಪುಟ್ಟ ಜ್ವರ ಕಾಡುವುದು, ದಣಿವು ಕಾಡುವುದು, ಮನಸ್ಸಿನಲ್ಲಿ ಹೊಸ ಆಲೋಚನೆಗಳು, ಕ್ರಿಯೇಟಿವ್ ಎನರ್ಜಿ ಇರಲಿದೆ.ಶನಿ ದೇವರನ್ನು ಪ್ರಾರ್ಥಿಸಿ.

ಮೀನ :-ಉದ್ಯೋಗದಲ್ಲಿ ಉತ್ತಮ ಅವಕಾಶಗಳು. ಆರ್ಥಿಕ ಅನುಕೂಲ, ಕುಟುಂಬ ಸುಖ. ಆರೋಗ್ಯ ಚೆನ್ನಾಗಿರುತ್ತದೆ.ದೂರದ ಸಂಬಂಧ ಸುಧಾರಣೆ,ಜೋಡಿಗಳಿಗೆ ಸ್ಪಂದನೆ ಮತ್ತು ಪರಸ್ಪರ ಅರ್ಥೈಸುವಿಕೆ ಯಿಂದ ಶುಭ, ವಿವಾಹ ಯೋಗವೂ ಇದ್ದು ಸಂತಸದ ವಾರ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ