ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

By Election : ಚನ್ನಪಟ್ಟಣದಲ್ಲಿ ಯೋಗೇಶ್ವರ್ ಗೆಲ್ಲಲು ಕಾರಣ ಇದು ವಿವರ ನೋಡಿ.

By Election Ramanagara : ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ (Channapatna By Election) ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ ಯೋಗೇಶ್ವರ್‌ (CP yogeshwar) ದೊಡ್ಡ ಮಟ್ಟದಲ್ಲಿ ಗೆದ್ದಿದ್ದಾರೆ.
01:32 PM Nov 23, 2024 IST | ಶುಭಸಾಗರ್

By Election Ramanagara : ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ (Channapatna By Election) ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ ಯೋಗೇಶ್ವರ್‌ (CP yogeshwar) ದೊಡ್ಡ ಮಟ್ಟದಲ್ಲಿ ಗೆದ್ದಿದ್ದಾರೆ.

Advertisement

ಇದನ್ನೂ ಓದಿ:-Lokayukta ride|ಉತ್ತರ ಕನ್ನಡ ಜಿಲ್ಲೆಯ ಇಬ್ಬರು ಉನ್ನತ ಅಧಿಕಾರಿಗಳ ಮನೆಯ ಮೇಲೆ ಲೋಕಾಯುಕ್ತ ದಾಳಿ.

ಮತ ಎಣಿಕೆಯ ಮೊದಲ 6 ಸುತ್ತಿನಲ್ಲಿ ನಿಖಿಲ್‌ ಮುನ್ನಡೆಯಲ್ಲಿದ್ದರು. ಆದರೆ ಚನ್ನಪಟ್ಟಣ ನಗರದ ಇವಿಎಂ (EVM) ಓಪನ್‌ ಆಗುತ್ತಿದ್ದಂತೆ ಯೋಗೇಶ್ವರ್‌ ಮುನ್ನಡೆ ಕಾಯ್ದುಕೊಂಡಿದ್ದಾರೆ . ಈ ಮುನ್ನಡೆಯನ್ನು ಯೋಗೇಶ್ವರ್‌ ಕೊನೆಯವರೆಗೂ ಕಾಯ್ದುಕೊಂಡು ಗೆದ್ದರು.

ಯೋಗೇಶ್ವರ್‌ 25,357 ಮತಗಳಿಂದ ಗೆಲುವು ದಾಖಲಿಸಿದ್ದಾರೆ. 20 ಸುತ್ತುಗಳ ಮತ ಎಣಿಕೆಯ ನಂತರ ಯೋಗೇಶ್ವರ್‌ 1,12,388 ಮತಗಳನ್ನು ಪಡೆದರೆ ನಿಖಿಲ್‌ ಕುಮಾರಸ್ವಾಮಿ 87,031 ಮತಗಳನ್ನು ಪಡೆದರು.

Advertisement

ಯೋಗೇಶ್ವರ್ ಗೆಲ್ಲಲು ಕಾರಣ ಏನು?

ಯೋಗೇಶ್ವರ್‌ಗೆ 2 ಬಾರಿ ಸೋಲಿನ ಅನುಕಂಪ ಕೈ ಹಿಡಿದಿದೆ.

ಎರಡು ಬಾರಿ ಶಾಸಕರಾಗಿ ಕುಮಾರಸ್ವಾಮಿ ಕ್ಷೇತ್ರಕ್ಕೆ ಬರಲಿಲ್ಲ ಎಂಬ ಬೇಸರ ಮತದಾರರಲ್ಲಿತ್ತು.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸೋಲಿನ ನಂತರ ಡಿಕೆ ಶಿವಕುಮಾರ್ ಚನ್ನಪಟ್ಟಣವನ್ನು ಪ್ರತಿಷ್ಟೆಯಾಗಿ ತೆಗೆದುಕೊಂಡಿದ್ದರು.

ಚುನಾವಣೆಗೆ 4 ತಿಂಗಳು ಮೊದಲೇ ಡಿಸಿಎಂ ಡಿಕೆ ಶಿವಕುಮಾರ್‌ ಜನತಾ ದರ್ಶನ ಆರಂಭಿಸಿ ಜನರ ಬಳಿ ಇದ್ದರು.

ಕಳೆದ ಬಾರಿ ಬಿಜೆಪಿ(BjP )ಯಲ್ಲಿದ್ದ ಯೋಗೇಶ್ವರ್‌ಗೆ ತಪ್ಪಿಹೋಗಿದ್ದ ಅಲ್ಪ ಸಂಖ್ಯಾತ ಮತಗಳು ಈ ಬಾರಿ ಕಾಂಗ್ರೆಸ್ ಕೈ ಹಿಡಿಯಲು ಸಹಾಯವಾಗಿದೆ.

ಆಧುನಿಕ ಭಗೀರಥ ಫೈಟ್‌ನಲ್ಲಿ ಚನ್ನಪಟ್ಟಣ ಕೆರೆಗೆ ನೀರು ತುಂಬಿಸಿದ ಇಮೇಜ್‌ನಲ್ಲಿ ಜನರು ಯೋಗೇಶ್ವರ್‌ ಕೈ ಹಿಡಿದಿದ್ದಾರೆ.

ಕುಮಾರಸ್ವಾಮಿ ಕುಟುಂಬದ ಮೇಲಿನ ಜನರಿಗಿದ್ದ ಅಸಮದಾನ ಯೋಗೇಶ್ವರ್ ಕೈಹಿಡಿದಿದೆ.

Advertisement
Tags :
By electionchannapatnaCongrescp yogeshwarKarnatakawin
Advertisement
Next Article
Advertisement