wild animals|ನಗರಕ್ಕೆ ದಾಳಿ ಇಟ್ಟ ಕಾಡುಕೋಣ ಮಹಿಳೆ ಮೇಲೆ ದಾಳಿ | ವಿಡಿಯೋ ನೋಡಿ
wild animals|ನಗರಕ್ಕೆ ದಾಳಿ ಇಟ್ಟ ಕಾಡುಕೋಣ ಮಹಿಳೆ ಮೇಲೆ ದಾಳಿ | ವಿಡಿಯೋ ನೋಡಿ
ಹಾಸನ (october 12) : ಕಾಡುಪ್ರಾಣಿಗಳ ಆವಾಸ ಸ್ಥಾನಗಳು ಮಾನವನ ಸ್ವಾರ್ಥಕ್ಕೆ ಆಹುತಿಯಾಗುತ್ತಿದೆ.ಇದರ ಬೆನ್ನಲ್ಲೇ ಕಾಡುಪ್ರಾಣಿಗಳು ನಗರದತ್ತ ಬರುವ ಸಂಖ್ಯೆ ಹೆಚ್ಚಾಗಿದ್ದು ಹಾಸನದಲ್ಲಿ(hassan) ಕಾಡಿನಿಂದ ನಾಡಿಗೆ ಬಂದ ಕಾಡುಕೋಣ ಮಹಿಳೆ ಮೇಲೆ ದಾಳಿ ನಡೆಸಿ ರಂಪಾಟ ನಡೆಸಿತು.
ಕಾಡುಕೋಣವೊಂದು ಶನಿವಾರ ಕಾಡಿನ ಹಾದಿ ಮರೆತು ನಾಡಿನ ಹಾದಿ ಹಿಡಿದ ಘಟನೆ ಹಾಸನ ಜಿಲ್ಲೆ, ಚನ್ನರಾಯಪಟ್ಟಣದ ಕುವೆಂಪುನಗರದಲ್ಲಿ ನಡೆದಿದೆ.
ಇದನ್ನೂ ಓದಿ:-Karnataka| ಮುಖ್ಯಮಂತ್ರಿ ಬದಲಾವಣೆ- ಡಿಕೆ ಶಿವಕುಮಾರ್ ಶಾಕಿಂಗ್ ಹೇಳಿಕೆ !
ಗೂರನಹಳ್ಳಿ ಮಂಟಿ ಅರಣ್ಯದ ಕಡೆಯಿಂದ ಬಂದಿರುವ ಕಾಡುಕೋಣ ಪಟ್ಟಣದೊಳಗೆಲ್ಲಾ ಓಡಾಡಿ ಮನೆಯ ಬಳಿ ಇದ್ದ ಮಹಿಳೆಗೆ ಗುದ್ದಿ ಗಾಯಗೊಳಿಸಿದೆ. ನಂತರ ಕಾರು ಜಖಂಗೊಳಿಸಿದೆ. ಇನ್ನು ಈ ಕಾಡುಕೋಣ ಕುವೆಂಪುನಗರದ ಜನತಾ ಹೌಸ್‌ನಲ್ಲಿ ಬೀಡುಬಿಟ್ಟಿತ್ತು.
ಅರಣ್ಯಕ್ಕೆ ಕಾಡುಕೋಣವನ್ನು ಓಡಿಸಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸಪಟ್ಟಿದ್ದರೂ ಅದು ಸಾಧ್ಯವಾಗದ ಹಿನ್ನಲೆಯಲ್ಲಿ ಕೊಡಗಿನಿಂದ ಬಂದಿದ್ದ ವೈದ್ಯರು ಕಾಡುಕೋಣಕ್ಕೆ ಅರಿವಳಿಕೆ ಚುಚ್ಚುಮದ್ದು ನೀಡಿದರು.ಲಾರಿಯಲ್ಲಿ ತುಂಬಿದರೂ ಮತ್ತೆ ಎಚ್ಚೆತ್ತು ಲಾರಿಯಿಂದ ಹಾರಿ ಓಡಿಹೋಗಲು ಪ್ರಯತ್ನಿಸಿತು. ಮತ್ತೆ ಅರವಳಿಕೆ ಮದ್ದು ನೀಡಿದ ನಂತರ ಕಾಡುಕೋಣವನ್ನು ಲಾರಿಯಲ್ಲಿ ತುಂಬಿ ಸಮೀಪದ ಅರಣ್ಯಕ್ಕೆ ಬಿಡಲಾಯಿತು.