Astrology ವರ್ಷ ಭವಿಷ್ಯ -2025
ಈ ವರ್ಷ ಹಲವು ರಾಶಿಗಳಿಗೆ ಶುಭ(zodiac),ಕೆಲವು ರಾಶಿಗಳಿಗೆ ಅಶುಭ ಫಲಗಳು ದೊರೆಯಲಿದೆ. ಹಾಗಿದ್ರೆ ಯಾವ ರಾಶಿಗೆ 2025 ರ ವರ್ಷ ಶುಭವಾಗಲಿದೆ ಈ ಕುರಿತು ಜ್ಯೋತಿಷಿ(astrologer)ತಿರುಮಲ ಶರ್ಮ ರವರ ವರ್ಷ ಭವಿಷ್ಯ ಇಲ್ಲಿದೆ.
ಈ ವರ್ಷದ ಆರಂಭದಲ್ಲೇ ಮಕರ ರಾಶಿಗೆ ಸಾಡೆಸಾತಿ ಶನಿಯಿಂದ ಮುಕ್ತಿ ದೊರೆಯಲಿದ್ದು ಶುಭ ಫಲ ವಿದೆ.
ಮೇಷರಾಶಿಗೆ ಸಾಡೆಸಾತಿ ಶನಿ ಪ್ರಾರಂಭ. ಸಿಂಹ ರಾಶಿಗೆ ಅಷ್ಟಮ ಶನಿ ಪ್ರಾರಂಭವಾಗಲಿದೆ. ವೃಶ್ಚಿಕ ರಾಶಿಗೆ ಪಂಚಮ ಶನಿ ಪ್ರಾರಂಭವಾಗಲಿದೆ.
ಈ ವರ್ಷದ ಅದೃಷ ರಾಶಿಗಳಿವು:-
ವೃಷಭ, ತುಲಾ, ಧನಸ್ಸು, ಮಕರ.
ಮಧ್ಯಮ ಫಲದ ರಾಶಿಗಳಿವು :-
ಮೇಷ, ಮಿಥುನ ಸಿಂಹ, ಕನ್ಯಾ, ಕುಂಭ.
ಉತ್ತಮ ಫಲ ವಿಲ್ಲದ ರಾಶಿಗಳು:-
ಕಟಕ, ವೃಶ್ಚಿಕ, ಮೀನ.
ಈ ವರ್ಷದ ಧ್ವಾದಶ ರಾಶಿಗಳ ಗೋಚಾರಫಲ
ಮೇಷ ರಾಶಿ.
2025 ರ ಆದಿಯಲ್ಲಿ ಈ ರಾಶಿಗೆ ಸಾಡೆಸಾತಿಯ ಪ್ರಭಾವ ಪ್ರಾರಂಭವಾಗುತ್ತದೆ. ಹಣಕಾಸಿನ ಏರುಪೇರು,ಖರ್ಚುಗಳು ಹೆಚ್ಚಾಗಬಹುದು. ಯತ್ನ ಕಾರ್ಯಗಳು ನೆನಗುದಿಗೆಗೆ ಬೀಳಲಿದೆ. ಶ್ರಮ ಅಧಿಕ ಹಣಕಾಸಿನ ಖರ್ಚು ಹೆಚ್ಚಾದರೂ ಹಣದ ಹರಿವು ಉತ್ತಮವಾಗಿದೆ. ಏಕೆಂದರೆ ಮೇ ವರೆಗೂ ಗುರುಬಲ ಇರುತ್ತದೆ. ಎರಡನೇ ಮನೆಯಲ್ಲಿ ಗುರು ಇರುವುದು ಧನಲಾಭ ವಿದೆ.
ಮೇ ತಿಂಗಳಲ್ಲಿ ಗುರು ಮೂರನೇ ಪವೇಶ್ರವಾಗುತ್ತಾನೆ ಆದರೆ ರಾಹು ಲಾಭ ಸ್ಥಾನಕ್ಕೆ ಬರುತ್ತಾನೆ. ಹೀಗಾಗಿ ರಾಹು ನಿಮಗೆ ಹಣ ಸಮಯಕ್ಕೆ ಒದಗುವಂತೆ ಮಾಡುತ್ತಾನೆ. ಈ ಮಾಸದಲ್ಲೂ ನಿಮಗೆ ಲಾಭದ ಅಂಶಗಳು ಇವೆ. ಎರಡನೇ ಮನೆಯ ಅಧಿಪತಿ ಶುಕ್ರ ಲಾಭಸ್ಥಾನದಲ್ಲಿ ಇದ್ದು ಹಣಕಾಸಿನ ನೆರವನ್ನು ಕೊಡುತ್ತಾನೆ. ಆರನೇ ಮನೆಯಲ್ಲಿ ಇರುವ ಕೇತು ಸಹ ನಿಮ್ಮಶಕ್ತಿಯನ್ನು ಹೆಚ್ಚಿಸುತ್ತಾನೆ. ಈ ವರ್ಷ ಸಾಡೇಸಾತಿ ಇರುವುದರಿಂದ ಆಂಜನೇಯನ ಆರಾಧನೆ ಮಾಡಿ ಶುಭವಾಗಲಿದೆ.
ವೃಷಭ ರಾಶಿ.
2025 ರ ವರ್ಷ ಶುಭಕರವಾಗಿದ್ದರೂ ಅನೇಕ ಏರು ಪೇರು, ಸಂಸಾರದಲ್ಲಿ ಏರಿಳಿತ,ಮಾನಸಿಕ ಒತ್ತಡಗಳು ಇವೆ. ಆದರೂ ನಿಮಗೆ ಲಾಭಕರ ಹಾಗೂ ಶುಭಕರ ಅಂಶಗಳು ಗೋಚರಿಸುತ್ತವೆ.
ಅವಿವಾಹಿತರಿಗೆ ಈ ವರ್ಷ ವಿವಾಹವಾಗುತ್ತದೆ. ನೌಕರಿಯಲ್ಲಿ ಬಡ್ತಿ, ಯಶಸ್ಸು ಕೀರ್ತಿಯ ಫಲವಿದೆ. ಮಾರ್ಚಿನಲ್ಲಿ ಶನಿಯ 11 ನೇ ಮನೆಯ ಪ್ರವೇಶದಿಂದ ನಿಮ್ಮ ಜೀವನದಲ್ಲಿ ಕೆಲವು ಬದಲಾವಣೆ ಕಾಣುವಿರಿ.
ಈ ಬದಲಾವಣೆ ಶುಭ ತರಲಿದೆ.ಮೇನಲ್ಲಿ ಗುರು ಎರಡನೇ ಮನೆಗೆ ಪ್ರವೇಶವಾಗುವುದು ನಿಮಗೆ ಆರ್ಥಿಕ ಬಲ ಹಾಗೂ ಶಕ್ತಿ ತುಂಬುವುದು.
ಶನಿ ಹಾಗೂ ಗುರುವಿನ ಅನುಗ್ರಹ ಇರಲಿದೆ. ಸಾಧಿಸಿಕೊಳ್ಳಬೇಕೆಂದಿದ್ದ ಎಲ್ಲ ವಿಷಯದಲ್ಲೂ ಯಶಸ್ಸು ಗೆಲುವು ಇದೆ. ವೈರಿಗಳು ದೂರವಾಗುತ್ತಾರೆ. ಸಾಲ ತೀರಿಸುತ್ತೀರಿ. ಈ ಮಾಸವೂ ಸಹ ನಿಮಗೆ ಅನುಕೂಲಕರವಾಗಿದೆ. ಲಾಭದಲ್ಲಿ ರಾಹು ಇದ್ದು ಹಣದ ಅಡಚಣೆ ಇರುವುದಿಲ್ಲ. ಮೂರನೇ ಮನೆಯಲ್ಲಿ ಕುಜ ನಿಮ್ಮ ಶಕ್ತಿಯನ್ನು ಹೆಚ್ಚಿಸುತ್ತಾನೆ. ಒಳ್ಳೆಯ ರಾಜಯೋಗ ಅನುಭವಿಸುತ್ತೀರಿ. ದುರ್ಗಾದೇವಿಯನ್ನು ಆರಾಧಿಸುವುದರಿಂದ ಶತ್ರು ನಾಶದ ಜೊತೆ ಯಶಸ್ಸು ನಿಮ್ಮದಾಗಲಿದೆ.
ಮಿಥುನ ರಾಶಿ.
2025 ನೇ ವರ್ಷವು ಲಾಭ ನಿರೀಕ್ಷೆಗಳನ್ನು ಹುಸಿ ಮಾಡುವನು. ಮೇ ನಲ್ಲಿ ಕೇತು ಮೂರನೇ ಸ್ಥಾನಕ್ಕೆ ಬರುತ್ತಾನೆ. ಅದು ನಿಮಗೆ ಹಣವನ್ನೂ ಶಕ್ತಿಯನ್ನೂ ಕೊಟ್ಟು ಕಾಪಾಡುತ್ತದೆ. ವೈರಿಗಳನ್ನುದೂರಮಾಡುತ್ತದೆ.
ಇಷ್ಟು ದಿನ ನಾಲ್ಕನೇ ಮನೆಯಲ್ಲಿ ಇದ್ದ ಕೇತುವಿನಿಂದ ದೈಹಿಕವಾಗಿ ಕೆಲವು ನೋವುಗಳನ್ನು ಅನುಭವಿಸಿದ್ದೀರಿ. ಕಾಲು ನೋವು ಮಂಡಿನೋವು ಇಂತಹ ತೊಂದರೆಗಳಿರುವವರಿಗೆ ಮೇ ಯಿಂದ ಪರಿಹಾರ ಸಿಗುತ್ತದೆ.
ಹತ್ತನೇ ಮನೆಗೆ ಶನಿಯ ಪ್ರವೇಶ ಹಾಗೂ ನಿಮ್ಮ ರಾಶಿಗೆ ಗುರುವಿನ ಪ್ರವೇಶ ನಿಮಗೆ ಶುಭಕರವಲ್ಲ.ಈ ವರ್ಷ ಪೂರ್ತಿ ನಿಮಗೆ ಕೇತು ಬಲ ವಿದೆ. ಈ ಮಾಸದಲ್ಲಿ ಹೆಚ್ಚಿನ ಲಾಭ ಇಲ್ಲದಿದ್ದರೂ ಸಂಕಷ್ಟವಿಲ್ಲ.
ಮಾನಸಿಕ ಒತ್ತಡ , ದುರಾಲೋಚನೆ ಕಾಡುವುದು. ಯಾವುದೇ ಹೊಸ ಯೋಜನೆಗಳಿಗೆ ಕೈ ಹಾಕಬೇಡಿ. ವಾಣಿಜ್ಯ ವಹಿವಾಟು ನಷ್ಟ ತರುವುದು, ಸ್ತಿರಾಸ್ತಿ ಚರಾಸ್ತಿ ಕೊಡುಕೊಳ್ಳುವಿಕೆ ಕಾರ್ಯ ತೊಂದರೆ ತರಲಿದೆ. ಹಣಕಾಸಿನ ಅಡಚಣೆ ಮೇ ನಂತರ ಕೊಂಚ ತಹಬದಿಗೆ ಬರುತ್ತದೆ. ಶಿವರಾಧನೆ ನಿಮ್ಮ ರಾಶಿಗೆ ಒಳಿತು ತರುವನು.
ಕಟಕ ರಾಶಿ.
ಈ ರಾಶಿಗೆ ಮೂರನೇ ಮನೆಯಲ್ಲಿ ಕೇತು ಲಾಭಸ್ಥಾನದಲ್ಲಿ ಗುರು ಇದ್ದಾರೆ. ಮೇ ವರೆಗೂ ನಿಮ್ಮ ಎಲ್ಲ ಕೆಲಸಗಳು ನಿರ್ವಿ ಘ್ನವಾಗಿರಲಿದೆ.
ಜನವರಿಯಿಂದ ಅಷ್ಟಮ ಶನಿಯ ಪ್ರಭಾವ ಕಡಿಮೆಯಾಗುತ್ತದೆ. ನೀವು ಯೋಜಿಸಿದ್ದ ಕೆಲಸಕಾರ್ಯಗಳು ಚಾಲನೆ ದೊರೆಯಲಿದೆ. ಜನವರಿಯಲ್ಲಿ ಎಂಟನೇ ಮನೆಗೆ ಬಂದು ಸೇರುವ ಶುಕ್ರನಿಂದ ಸಹ ಶುಭಫಲಗಳಿವೆ.
ಮೇ ವರೆಗೂ ಗುರುಬಲ ಇರುವುದರಿಂದ ನಿಮ್ಮ ಎಲ್ಲ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಬಹುದು. ನಂತರ ಗುರು ವ್ಯಯಸ್ಥಾನಕ್ಕೆ ಬರುತ್ತಾನೆ. ಒಂದು ಸಣ್ಣ ಸ್ಥಳ ಬದಲಾವಣೆ ಯೋಗ ಇದೆ. ಧರ್ಮ ಕಾರ್ಯಕ್ಕೆ ದೈವಕಾರ್ಯಕ್ಕೆ ಹಣ ವ್ಯಯವಾಗುತ್ತದೆ. ಮೇ ನಂತರ ರಾಹು ಎಂಟನೇ ಮನೆಗೆ ಬಂದರೂ ನಿಮಗೆ ಹೆಚ್ಚಿನ ತೊಂದರೆ ಇಲ್ಲ. ಉದ್ಯಮ ,ಉದ್ಯೋಗದಲ್ಲಿ ಆಗಾಗ ತೊಂದರೆ ಇರಲಿದೆ. ಸುಬ್ರಹ್ಮಣ್ಯನನ್ನು ಆರಾಧನೆ ಸಂಕಷ್ಟ ಪರಿಹಾರ ನೀಡಲಿದ್ದಾನೆ.
ಸಿಂಹ ರಾಶಿ.
ವರ್ಷದ ಪ್ರಾರಂಭದಲ್ಲೇ ನಿಮಗೆ ಅಷ್ಟಮಶನಿಯ ಪ್ರಭಾವ ವಿದೆ. ಮಾರ್ಚಿನಲ್ಲಿ ಶನಿ ಮೀನರಾಶಿಗೆ ಪ್ರವೇಶವಾಗುವುದು ನಿಮಗೆ ಕೊಂಚ ಹಿನ್ನಡೆ.
ಮಾನಸಿಕ ತೊಲಲಾಟ, ಸಂಸಾರಿಕ ತೊಂದರೆ ಹಣಕಾಸಿನ ಖರ್ಚು,ಕಲಹ , ಅಪವಾದ, ಅವಮಾನ,ಕಾರ್ಯ ಹಾನಿ,ಸಹೋದರ ಕಲಹ ಇರುವುದು .
ರಾಜಕೀಯ ವ್ಯಕ್ತಿಗಳಿಗೆ ಶತ್ರು ಮೇಲುಗೈ ಸಾಧಿಸುವರು , ಅಪಪ್ರಚಾರ ಇಂಥವೆಲ್ಲ ನಡೆಯುತ್ತದೆ. ಸಾಧ್ಯವಾದಷ್ಟು ಜಾಗರೂಕರಾಗಿರಿ. ಯಾವುದೇ ಹೊಸ ಯೋಜನೆ ಕೈಗೊಳ್ಳಬೇಡಿ. ಯಾರೊಂದಿಗೂ ಮನಸ್ತಾಪ ಜಗಳ ಮಾಡಿಕೊಳ್ಳಬೇಡಿ ,ಹಿತಶತ್ರುಗಳಿಂದ ತೊಂದರೆ ಇದೆ.
ಮೇ ನಂತರ ಗುರುಬಲ ಪ್ರಾರಂಭ, ಅಷ್ಟಮ ಶನಿಯ ಪ್ರಭಾವ ಮೇಲಾಗಿರುತ್ತದೆ. ಸಣ್ಣ ಸಣ್ಣ ಪರಿಹಾರದ ದಾರಿಗಳು ಮೇ ನಂತರ ಕಾಣುತ್ತದೆ.
ನಿಮ್ಮ ರಾಶೀಗೇ ಕೇತು ಬರುವುದರಿಂದಲೂ ಕೊಂಚ ಕಿರಿಕರಿ ಇರುತ್ತದೆ. ಈ ಮಾಸದಲ್ಲಿ 14 ರ ನಂತರ ಆರನೇ ಮನೆಗೆ ಸೂರ್ಯ ಪ್ರವೇಶವಾದಾಗ ನಿಮಗೆ ಹಣದ ಹರಿವು ಉತ್ತಮವಾಗಿ, ಕೆಲಸಕಾರ್ಯಗಳು ನಿಧಾನವಾಗಿಯಾದರೂ ಮುನ್ನಡೆಯುತ್ತದೆ. ಕುಜ ಹನ್ನೊಂದನೇ ಮನೆಯಲ್ಲಿ ಇರುವುದು ಧನಾಗಮನಕ್ಕೆ ಕೊಂಚ ಸಹಾಯವಾಗುತ್ತದೆ. ದತ್ತಾತ್ರೇಯ ಜಪ ಇಷ್ಟ ಗುರುಗಳ ಪ್ರಾರ್ಥನೆ ಮಾನಸಿಕ ನಿರಾಳತೆ ನೀಡಲಿದೆ.
ಕನ್ಯಾ ರಾಶಿ.
ಮಾರ್ಚ್‌ನಲ್ಲಿ ಶನಿಯ ಏಳನೇ ಮನೆ ಪ್ರವೇಶ ನಿಮಗೆ ಅಷ್ಟೇನೂ ಲಾಭ ಕೊಡುವುದಿಲ್ಲ. ಗುರು ಕೂಡ ವರ್ಷದ ಮೊದಲಲ್ಲಿ ಭಾಗ್ಯಸ್ಥಾನದಲ್ಲಿ ಇದ್ದು ಒಳ್ಳೆಯ ಫಲಗಳನ್ನು ಕೊಡುತ್ತಾನೆ.
ಮೇ ನಂತರ ಗುರು ದಶಮ ಸ್ಥಾನಕ್ಕೆ ಬಂದು ಗುರು ಬಲ ಕಡಿಮೆಯಾಗುತ್ತದೆ. ಉದ್ಯೋಗದಲ್ಲಿ ಸ್ಥಾನಪಲ್ಲಟ ಆಗಬಹುದು. ಹಣಕಾಸಿನ ಪರಿಸ್ಥಿತಿ ಅಲ್ಪ ಕುಸಿಯುವುದು, ಕಾರ್ಯ ಹಾನಿಯಾಗುವುದು.
ಶನಿ-ಗುರು ಇಬ್ಬರ ಅನುಗ್ರಹವನ್ನೂ ಕಳೆದುಕೊಂಡ ನಿಮಗೆ ರಾಹು ಆರನೇ ಮನೆಗೆ ಪ್ರವೇಶ ಮಾಡಿ ನಿಮ್ಮನ್ನು ಕಾಪಾಡುತ್ತಾನೆ.
ಆರನೇ ಮನೆಯ ರಾಹು ಪರಾಕ್ರಮವನ್ನೂ , ಹಣದ ಬಲವನ್ನೂ ಕೊಡುತ್ತಾನೆ. ಈ ಮಾಸದಲ್ಲಿ ಅಷ್ಟೇನೂ ಹೆಚ್ಚಿನ ಬೆಳವಣಿಗೆ ನಿಮ್ಮ ರಾಶಿಗೆ ಇಲ್ಲ. ಮೇವರೆಗೂ ಕಾಯಬೇಕು. ಮೇ ನಂತರ ಹಣಕಾಸಿನ ಪರಿಸ್ಥಿತಿ ಸುಧಾರಿಸುತ್ತದೆ. ಕೇತು ನಿಮ್ಮ ರಾಶಿಯನ್ನು ಬಿಟ್ಟು 12ನೇ ಮನೆಯಾದ ಸಿಂಹ ರಾಶಿಗೆ ಪ್ರವೇಶ ಮಾಡುತ್ತಾನೆ.
ಇದೂ ಕೂಡ ನಿಮ್ಮ ಅನೇಕ ತೊಂದರೆಗಳನ್ನು ನಿವಾರಿಸುತ್ತದೆ.ಗಣಪತಿ ,ಶಿವಾರಾಧನೆ ಶುಭ ತರುವುದು.
ತುಲಾ ರಾಶಿ.
ಈ ವರ್ಷ ಪೂರ್ತಿ ನಿಮಗೆ ಅದೃಷ್ಟದ ವರ್ಷ. ನಿಮಮ ಆಸೆ,ಕನಸು ಜೊತೆಗೆ ಯೋಜನೆಗಳು ನೆರವೇರುವ ವರ್ಷವಾಗಲಿದೆ.
ಮೇ ತಿಂಗಳಲ್ಲಿ ಗುರು ಒಂಬತ್ತನೇ ಮನೆಗೆ, ಕೇತು ಹನ್ನೊಂದನೇ ಮನೆಗೆ, ಹಾಗೂ ಶನಿ ಆರನೇ ಮನೆಗೆ ಬರುವುದು ನಿಮಗೆ ಎಂದೂ ಊಹಿಸದಿದ್ದ ಲಾಭ ತಂದುಕೊಡುತ್ತದೆ,ಶತ್ರುಗಳು ದೂರವಾಗುತ್ತಾರೆ.
ಹಣದ ಹರಿವು ಬಹಳ ಉತ್ತಮವಾಗಿದೆ. ಪಿತ್ರಾರ್ಜಿತ ಆಸ್ತಿ ಕೈಸೇರುತ್ತದೆ. ಕೋರ್ಟ ವ್ಯಾಜ್ಯಗಳು ನಿಮ್ಮ ಪರ ವಾಗಲಿದೆ.
ಹೊಸಮನೆ, ವಾಹನ ಖರೀದಿಯೋಗ ಇದೆ. ಅವಿವಾಹಿತರಿಗೆ ವಿವಾಹ ಪ್ರಾಪ್ತಿ ಇದೆ. ತೀರ್ಥಯಾತ್ರೆ , ಪ್ರವಾಸ ವಿದೇಶಯಾತ್ರೆ ಎಲ್ಲವೂ ಈವರ್ಷ ನೀವು ಅನುಭವಿಸುವ ಅವಕಾಶವಿದೆ.
ಈ ಮಾಸದ ಎರಡನೇ ಮನೆಯ ಬುಧ ಮೂರನೇ ಮನೆಯಲ್ಲಿ ಸೂರ್ಯ ಹಾಗೂ ನಾಲ್ಕನೇ ಮನೆಯಲ್ಲಿ ಶುಕ್ರ,ಆರನೇ ಮನೆಯಲ್ಲಿ ರಾಹು ನಿಮಗೆ ಬೆಂಬಲವಾಗಿ ಇದೆ. ಹಣದ ಹರಿವು ಉತ್ತಮವಾಗಿದೆ. ವಾಹನದಿಂದ ಲಾಭ ಇದೆ. ಗಣಪತಿ ಆರಾಧನೆ ಶುಭ ತರಲಿದೆ.
ವೃಶ್ಚಿಕ ರಾಶಿ.
ಈ ವರ್ಷದ ಆದಿಯಿಂದಲೇ ನಿಮಗೆ ಪಂಚಮ ಶನಿಯ ಪ್ರಭಾವ ಗೋಚರಿಸುತ್ತದೆ. ಮಾರ್ಚಿ ತಿಂಗಳಳ್ಲಿ ಶನಿ ಐದನೇ ಮನೆಗೆ ಪ್ರವೇಶವಾಗುವುದು ಅಷ್ಟೇನೂ ನಿಮಗೆ ಲಾಭಕರವಲ್ಲ.
ಮಾನಸಿಕ ತೊಳಲಾಟ,ಕಿರಿಕಿರಿ,ಆರೋಗ್ಯ ಸಮಸ್ಯೆ ,ಕಾರ್ಯ ವಿಘ್ನ ಇರಲಿದೆ.ಹಣಕಾಸಿನ ಭಾವ ಕಾಡಬಹುದು. ಅನಾರೋಗ್ಯ ಆಗಬಹುದು. ಎಚ್ಚರಿಕೆಯಿಂದ ಇರಿ. ನಾಲ್ಕನೇ ಮನೆಯಲ್ಲಿ ರಾಹು ಹಾಗೂ ಐದನೇ ಮನೆಯ ಶನಿ ಇಬ್ಬರೂ ನಿಮಗೆ ತೊಂದರೆ ತರಲಿದ್ದಾನೆ.
ವೃಥಾ ತಿರುಗಾಟ, ನೆಮ್ಮದಿಯಿಲ್ಲದ ದಿನಗಳು ಇರುತ್ತವೆ. ಮೇ ವರೆಗೂ ಗುರುಬಲ ಇರುವುದರಿಂದ ಅಲ್ಪ ನಿರಾಳ, ಗುರು ಬೆಂಬಲ ಕೊಡುತ್ತಾನೆ.
ಮೇ ನಂತರ ಅಲ್ಪ ಬದಲಾವಣೆ ಕಾಣುವಿರಿ. ಈ ಮಾಸದಲ್ಲಿ ಮೂರನೇ ಮನೆಯಲ್ಲಿ ಶುಕ್ರ, ನಿಮ್ಮ ರಾಶಿಯಲ್ಲೇ ಬುಧ ಇರುವುದು ನಿಮಗೆ ಅಧಿಕ ಲಾಭದಾಯಕವಾಗಿದೆ. ಏಳನೇ ಮನೆಯಲ್ಲಿ ಗುರು ಇರುವುದು ಮನೆಯಲ್ಲಿ ಶುಭಕಾರ್ಯ ನಡೆಯುವ ಸಂಭವ ತೋರಿಸುತ್ತದೆ. ಹಣದ ಹರಿವು ಉತ್ತಮವಾಗಿದ್ದರೂ ಕರ್ಚು ಇರಲಿದೆ. ಯೋಗ ಧ್ಯಾನದಿಂದ ಮಾನಸಿಕ ನೆಮ್ಮದಿ ಸಿಗಲಿದೆ.
ಧನಸ್ಸು ರಾಶಿ.
ಈ ವರ್ಷ ಶುಭವಿದೆ. ಇದುವರೆಗೂ ಶನಿ ಮೂರನೇ ಮನೆಯಲ್ಲಿ ಇದ್ದು ನಿಮ್ಮನ್ನು ಬೆಂಬಲಿಸುತ್ತಿದ್ದನು. ಮಾರ್ಚಿನಲ್ಲಿ ಶನಿ ನಾಲ್ಕನೇ ಮನೆಗೆ ಪ್ರವೇಶವಾಗುತ್ತಾನೆ.
ಮೇ ತಿಂಗಳಲ್ಲಿ ರಾಹು ಈಗ ಇರುವ ನಾಲ್ಕನೇ ಮನೆಯಿಂದ ಮೂರನೇ ಮನೆಗೆ ಪ್ರವೇಶವಾಗುವುದು ನಿಮಗೆ ಅದೃಷ್ಟ ತರುತ್ತದೆ. ನಾನಾ ಮೂಲಗಳಿಂದ ಧನಲಾಭ ಇದೆ. ನೀವು ಅಂದುಕೊಂಡ ಕೆಲಸಕಾರ್ಯಗಳು ಶೀಘ್ರವಾಗಿ ನೆರವೇರುತ್ತದೆ. ಮೇ ತಿಂಗಳಲ್ಲಿ ಗುರು ಏಳನೇ ಮನೆಗೆ ಬರುವುದರಿಂದ ವೃತ್ತಿಯಲ್ಲಿ ಅಭಿವೃದ್ಧಿ, ಯಶಸ್ಸು, ಬಡ್ತಿ ಸಿಗುತ್ತದೆ. ಅವಿವಾಹಿತರಿಗೆ ವಿವಾಹ ಪ್ರಾಪ್ತಿ ಯೋಗವಿದೆ.
ಕುಟುಂಬ ಸೌಖ್ಯ ,ನೆಮ್ಮದಿ ಇರಲಿದೆ. ಯತ್ನ ಕಾರ್ಯ ಶುಭವಾಗಲಿದೆ. ಈ ಮಾಸದ ಅವಧಿಗೆ ಶುಕ್ರ ಎರಡನೇ ಹಾಗೂ ಶನಿ ಮೂರನೇ ಮನೆಯಲ್ಲಿ ಇರುವುದು ಹಣದ ಹರಿವಿಗೆ ತೊಂದರೆ ಇಲ್ಲದಿದ್ದರೂ ಆರನೇ ಮನೆಯ ಗುರು ಮಾನಸಿಕ ಹಿಂಸೆ ಕೊಡುತ್ತಾನೆ.
ಕಲಹದಿಂದ ದೂರವಿರಿ. ಹೆಚ್ಚು ಖರ್ಚು ಆಗುವ ಸಂಭವ ಇರುವುದರಿಂದ ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ. ಗಣಪತಿ,ಶಿವಾರಾಧನೆ ಶುಭ ತರಲಿದೆ.
ಮಕರ ರಾಶಿ.
ಮಾನಸಿಕ ನೆಮ್ಮದಿ ಈ ತಿಂಗಳ ಮೊದಲ ವಾರದಲ್ಲೇ ಅನುಭವಕ್ಕೆ ಬರಲಿದೆ. ಸಾಡೆಸಾತಿ ಪ್ರಭಾವ ಮುಗಿಯಲಿದೆ.
ಮೇ ತಿಂಗಳಲ್ಲಿ ಮೂರನೇ ಮನೆಗೆ ಶನಿ ಪ್ರವೇಶವಾಗುತ್ತಾನೆ. ಇದು ನಿಮಗೆ ಬಹುದೊಡ್ಡ ಶಕ್ತಿ ನೀಡುತ್ತದೆ. ಮೂರನೇ ಮನೆಯಲ್ಲಿ ಶನಿ-ರಾಹು, ಐದನೇ ಮನೆಯಲ್ಲಿ ಗುರು ನಿಮ್ಮ ಆಸೆ ಕನಸು ನಿರೀಕ್ಷೆಗಳನ್ನು ಈಡೇರಿಸುತ್ತಾರೆ. ನಿರುದ್ಯೋಗಿಗಳಿಗೆ ಉದ್ಯೋಗ ಲಾಭ, ಬಡ್ತಿ, ಉನ್ನತ ಪದವಿ ಅಧಿಕಾರ ಸಿಗುವ ಯೋಗ ಇದೆ,ಕುಟುಂಬ ಸೌಖ್ಯವಿದೆ.
ಅವಿವಾಹಿತರಿಗೆ ವಿವಾಹ ಪ್ರಾಪ್ತಿ, ವಿದೇಶಪ್ರಯಾಣ ಯೋಗ ವಿದೆ. ಉನ್ನತಶಿಕ್ಷಣಕ್ಕೆ ಅವಕಾಶಗಳು ದೊರೆಯುತ್ತದೆ. ಯತ್ನ ಕಾರ್ಯ ಯಶಸ್ಸು, ಹಣ ಸಂಹ್ರಹ, ಲಾಭ ಇರಲಿದೆ.
ಮೇ ತಿಂಗಳಲ್ಲಿ ಗುರು ಆರನೇ ಮನೆಗೆ ಪ್ರವೇಶದಿಂದ ಏರಿಳಿತವಿದೆ. ಆದರೇ ಶನಿ ಮೂರನೇ ಮನೆಯಲ್ಲಿ ಈ ವರ್ಷಪೂರ್ತಿ ಇದ್ದು ನಿಮ್ಮನ್ನು ಅನುಗ್ರಹಿಸುತ್ತಾನೆ. ಈ ಮಾಸದ ಪ್ರಕಾರ ಶನಿ ಶುಕ್ರ ಎರಡನೇ ಮನೆಯಲ್ಲಿ ಇದ್ದು ನಿಮಗೆ ಧನಲಾಭ ಕಾರ್ಯ ಸಿದ್ಧಿ ಕೊಡುತ್ತಾರೆ. ಅವಕಾಶಗಳು ಸಿಗಲಿದೆ. ಗಣಪತಿ,ಶನಿ ಆರಾಧನೆ ಶುಭ ತರಲಿದೆ.
ಕುಂಭ ರಾಶಿ.
ಸಾಡೆಸಾತಿ ಶನಿಯ ಪ್ರಭಾವ ಕಷ್ಟನಷ್ಟಗಳನ್ನು ತಂದಿತ್ತು ಆದರೇ ಈ ಮಾರ್ಚಿ ತಿಂಗಳಿಗೆ ಸಾಡೆಸಾತಿಯ ಐದು ವರ್ಷಗಳು ಕಳೆದುಹೋಗುತ್ತದೆ.
ಉಳಿದ ಕಡೆಯ ಎರಡೂವರೆ ವರ್ಷ ಅಷ್ಟೇನೂ ತೊಂದರೆ ಇರದೇ ಪ್ರಭಾವ ಇಳಿಮುಖ ಆಗಲಿದೆ.
ಮೇ ಯಿಂದ ಗುರುಬಲ ವಿದ್ದು ಅಲ್ಪ ಯಶಸ್ಸು ಕೀರ್ತಿ ಗಳಿಸುವಿರಿ. ಈ ಸಂದರ್ಭದಲ್ಲಿ ನೀವು ಕ್ರಿಯಾಶಿಲರಾಗುತ್ತೀರ.
ಇದನ್ನೂ ಓದಿ:-Karnataka: ದ್ವಿತೀಯ PUC ಸಿದ್ಧತಾ ಪರೀಕ್ಷೆ ವೇಳಾಪಟ್ಟಿ ಪ್ರಕಟ
ಉದ್ಯೋಗ,ವಿದ್ಯಾಭ್ಯಾಸ ಪ್ರಗತಿ ಇದೆ.ಈ ಮಾಸದ ಪ್ರಕಾರ ಶುಕ್ರ ನಿಮ್ಮ ರಾಶಿಯಲ್ಲೇ ಇದ್ದು, ಆರನೇ ಮನೆಯಲ್ಲಿ ಕುಜ, ಲಾಭಸ್ಥಾನದಲ್ಲಿ ಮನೆಯಲ್ಲಿ ಬುಧ ನಿಮ್ಮ ಧನಾಗಮನವನ್ನು ಉತ್ತಮಗೊಳಿಸುತ್ತಾರೆ. ಶನಿ ಆರಾಧನೆ , ಆಂಜನೇಯ ಜಪ ಒಳಿತಾಗಲಿದೆ.
ಮೀನ ರಾಶಿ .
ಸಾಡೆಸಾತಿಶನಿಯ ಮೊದಲ ಭಾಗದಲ್ಲಿ ಇದ್ದು ,ಮಾರ್ಚ್‌ನಲ್ಲಿ ಮೊದಲ ಭಾಗ ಮುಗಿದು 2ನೇ ಭಾಗ ಶುರುವಾಗುತ್ತದೆ. ಈ ವರ್ಷ ನಿಮಗೆ ಅಷ್ಟೇನೂ ಲಾಭದಾಯಕ ವಲ್ಲ.
ಮೇನಲ್ಲಿ ಗುರು ನಾಲ್ಕನೇ ಮನೆಗೆ ಪ್ರವೇಶವಾಗುತ್ತಾನೆ. ಇದು ಕೊಂಚ ನಿಮಗೆ ಒತ್ತಡಗಳನ್ನು ಸೃಷ್ಟಿಸುತ್ತದೆ. ಕಾರ್ಯಕ್ಷೇತ್ರದಲ್ಲಿ ಮೇಲಧಿಕಾರಿಗಳ, ಸಹೋದ್ಯೋಗಿಗಳ ಕಿರಿಕಿರಿ ಇರುತ್ತದೆ. ಆದಷ್ಟು ಯಾವುದೇ ದುಡುಕಿನ ನಿರ್ಧಾರಗಳನ್ನು ತೆಗೆದುಕೊಳ್ಳದೇ ಮುನ್ನೆಡೆಯಿರಿ.
ಆರೋಗ್ಯ ಸಮಸ್ಯೆ ,ದೇಹಾಯಾಸ ,ಮಾನಸಿಕ ಕಿರಿಕಿರಿ ಇರಲಿದೆ . ಮಾರ್ಚಿನಲ್ಲಿ ಶನಿ ನಿಮ್ಮ ರಾಶಿಗೇ ಪ್ರವೇಶವಾಗುವುದು ಆರೋಗ್ಯಕ್ಕೆ ತೊಂದರೆ ಇರುತ್ತದೆ.
ಉದ್ಯೋಗ ಬದಲಾವಣೆ ತೊಂದರೆ ತರಲಿದೆ. ವಿವಾಹ, ಉನ್ನತ ವ್ಯಾಸಂಗ ಬಡ್ತಿ, ವರ್ಗಾವಣೆ ವಿಷಯದಲ್ಲಿ ಸಮಸ್ಯೆಗಳು ಎದುರಾಗಲಿದೆ.
ಈ ವರ್ಷ ಅಷ್ಟೇನು ಶುಭ ವಿಲ್ಲ.ಆದರೇ ಕೆಲವು ಪಾಟ ಕಲಿಯಲಿದ್ದು ವರ್ಗಾವಣೆ, ಕುಟುಂಬದೂರ ದಂತ ಸಂಗತಿ ನಡೆಯಲಿದೆ. ಶನಿ,ಗಣಪತಿ ,ಶಿವಾರಾಧನೆ ಮಾಡಿ.