Yallapur|ಅರಬೈಲ್ ಘಾಟ್‌ನಲ್ಲಿ ಹೊತ್ತಿ ಉರಿದಟ್ಯಾಂಕರ್ |ವಿಡಿಯೋ ನೋಡಿ
Yallapur|ಅರಬೈಲ್ ಘಾಟ್‌ನಲ್ಲಿ ಹೊತ್ತಿ ಉರಿದಟ್ಯಾಂಕರ್ |ವಿಡಿಯೋ ನೋಡಿ
ಕಾರವಾರ :-ಯಲ್ಲಾಪುರ (yallapur)ತಾಲೂಕಿನ ಅರಬೈಲ್ ಘಟ್ಟದಲ್ಲಿ ಟ್ಯಾಂಕರ್ ಪಲ್ಟಿಯಾಗಿ ಬೆಂಕಿ ಅವಘಡ ಸಂಭವಿಸಿದೆ. ಯಲ್ಲಾಪುರ ಮಾರ್ಗವಾಗಿ ಚಿಕ್ಕೋಡಿಯಿಂದ ಕೇರಳ ಕಡೆಗೆ ಸ್ಪಿರಿಟ್ (ಎಥನಾಲ್) ತುಂಬಿಕೊಂಡು ಸಾಗುತ್ತಿದ್ದ ಟ್ಯಾಂಕರ್ ಲಾರಿಯೊಂದು ರಾಷ್ಟ್ರೀಯ ಹೆದ್ದಾರಿ 63ರಲ್ಲಿ, ಅರೆಬೈಲ್ ಘಟ್ಟದ ಮಾರುತಿ ದೇವಸ್ಥಾನದ ಸಮೀಪ ಚಾಲಕನ ನಿಯಂತ್ರಣ ಕಳೆದುಕೊಂಡು ಈ ಘಟನೆ ನಡೆದಿದೆ.
Yallapur | ಆಸ್ತಿಗಾಗಿ ಮಗನಿಂದ ತಂದೆಗೆ ಕೊಡಲಿಯಿಂದ ಹೊಡೆದು ಕೊಲೆ .
ನಿಯಂತ್ರಣ ತಪ್ಪಿದ ಟ್ಯಾಂಕರ್ ರಸ್ತೆ ಬದಿಯ ಮರಕ್ಕೆ ರಭಸವಾಗಿ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಸ್ಪಿರಿಟ್ ತುಂಬಿದ್ದರಿಂದ, ಡಿಕ್ಕಿ ಹೊಡೆದ ಕೆಲವೇ ಕ್ಷಣಗಳಲ್ಲಿ ಟ್ಯಾಂಕರ್‌ಗೆ ತಕ್ಷಣವೇ ಬೆಂಕಿ ಹೊತ್ತಿಕೊಂಡು ಟ್ಯಾಂಕರ್ ಸಂಪೂರ್ಣ ಸುಟ್ಟುಹೋಗಿದೆ.
ಅದೃಷ್ಟವಶಾತ್, ಲಾರಿಯ ಚಾಲಕ ತಕ್ಷಣವೇ ವಾಹನದಿಂದ ಹಾರಿಕೊಂಡಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Ankola| ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಉಪನ್ಯಾಸಕ ಗೋವಾಕ್ಕೆ ಪರಾರಿ!ಸಹಕರಿಸಿದ ಇಬ್ಬರು ವಶಕ್ಕೆ
ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆಯಿಂದಾಗಿ ಹೆದ್ದಾರಿಯಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು, ಬಳಿಕ ಸಂಚಾರವನ್ನು ಪುನರಾರಂಭಿಸಲಾಗಿದೆ. ಯಲ್ಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು,ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.