Yallapur| ಬ್ಯಾಂಕ್ ದರೋಡೆ | ಬಂಧಿಸಲು ಹೋದ ಪೊಲೀಸರಿಗೆ ಹಲ್ಲೆ ನಡೆಸಿ ಆತ್ಮಹತ್ಯೆ ಗೆ ಯತ್ನಿಸಿದ ಆರೋಪಿ!
Yallapur| ಬ್ಯಾಂಕ್ ದರೋಡೆ | ಬಂಧಿಸಲು ಹೋದ ಪೊಲೀಸರಿಗೆ ಹಲ್ಲೆ ನಡೆಸಿ ಆತ್ಮಹತ್ಯೆ ಗೆ ಯತ್ನಿಸಿದ ಆರೋಪಿ!
ಕಾರವಾರ (karwar):- ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ (bank)ನಲ್ಲಿ ನವಂಬರ್ 12 ರ ಮುಂಜಾನೆ ಬ್ಯಾಂಕ್ ದರೋಡೆಗೆ ಯತ್ನಿಸಿ ವಿಫಲವಾದಾಗ ಬ್ಯಾಂಕ್ ಗೆ ಬೆಂಕಿ ಇಟ್ಟು ಪರಾರಿಯಾದ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಲು ಹೋದ ಪೊಲೀಸರಿಗೆ ಹಲ್ಲೆ ನಡೆಸಿ ಆರೋಪಿ ಆತ್ಮ ಹತ್ಯೆಗೆ ಯತ್ನಿಸಿದ ಘಟನೆ ಬೆಳಗಾವಿಯ ಖಾಸಬಾಗ ವಾಲಿ ಔಕ್ ನ ವೊಡ್ಕ ಬಾರ್ ಮುಂದೆ ನಡೆದಿದೆ.
Yallapur|ಅರಬೈಲ್ ಘಾಟ್‌ನಲ್ಲಿ ಹೊತ್ತಿ ಉರಿದಟ್ಯಾಂಕರ್ |ವಿಡಿಯೋ ನೋಡಿ
ಮಂಗಳೂರು ಮೂಲದ ಗೂಡಿಮಬೈಲ್ ರಫೀಕ್ ಆತ್ಮಹತ್ಯೆ ಗೆ ಯತ್ನಿಸಿ ಪೊಲೀಸರಿಗೆ ಹಲ್ಲೆ ಮಾಡಿದ ಆರೋಪಿಯಾಗಿದ್ದಾನೆ.ನವಂಬರ್ 12 ರಂದು ಉಮ್ಮಚಗಿಯ ಕೆ.ವಿ.ಜಿ ಬ್ಯಾಂಕ್ ಗೆ ಮುಂಜಾನೆ ದರೋಡೆಗೆ ವಿಫಲ ಯತ್ನ ನಡೆಸಿ ಸೈರನ್ ಕೂಗಿದ ಹಿನ್ನೆಲೆಯಲ್ಲಿ ಬ್ಯಾಂಕ್ ಗೆ ಬೆಂಕಿ ಇಟ್ಟು ಪರಾರಿಯಾಗಿದ್ದ ಆರೋಪಿಯನ್ನು ಕಚಿತ ಮಾಹಿತಿ ಆಧಾರದಲ್ಲಿ
ಯಲ್ಲಾಪುರ ಪೊಲೀಸರು ಬೆಳಗಾವಿಯ ಖಾಸಬಾಗ ವಾಲಿ ಔಕ್ ನ ವೊಡ್ಕ ಬಾರ್ ಬಳಿ ದಾಳಿ ನಡೆಸಿದಾಗ ತನ್ನ ಬಳಿಯಿದ್ದ ಚಾಕು ತೆಗೆದು ಯಲ್ಲಾಪುರ ಪಿ.ಎಸ್.ಐ ಸಿದ್ದಪ್ಪ ಗುಡಿ ,ಕಾನಸ್ಟೇಬಲ್ ಶಫಿ ಶೇಖ್ ಗೆ ಗಾಯ ಪಡಿಸಿ ,ಅದೇ ಚಾಕುವಿನಿಂದ ತನಗೆ ತಾನೇ ಚುಚ್ಚಿಕೊಂಡು ಆತ್ಮ ಹತ್ಯೆಗೆ ಯತ್ನಿಸಿದ್ದಾನೆ.
Ashish Vidyarthi | ಕಾರವಾರದಲ್ಲಿ ನೆನಪಿನ ಬುತ್ತಿ ಬಿಚ್ಚಿಟ್ಟ ನಟ ಆಶಿಶ್ ವಿದ್ಯಾರ್ಥಿ
ತಕ್ಷಣ ಗಾಯಗೊಂಡ ಪೊಲೀಸರು (police)ಹಾಗೂ ಆರೋಪಿಯನ್ನು ಬೆಳಗಾವಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಸುರಕ್ಷಿತವಾಗಿದ್ದಾರೆ. ರಫಿಕ್ ಹಲವು ದರೋಡೆ ,ಕಳ್ಳತನ ಪ್ರಕರಣದಲ್ಲಿ ಆರೋಪಿಯಾಗಿದ್ದು ಹಲವು ಠಾಣೆಗಳಿಗೆ ಬೇಕಾದ ನಟೋರಿಯಸ್ ಕ್ರಿಮಿನಲ್ ಆಗಿದ್ದು , ಈತನ ಜೊತೆ ಒಂದು ದೊಡ್ಡ ಗ್ಯಾಂಗ್ ಕೂಡ ಇದೆ. ಸಧ್ಯ ಆರೋಪಿಯನ್ನು ಜೀವ ಪಣವಿಟ್ಟು ಯಲ್ಲಾಪುರ ಪೊಲೀಸರು ಬಂಧಿಸಿದ್ದಾರೆ.
ಘಟನೆ ಸಂಬಂಧ ಬೆಳಗಾವಿಯ ಶಹಾಪುರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.