Big breaking|ಯಲ್ಲಾಪುರ ಕಾನೂರು ಜಲಪಾತದಲ್ಲಿ ಕಾಣೆಯಾಗಿದ್ದ ಯುವಕನ ಶವ ಪತ್ತೆ|ಏನಾಗಿತ್ತು ಘಟನೆ

Big breaking|ಯಲ್ಲಾಪುರ ಕಾನೂರು ಜಲಪಾತದಲ್ಲಿ ಕಾಣೆಯಾಗಿದ್ದ ಯುವಕನ ಶವ ಪತ್ತೆ|ಏನಾಗಿತ್ತು ಘಟನೆ
ಯಲ್ಲಾಪುರ ನ್ಯೂಸ್:-ಯಲ್ಲಾಪುರದ ಕಾನೂರು ಜಲಪಾತದಲ್ಲಿ ನೀರುಪಾಲಾಗಿದ್ದ ವಿದ್ಯಾರ್ಥಿಯ ಮೃತ ದೇಹ ಪತ್ತೆಯಾಗಿದೆ.
ಧಾರವಾಡ ಮೂಲದ ಸೋಹೆಲ್ ಶೇಖ್ (21) ಫೋಟೊ ಶೂಟ್ ವೇಳೆ ನೀರುಪಾಲಾಗಿದ್ದನುನಿನ್ನೆ ಸಾಯಂಕಾಲ 8 ಜನ ಗೆಳೆಯರ ತಂಡದ ಜೊತೆಗೆ ಬಂದಾಗ ನೆಡೆದಿದ್ದ ಅವಘಟದಲ್ಲಿ ಈತ ಕಾಣೆಯಾಗಿದ್ದನು.
ನಿನ್ನೆಯಿಂದ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ನಡೆಸಿದ ಶೋಧ ಕಾರ್ಯದಲ್ಲಿ ಸೊಹೇಲ್ ಶೇಖ್ ಮೃತ ದೇಹ ಪತ್ತೆಯನ್ನು ಇಂದು ಮಾಡಲಾಗಿದೆ.
ಏನಾಗಿತ್ತು ಘಟನೆ.

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕಾನೂರು ಜಲಪಾತಕ್ಕೆ ಪ್ರವಾಸ (tourist )ಹೋಗಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ನೀರುಪಾಲಾಗಿದ್ದನು.
ಧಾರವಾಡ ಮೂಲದ ಸುಹೇಲ್ ಸೈಯದ್ ಅಲಿ ಶೇಖ್ (21) ಇಂಜಿನಿಯರಿಂಗ್ ವಿದ್ಯಾರ್ಥಿ ಕಾಣೆಯಾದವರಾಗಿದ್ದಾರೆ.
ಹಳಿಯಾಳ ಇಂಜಿನಿಯರಿಂಗ್ ಕಾಲೇಜ್ ನಲ್ಲಿ E&C ಫೈನಲ್ ಇಯರ್ ಇಂಜಿನಿಯರಿಂಗ್ ಓದುತ್ತಿದ್ದ ಸೋಹೇಲ್ ನೊಂದಿಗೆ ನಾಲ್ಕು ಜನ ವಿದ್ಯಾರ್ಥಿಗಳು, ನಾಲ್ಕುಜನ ವಿದ್ಯಾರ್ಥಿನಿಯರು ಸೇರಿ ಒಟ್ಟು 8 ಜನರ ತಂಡ ಕಾನೂರು ಜಲಪಾತಕ್ಕೆ ಬಂದಿದ್ದರು.ಘಟನೆ ಸಂಬಂಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.