For the best experience, open
https://m.kannadavani.news
on your mobile browser.
Advertisement

Yallapur:ಅಡುಗೆ ಮಾಡಲು ಮನೆಯಲ್ಲಿ ಸಾಮಗ್ರಿಗಳಿಲ್ಲ,ತುತ್ತು ಅನ್ನ ಸಿಗದೇ ಮನನೊಂದ ಬುಡಕಟ್ಟು ಜನಾಂಗದ ಮಹಿಳೆ ಆತ್ಮಹತ್ಯೆ

ಕಾರವಾರ :- ಒಂದು ಹೊತ್ತಿನ ಊಟಕ್ಕೂ ಗತಿ ಇಲ್ಲದೇ ಮನನೊಂದು ಮಹಿಳೆಯೊಬ್ಬಳು ತನ್ನ ದೇಹಕ್ಕೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ(yallapur) ತಾಲೂಕಿನ ಅನಗೋಡಿನ ಬೆಳ್ತೆರಗದ್ದೆ ಯಲ್ಲಿ ನಡೆದಿದೆ.
11:02 PM Aug 06, 2025 IST | ಶುಭಸಾಗರ್
ಕಾರವಾರ :- ಒಂದು ಹೊತ್ತಿನ ಊಟಕ್ಕೂ ಗತಿ ಇಲ್ಲದೇ ಮನನೊಂದು ಮಹಿಳೆಯೊಬ್ಬಳು ತನ್ನ ದೇಹಕ್ಕೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ(yallapur) ತಾಲೂಕಿನ ಅನಗೋಡಿನ ಬೆಳ್ತೆರಗದ್ದೆ ಯಲ್ಲಿ ನಡೆದಿದೆ.
yallapur ಅಡುಗೆ ಮಾಡಲು ಮನೆಯಲ್ಲಿ ಸಾಮಗ್ರಿಗಳಿಲ್ಲ ತುತ್ತು ಅನ್ನ ಸಿಗದೇ ಮನನೊಂದ ಬುಡಕಟ್ಟು ಜನಾಂಗದ ಮಹಿಳೆ ಆತ್ಮಹತ್ಯೆ

Yallapur:ಅಡುಗೆ ಮಾಡಲು ಮನೆಯಲ್ಲಿ ಸಾಮಗ್ರಿಗಳಿಲ್ಲ,ತುತ್ತು ಅನ್ನ ಸಿಗದೇ ಮನನೊಂದ ಬುಡಕಟ್ಟು ಜನಾಂಗದ ಮಹಿಳೆ ಆತ್ಮಹತ್ಯೆ

Advertisement

ಕಾರವಾರ :- ಒಂದು ಹೊತ್ತಿನ ಊಟಕ್ಕೂ ಗತಿ ಇಲ್ಲದೇ ಮನನೊಂದು ಮಹಿಳೆಯೊಬ್ಬಳು ತನ್ನ ದೇಹಕ್ಕೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ(yallapur) ತಾಲೂಕಿನ ಅನಗೋಡಿನ ಬೆಳ್ತೆರಗದ್ದೆ ಯಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ಮಹಿಳೆ

ಲಕ್ಷ್ಮೀ ಮಹಾದೇವ ನಾಗೇಶ ಸಿದ್ದಿ (48)ಆತ್ಮಹತ್ಯೆ ಮಾಡಿಕೊಂಡ  ಗೃಹಿಣಿಯಾಗಿದ್ದು,ಒಂದು ವರ್ಷದ ಹಿಂದೆ ಗಂಡನಿಂದ ಬೇರಗಪಟ್ಟ ಏಕಾಂಗಿಯಾಗಿ ಪ್ರತ್ತೇಕ ಮನೆಯಲ್ಲಿ ವಾಸ ಮಾಡುತಿದ್ದಳು. ಮನೆಯಲ್ಲಿ ಅಡುಗೆ ಮಾಡಲು ಅಡುಗೆ ಸಾಮಗ್ರಿಗಳು ಇಲ್ಲ, ಪ್ರತಿ ದಿನ ಊಟಕ್ಕಾಗಿ ಬೇರೆಯವರಿಗೆ ಆಶ್ರಯಿಸಬೇಕಾಗಿದ್ದು  ಇದರಿಂದ ಮನನೊಂದ ಮಹಿಳೆ ಮನೆಯಲ್ಲೇ ದೇಹಕ್ಕೆ ಬೆಂಕಿ ಹಚ್ಚಿಕೊಂಡು ಆಗಷ್ಟ್  2 ರಂದು ಆತ್ಮಹತ್ಯೆಗೆ ಪ್ರಯತ್ನಿಸಿದ್ದಳು.

ಇದನ್ನೂ ಓದಿ:-Yallapur: ಮಗನ ಸಾವಿಗೆ ನ್ಯಾಯ ಬೇಕು- ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ ಚಂದ್ರಶೇಕರ್ ಸಿದ್ದಿ ತಾಯಿ ಲಕ್ಷ್ಮೀ

 ತಕ್ಷಣ ಯಲ್ಲಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದೇಹದ 70% ಸಂಪೂರ್ಣ ಸುಟ್ಟುಹೋಗಿದ್ದು ಇಂದು ಚಿಕಿತ್ಸೆ ಫಲಕಾರಿಯಾಗದೇ  ಮಹಿಳೆ ಮೃತಪಟ್ಟಿದ್ದಾಳೆ. ಘಟನೆ ಸಂಬಂಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ