For the best experience, open
https://m.kannadavani.news
on your mobile browser.
Advertisement

Youtuber|ಉತ್ತರ ಕನ್ನಡ ಜಿಲ್ಲೆಗೆ ಹುಡುಗಿ ಓಡಿಸಿಕೊಂಡು ಬಂದು ವಿವಾಹವಾದ ಯೂಟ್ಯೂಬರ್ ಮುಕಳೆಪ್ಪ- ದೂರು ದಾಖಲು |ಏನಿದು ಘಟನೆ?

Kannada YouTuber Mukalappa (Kwaja Shirahatti) ವಿರುದ್ಧ ಬಜರಂಗದಳ ಕಾರ್ಯಕರ್ತರು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮುಂಡಗೋಡಿನಲ್ಲಿ ಹಿಂದೂ ಯುವತಿಯನ್ನು ವಿವಾಹ ಮಾಡಿಕೊಂಡಿದ್ದಾರೆ ಎಂಬ ಆರೋಪ, ಲವ್ ಜಿಹಾದ್ ವಿವಾದ, ಹಾಗೂ ವಿವಾದಾತ್ಮಕ ವೀಡಿಯೊಗಳ ಬಗ್ಗೆ ಚರ್ಚೆ ನಡೆಯುತ್ತಿದೆ.
11:54 PM Sep 19, 2025 IST | ಶುಭಸಾಗರ್
Kannada YouTuber Mukalappa (Kwaja Shirahatti) ವಿರುದ್ಧ ಬಜರಂಗದಳ ಕಾರ್ಯಕರ್ತರು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮುಂಡಗೋಡಿನಲ್ಲಿ ಹಿಂದೂ ಯುವತಿಯನ್ನು ವಿವಾಹ ಮಾಡಿಕೊಂಡಿದ್ದಾರೆ ಎಂಬ ಆರೋಪ, ಲವ್ ಜಿಹಾದ್ ವಿವಾದ, ಹಾಗೂ ವಿವಾದಾತ್ಮಕ ವೀಡಿಯೊಗಳ ಬಗ್ಗೆ ಚರ್ಚೆ ನಡೆಯುತ್ತಿದೆ.
youtuber ಉತ್ತರ ಕನ್ನಡ ಜಿಲ್ಲೆಗೆ ಹುಡುಗಿ ಓಡಿಸಿಕೊಂಡು ಬಂದು ವಿವಾಹವಾದ ಯೂಟ್ಯೂಬರ್ ಮುಕಳೆಪ್ಪ  ದೂರು ದಾಖಲು  ಏನಿದು ಘಟನೆ

Youtuber|ಉತ್ತರ ಕನ್ನಡ ಜಿಲ್ಲೆಗೆ ಹುಡಿಗಿ ಓಡಿಸಿಕೊಂಡು ಬಂದು ವಿವಾಹವಾದ ಯೂಟ್ಯೂಬರ್ ಮುಕಳೆಪ್ಪ- ದೂರು ದಾಖಲು |ಏನಿದು ಘಟನೆ?

Advertisement

ಕಾರವಾರ/ಧಾರವಾಡ ನ್ಯೂಸ್ 19 september 2025:- ಕನ್ನಡದ ಜಯಪ್ರಿಯ ಯೂಟ್ಯೂಬರ್ ಕ್ವಾಜಾ ಬಂದೇನ್‌ವಾಜಾ ಮಹಮದ್ ಹನೀಫ್‌ ಶಿರಹಟ್ಟಿ ಅಲಿಯಾಸ್ ಮುಕಳೆಪ್ಪ ವಿರುದ್ಧ ಬಜರಂಗದಳ ಕಾರ್ಯಕರ್ತರು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

ಲವ್‌ ಜಿಯಾದ್ ಆರೋಪ ಮಾಡಿರುವ ಕಾರ್ಯಕರ್ತರು, ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಮುಕಳೆಪ್ಪ ಸುಳ್ಳು ದಾಖಲೆ ನೀಡಿ ಹಿಂದೂ ಯುವತಿಯನ್ನು ಮದುವೆಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.

Kannada YouTuber Mukalappa (Kwaja Shirahatti) ವಿರುದ್ಧ ಬಜರಂಗದಳ ಕಾರ್ಯಕರ್ತರು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮುಂಡಗೋಡಿನಲ್ಲಿ ಹಿಂದೂ ಯುವತಿಯನ್ನು ವಿವಾಹ ಮಾಡಿಕೊಂಡಿದ್ದಾರೆ ಎಂಬ ಆರೋಪ, ಲವ್ ಜಿಹಾದ್ ವಿವಾದ, ಹಾಗೂ ವಿವಾದಾತ್ಮಕ ವೀಡಿಯೊಗಳ ಬಗ್ಗೆ ಚರ್ಚೆ ನಡೆಯುತ್ತಿದೆ.
ಮುಂಡಗೋಡಿನಲ್ಲಿ ವಿವಾಹದ ರಿಜಿಸ್ಟರ್ ಮಾಡಿಸಿರುವುದು

ಮಾತ್ರವಲ್ಲದೇ, ಕ್ವಾಜಾ ಶಿರಹಟ್ಟಿ ತನ್ನ ವೀಡಿಯೊಗಳಲ್ಲಿ ಹಿಂದೂ ಧರ್ಮವನ್ನು ಅವಮಾನಿಸುತ್ತಿದ್ದಾನೆ. ಮುಕಳೆಪ್ಪ ಹಿಂದೂ ಯುವತಿಯರನ್ನು ಪ್ರೀತಿಯ ಬಲೆಗೆ ಬೀಳಿಸಿ ವಂಚನೆ ಮಾಡುತ್ತಿದ್ದಾನೆ ಎಂದು ಬಜರಂಗದಳದ ಸಂಚಾಲಕ ಸಿದ್ದು ಹಿರೇಮಠ ದೂರಿನಲ್ಲಿ ತಿಳಿಸಿದ್ದಾರೆ.

ಇದೇ ವರ್ಷ ಜೂನ್ 5ರಂದು ಮುಕಳೆಪ್ಪ ಅವರ ವಿವಾಹವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಉಪ ನೋಂದಣಿ ಕಚೇರಿಯಲ್ಲಿ ಹಿಂದೂ ಧರ್ಮದ ಯುವತಿಯಾದ ಗಾಯತ್ರಿ ಯಲ್ಲಪ್ಪ ಜಾಲಿಹಾಳ ಎಂಬುವವರನ್ನು ವಿವಾಹವಾಗಿದ್ದಾನೆ. ಈ ವಿವಾಹಕ್ಕಾಗಿ, ಕ್ವಾಜಾ ಶಿರಹಟ್ಟಿ ವಿಳಾಸದಲ್ಲಿ ನಕಲಿ ದಾಖಲೆಗಳನ್ನು ನೀಡಿದ್ದಾನೆ ಎಂದು ಬಜರಂಗದಳವು ಆರೋಪಿಸಿದೆ.

ಯಾವುದೇ ಸಮಸ್ಯೆ ಇಲ್ಲ ಎಂದ ಪತ್ನಿ.

ಪತ್ನಿಯೊಂದಿಗೆ ಮುಕಳೆಪ್ಪ

ಬಜರಂಗದಳದ ಕಾರ್ಯಕರ್ತರು ದೂರಿನ ಹಿನ್ನೆಲೆ ಧಾರವಾಡ ಗ್ರಾಮೀಣ ಪೊಲೀಸರು ಮುಕಳೆಪ್ಪ ಮತ್ತು ಆತನ ಪತ್ನಿ ಗಾಯತ್ರಿ ಅವರನ್ನು ವಿಚಾರಣೆಗೆಂದು ಪೊಲೀಸ್‌ ಠಾಣೆಗೆ ಕರೆಸಿಕೊಂಡಿದ್ದರು. ಈ ಸಂದರ್ಭದಲ್ಲಿ ಗಾಯತ್ರಿ ನನಗೆ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ಕಾರ್ಯಕರ್ತರು ಆಕೆಯ ಮನವೊಲಿಸಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ, ಎಫ್‌ಐಆರ್‌ ದಾಖಲಾಗಿಲ್ಲ. ಪೊಲೀಸರು ಯಾರನ್ನೂ ವಶಕ್ಕೆ ಪಡೆದಿಲ್ಲ.

ಯಾರು ಈ ಮುಕಳೆಪ್ಪ?

ಯುಟ್ಯೂಬ್‌ನಲ್ಲಿ ಮುಕಳೆಪ್ಪ ಎಂಬ ಚಾನೆಲ್ ಹೊಂದಿದ್ದು, ಹಾಸ್ಯ ವಿಡಿಯೋಗಳನ್ನು ಮಾಡಿ ಖ್ಯಾತಿ ಗಳಿಸಿದ್ದಾರೆ. ಸ್ಥಳೀಯ ಭಾಷೆ ಬಳಸಿಕೊಂಡು ಸಂಸಾರ, ಸ್ನೇಹಿತರ ಜಗಳ, ಸಾಮಾಜಿಕ ಸಮಸ್ಯೆಗಳ ವಿಷಯಾಧಾರಿತ ಕಾಮಿಡಿ ಸ್ಕಿಟ್‌ಗಳನ್ನು ಹೆಚ್ಚು ರಚನೆ ಮಾಡುತ್ತಾರೆ. 2.4 ಮಿನಿಯನ್‌ (24 ಲಕ್ಷ) ಚಂದಾದಾರರನ್ನು ಹೊಂದಿದ್ದಾರೆ. ಇವರ ವಿಡಿಯೋಗಳು ಲಕ್ಷಾಂತರ ವೀವ್ಸ್‌ ಹಾಗೂ ಲೈಕ್‌ಗಳಿಸುತ್ತಿವೆ.

ಪೊಲೀಸ್‌ಗೆ ನೀಡಿದ ದೂರಿನಲ್ಲಿ ಏನಿದೆ?

ಗಣೇಶ ಪೂಜೆಯಲ್ಲಿ ಮುಕಳಪ್ಪ

ಕ್ವಾಜಾ ಅಲಿಯಾಸ್‌ ಮುಕಳೆಪ್ಪ ಅವರು ಧಾರವಾಡ ಜಿಲ್ಲೆ ನಿವಾಸಿಯಾಗಿದ್ದು, ಯುಟ್ಯೂಬ್‌, ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಸೇರಿ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಖಾತೆ ಹೊಂದಿದ್ದು, ವಿಡಿಯೋ ಮಾಡುತ್ತಿದ್ದಾರೆ. ವಿಡಿಯೋಗಳಲ್ಲಿ ಹಿಂದೂ ಯುವತಿಯರನ್ನು ಕರೆದು ತಂದು 3 - 4 ಜನ ಸೇರಿ ಒಟ್ಟಿಗೆ ಮೊದಲ ರಾತ್ರಿ (ಫಸ್ಟ್‌ ನೈಟ್‌) ಮಾಡುವ ರೀತಿಯಲ್ಲಿ ಚಿತ್ರೀಕರಣ ಮಾಡುವುದು, ಗಣಪತಿ ಹಬ್ಬದ ಕುರಿತು ಹಿಂದೂ ಜನರ ಮನಸ್ಸಿಗೆ ನೋವಾಗುವ ಹಾಗೆ ಮಾತಾಡಿದ್ದಾರೆ. ಲವ್-ಜಿಹಾದ್‌, ಕೋಮು ಗಲಭೆಗೆ ಪ್ರಚೋದಿಸುವ ವಿಡಿಯೋ ಮಾಡುತ್ತಿದ್ದಾರೆ. ಹೀಗಾಗಿ, ಇವರ ಖಾತೆಯನ್ನು ಬ್ಯಾನ್‌ ಮಾಡಬೇಕು ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.

Gokarna|ಗೋಕರ್ಣ ಕಡಲ ಅಲೆಯಲ್ಲಿ ನೀಲಿ ಬೆಳಕಿನ ವಿಸ್ಮಯ-ಕಡಲಿನಲ್ಲಿ ರಾತ್ರಿ ಸೂಸಿದ ನೀಲಿ ಬೆಳಕು

ಇನ್ನು ಯುವತಿ ಮೂಲತಹ ಹುಬ್ಬಳಿ ಮೂಲದವರು ಎಂದು ಹೇಳಲಾಗಿದೆ. ಮುಂಡಗೋಡಿನಲ್ಲಿ ಬಾಡಿಗೆ ಮನೆ ಇದೆ ಎಂದು ದಾಖಲೆ ನೀಡಿ ಮುಂಡಗೋಡಿನ ಸಬ್ ರಿಜಿಸ್ಟ್ರ್ ಕಚೇರಿಗೆ ದಾಖಲೆ ನೀಡಿ ವಿವಾಹ ನೊಂದಣಿ ಮಾಡಿಸಿದ್ದರುYoutuber mukalappa . ಇನ್ನೂ ಆಕೆಯು ಸಹ ಯೂಟ್ಯೂಬರ್ ಆಗಿದ್ದು ಒಟ್ಟಿಗೆ ವಿಡಿಯೋ ಮಾಡುತಿದ್ದು ,ಈ ಸಂದರ್ಭದಲ್ಲಿ ಇನ್ಬರೂ ಪ್ರೀತಿಸಿ ಮುಂಡಗೋಡಿನಲ್ಲಿ ರಿಜಿಸ್ಟರ್ ಮದುವೆ ಆಗಿದ್ದಾರೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ