Youtuber| ಯೂಟ್ಯೂಬರ್ ಮುಕಳೆಪ್ಪ ವಿರುದ್ಧ ಪೋಷಕರ ದೂರು ಎಫ್‌ಐಆರ್ ದಾಖಲು?ಈತನ ಮೇಲಿರುವ ಆರೋಪ ಏನು?
Youtuber| ಯೂಟ್ಯೂಬರ್ ಮುಕಳೆಪ್ಪ ವಿರುದ್ಧ ಪೋಷಕರ ದೂರು ಎಫ್‌ಐಆರ್ ದಾಖಲು?ಈತನ ಮೇಲಿರುವ ಆರೋಪ ಏನು?
ಹುಬ್ಬಳ್ಳಿ: ನಕಲಿ ದಾಖಲೆ ತೋರಿಸಿ ಹಿಂದೂ ಯುವತಿಯನ್ನು ಮದುವೆಯಾದ ಕನ್ನಡದ ಖ್ಯಾತ ಯೂಟ್ಯೂಬರ್ ಕ್ವಾಜಾ ಶಿರಹಟ್ಟಿ ಅಲಿಯಾಸ್ ಮುಕಳೆಪ್ಪ (Youtuber Mukaleppa) ವಿರುದ್ಧ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಯುವತಿಯ ಪೋಷಕರೇ ದೂರು ನೀಡಿದ್ದು ಎಫ್‌ಐಆರ್ ದಾಖಲಾಗಿದೆ.
ಶನಿವಾರ ಹಿಂದೂಪರ ಸಂಘಟನೆಗಳ ಜೊತೆಗೆ ಠಾಣೆಗೆ ಆಗಮಿಸಿ ಮುಕಳೆಪ್ಪ ವಿರುದ್ಧ ಜೀವ ಬೆದರಿಕೆ ಮತ್ತು ಅಪಹರಣ ಪ್ರಕರಣ ದಾಖಲಿಸಿದ್ದಾರೆ.
ದೂರಿನಲ್ಲಿ ಏನಿದೆ?
ರೀಲ್ಸ್ ಮಾಡುವ ನೆಪದಲ್ಲಿ ಮುಕಳೆಪ್ಪ ಮದುವೆ ಸಮಾರಂಭದ ವೇದಿಕೆ ಸಿದ್ಧಪಡಿಸಿದ್ದ. ನಾಲ್ಕು ತಿಂಗಳ ಹಿಂದೆ ನಮ್ಮ ಮಗಳನ್ನು ಆತ ಅಪಹರಿಸಿಕೊಂಡು ಹೋಗಿ ಮದುವೆಯಾಗಿದ್ದಾನೆ. ಆಗ ಅದು ರೀಲ್ಸ್ ಎಂದಿದ್ದ ಮುಕುಳೆಪ್ಪ, ಈಗ ನಿಜವಾಗಿ ಮದುವೆಯಾಗಿದ್ದೇನೆ ಎನ್ನುತ್ತಿದ್ದಾನೆ. ಇದು ಸುಳ್ಳು ಮದುವೆ. ನಮ್ಮ ಮಗಳನ್ನು ವಾಪಸ್ ಕಳುಹಿಸಿಕೊಡಿ ಎಂದಿದ್ದಕ್ಕೆ ಫೋನ್ ಮಾಡಿ ಧಮ್ಕಿ ಹಾಕುತ್ತಿದ್ದಾನೆ. ಮುಕಳೆಪ್ಪನನ್ನು ಕೂಡಲೇ ಬಂಧಿಸಿ, ನಮ್ಮ ಮಗಳನ್ನು ವಾಪಸ್ ಕಳುಹಿಸಿಕೊಡಿ ಎಂದು ಯುವತಿಯ ಹೆತ್ತವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಯುವತಿ ಹೆತ್ತವರ ದೂರಿನಾಧಾರದಲ್ಲಿ ಮುಕಳೆಪ್ಪನ ವಿರುದ್ಧ ಹಳೆ ಹುಬ್ಬಳ್ಳಿ ಪೊಲೀಸರು ಜೀವ ಬೆದರಿಕೆ ಮತ್ತು ಅಪಹರಣ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.
ಮುಕಳೆಪ್ಪ ಮೂಲತಃ ಇಸ್ಲಾಂ ಧರ್ಮಕ್ಕೆ ಸೇರಿದವನಾಗಿದ್ದು, ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ರಿಜಿಸ್ಟರ್ ಮಾಡಿಕೊಳ್ಳುವ ಮೂಲಕ ಮುಕಳೆಪ್ಪ ವಿವಾಹವಾಗಿದ್ದನು. ದಾಖಲೆ ನೀಡುವಾಗ ಮಂಡಗೋಡಿನಲ್ಲಿ ವಾಸವಿರುವ ಕುರಿತು ದಾಖಲೆ ನೀಡಿದ್ದನು.
ಇನ್ನು ಯುವತಿ ಒಪ್ಪಿಯೇ ಮದುವೆಯಾಗಿದ್ದು ಈ ಹಿಂದೆ ಧಾರವಾಡದಲ್ಲಿ ಹಿಂದೂಪರ ಸಂಘಟನೆಗಳು ದೂರು ನೀಡಿದಾಗ ಪ್ರತಿ ಹೇಳಿಕೆಯನ್ನು ಆಕೆ ದಾಖಲಿಸಿ ,ತನಗೆ ಯಾವುದೇ ತೊಂದರೆಯಿಲ್ಲ ಎಂದು ಸ್ಪಷ್ಟೀಕರಣ ನೀಡಿದ್ದಳು.ಇನ್ನರೂ ಯೂಟ್ಯೂಬರ್ಸ್ ಆಗಿದ್ದು , ಒಟ್ಟಿಗೇ ನಟನೆ ಮಾಡುತಿದ್ದರು. ಇಬ್ಬರಿಗೂ ಪ್ರೀತಿಯಾಗಿ ನಂತರ ಮನೆಯವರು ಒಪ್ಪದ ಕಾರಣ ರಿಜಿಸ್ಟರ್ ಮ್ಯಾರೇಜ್ ಆಗಿದ್ದರು.