Youtuber Mukleppa case| ಮುಂಡಗೋಡಿನ ವಿವಾಹ ನೊಂದಣಿ ಕಚೇರಿಯಲ್ಲಿ ಶಿವಕ್ಕ ರಂಪಾಟ| ಜೀವ ಬೆದರಿಕೆ ಇದೆ ಎಂದ ಮಗಳು ಗಾಯಿತ್ರಿ
Youtuber Mukleppa case| ಮುಂಡಗೋಡಿನ ವಿವಾಹ ನೊಂದಣಿ ಕಚೇರಿಯಲ್ಲಿ ಶಿವಕ್ಕ ರಂಪಾಟ| ಜೀವ ಬೆದರಿಕೆ ಇದೆ ಎಂದ ಮಗಳು ಗಾಯಿತ್ರಿ
ಯೂಟ್ಯೂಬರ್ ಮುಕಳಪ್ಪ ವಿವಾಹ ವಿವಾದ- ಮುಂಡಗೋಡು ವಿವಾಹ ನೊಂದಣಿ ಕಚೇರಿಗೆ ಶ್ರೀರಾಮ ಸೇನೆ ಕಾರ್ಯಕರ್ತರ ಜೊತೆ ಮುತ್ತಿಗೆ ಹಾಕಿದ ಗಾಯಿತ್ರಿ ತಾಯಿ ಶಿವಕ್ಕ
ಕಾರವಾರ :- ಯೂಟ್ಯೂಬರ್ ಕಾಮಿಡಿ ಸ್ಟಾರ್ ಮುಕಳೆಪ್ಪ ವಿವಾಹ ವಿವಾದ ಕಾವು ಏರುತ್ತಿರುವ ಬೆನ್ನಲ್ಲೇ ಇಂದು ಮುಂಡಗೋಡಿನ ಸಬ್ ರಿಜಿಸ್ಟರ್ ಕಚೇರಿಗೆ ಶ್ರೀರಾಮ ಸೇನೆ ಸಂಘಟನೆ ಹಾಗೂ ಯುವತಿ ಗಾಯಿತ್ರಿ ತಾಯಿ ಶಿವಕ್ಕ ಮುತ್ತಿಗೆ ಹಾಕಿ ರಿಜಿಸ್ಟರ್ ರನ್ನು ತರಾಟೆ ತೆಗೆದುಕೊಂಡರು.ಹಣ ಪಡೆದು ,ನಿಯಮ ಬಾಹಿರ ವಿವಾಹ ನೊಂದಣಿ ಮಾಡಲಾಗಿದೆ.ಸಬ್ ರಿಜಿಸ್ಟರ್ ನಿಯಮ ಮೀರಿ ಹುಬ್ಬಳ್ಳಿ-ಧಾರವಾಡ ನಿವಾಸಿಗಳನ್ನ ಮುಂಡಗೋಡು ನಿವಾಸಿಗಳೆಂದು ಸುಳ್ಳು ದಾಖಲೆಯನ್ನು ಅಂಗೀಕರಿಸಿದ್ದಾರೆ ,ಜೂನ್ 5 ರಂದು ದಾಖಲೆ ನೀಡಿ ಜೂನ್ 5 ರಂದೇ ವಿವಾಹ ನೊಂದಣಿ ಮಾಡಲಾಗಿದೆ.
Youtuber| ಯೂಟ್ಯೂಬರ್ ಮುಕಳೆಪ್ಪ ವಿರುದ್ಧ ಪೋಷಕರ ದೂರು ಎಫ್‌ಐಆರ್ ದಾಖಲು?ಈತನ ಮೇಲಿರುವ ಆರೋಪ ಏನು?
ನಿಯಮದಂತೆ ವಿವಾಹವಾಗುವವರು ಒಬ್ಬರಾದರೂ ಸ್ಥಳೀಯರಾಗಿರಬೇಕು ಎಂಬ ನಿಯಮ ಗಾಳಿಗೆ ತೂರಲಾಗಿದೆ. ಹಣ ಪಡೆದು ವಿವಾಹ ನೊಂದಣಿ ಮಾಡಿದ ಆರೋಪ ಮಾಡಲಾಗಿದ್ದು , ವಿವಾಹ ನೊಂದಣಿಯನ್ನು ರದ್ದು ಪಡಿಸುವಂತೆ ಆಗ್ರಹಿಸಿದರು. ಇನ್ನು ಕರಾರು ಪತ್ರ ಪಡೆದಿರುವ ದಿನವೇ ವಿವಾಹ ನೊಂದಣಿ ಮಾಡಿದ್ದು ದಾಖಲೆಯಿಂದ ಪತ್ತೆಯಾಗಿದೆ. ಇನ್ನು ನಿಯಮ ಮೀರಿ ವಿವಾಹ ನೊಂದಣಿ ಮಾಡಿಲ್ಲ ಎಂದು ನೊಂದಣಾಧಿಕಾರಿ ಮಾಹಿತಿ ನೀಡಿದ್ದಾರೆ. ಇನ್ನು ಗಾಯುತ್ರಿ ಸಹ ತನ್ನ ತಾಯಿ ಮಾತನಾಡಿದ ವಿಡಿಯೋ ಹರಿಬಿಟ್ಟಿದ್ದು , ಈ ಬಗ್ಗೆ ತಾಯಿ ಸಹ ಮಗಳು ಶಾಣೆ ಇದ್ದಾಳೆ ಎಂದು ಆರೋಪಿಸಿದ್ದಾರೆ. ಇನ್ನು ವಿವಾಹ ನೊಂದಣಾಧಿಕಾರಿ ವಿರುದ್ಧ ಮುಂಡಗೋಡು ಠಾಣೆಯಲ್ಲಿ ಪ್ರಕರಣ ದಾಖಲಿಸಲು ಗಾಯಿತ್ರಿ ತಾಯಿ ಶಿವಕ್ಕ ಮುಂದಾಗಿದ್ದು ಪ್ರಕರಣ ದಾಖಲಾಗಬೇಕಿದೆ.
ಯೂಟ್ಯೂಬರ್ (Youtuber) ಕಾಮಿಡಿ ಸ್ಟಾರ್ ಮುಕಳೆಪ್ಪನ (Mukleppa) ಹೆಂಡತಿ ಗಾಯತ್ರಿಯ ಮತ್ತೊಂದು ವೀಡಿಯೋ ವೈರಲ್ ಆಗಿದೆ. ವೀಡಿಯೋದಲ್ಲಿ ಗಾಯತ್ರಿ ಹಾಗೂ ಆಕೆಯ ತಾಯಿ ಫೋನ್‌ನಲ್ಲಿ ಮಾತಾಡಿದ ಆಡಿಯೋ ಸೇರಿಸಿ ಹರಿಬಿಡಲಾಗಿದೆ.
ಯಾರ್‍ಯಾರೋ ತನ್ನ ತಾಯಿ ಮನೆಗೆ ಬಂದು ಏನೋ ಹೇಳಿ ಹೋಗುತ್ತಿದ್ದಾರೆ. ಇದರ ಬಗ್ಗೆ ಹಾಗೂ ಇಷ್ಟೆಲ್ಲ ಬೆಳವಣಿಗೆಗೆ ಕಾರಣ ಯಾರು ಎಂಬುದನ್ನು ಗಾಯತ್ರಿ ತನ್ನ ತಾಯಿ ಜೊತೆ ಫೋನ್‌ನಲ್ಲಿ ಚರ್ಚಿಸಿದ್ದಾಳೆ. ಅದರ ಆಡಿಯೋವನ್ನು ಗಾಯತ್ರಿ ಶೇರ್ ಮಾಡಿಕೊಂಡಿದ್ದಾಳೆ.
ಆಡಿಯೋದಲ್ಲಿ ಗಾಯತ್ರಿಯ ತಾಯಿ, ನಿನ್ನನ್ನು ಮದುವೆ ಮಾಡಿಕೊಂಡು ಹೋದವರು ನಿನಗೆ ಏನು ಕೊಟ್ಟಿದ್ದಾರೆ? ನೀನು ಅವರ ಹೆಂಡತಿ ಎನ್ನುವುದಕ್ಕೆ ಏನು ಸಾಕ್ಷಿ ಇದೆ ಎಂದು ಕೇಳಿದ್ದಾಳೆ. ಅಲ್ಲದೇ ನನಗೆ ನಿನ್ನ ಮರ್ಯಾದೆ ಹರಾಜು ಹಾಕಲು ಒತ್ತಡ ಹಾಕುತ್ತಿದ್ದಾರೆ ಎಂದು ಹೇಳಿದ್ದಾಳೆ.
ಈ ವೇಳೆ ಗಾಯತ್ರಿ ನನಗೆ ಬಂಗಾರದ ಒಡವೆ, ತಾಳಿಯನ್ನು ಮಾಡಿಸಿಕೊಟ್ಟಿದ್ದಾರೆ ಎಂದು ತಾಯಿ ಬಳಿ ಹೇಳಿಕೊಂಡಿದ್ದಾಳೆ. ಯಾರಾದ್ರೂ ಬರಲಿ ಏನಾದ್ರೂ ಹೇಳಲಿ, ನೀವು ಸುಮ್ಮನೆ ಇರಿ. ಮನೆ ಬಾಗಿಲು ಸಹ ತೆಗೆಯ ಬೇಡಿ ಎಂದು ತಾಯಿ ಬಳಿ ಗಾಯತ್ರಿ ಮನವಿ ಮಾಡಿದ್ದಾಳೆ.
ನಾನು ಸ್ವಇಚ್ಛೆಯಿಂದ ಮದುವೆ ಆಗಿದ್ದೇನೆ- ನನಗೆ ಜೀವ ಬೆದರಿಕೆ ಇದೆ -ಗಾಯಿತ್ರಿ
ನಾವಿಬ್ಬರು ಎರಡೂವರೆ ವರ್ಷ ಪ್ರೀತಿಸಿ ಸ್ವ ಇಚ್ಛೆಯಿಂದ ಮದುವೆ ಆಗಿದ್ದೇವೆ,ನನಗೆ ಜೀವ ಬೆದರಿಕೆ ಇದೆ, ರಕ್ಷಣೆ ಬೇಕು ಎಂದು ಯೂಟ್ಯೂಬರ್ ಮುಕುಳಪ್ಪನ ಪತ್ನಿ ಗಾಯತ್ರಿ ಹೇಳಿಕೆ ನೀಡಿದ್ದಾಳೆ.
ನಮ್ಮ ತಂದೆ ತಾಯಿ ಹೇಳಿಕೆ ಎಲ್ಲಾ ಸುಳ್ಳು

ಈಗ ಬರ್ತಿರೋ ಸುದ್ದಿ ಎಲ್ಲಾ ಸುಳ್ಳು ,ಅಪಹರಣ, ಜೀವಬೆದರಿಕೆ ಅಂತ ಸುಳ್ಳು ಸುದ್ದಿ ಹೇಳ್ತಿದ್ದಾರೆ ,ಇದಕ್ಕೆ ಈಗಾಗಲೇ ಪೊಲೀಸ್ ಠಾಣೆಗೆ ಬಂದು ಸ್ಪಷ್ಟನೆ ನೀಡಿದ್ದೇನೆ.ಪೊಲೀಸರು ಪದೆ ಪದೆ ಕರೆದು ಕಿರಿಕಿರಿ ಮಾಡ್ತಾ ಇದ್ದಾರೆ ,ನಾನು ಸ್ಪಷ್ಟವಾಗಿ ಹೇಳಿಕೆ ನೀಡಿದ್ದೇನೆ ,ಜೂನ್ 5ಕ್ಕೆ ಮದುವೆ ಆಗಿದ್ದೇವೆ ,ಮೂರು ತಿಂಗಳು ನಾವೆಲ್ಲಾ ಚನ್ನಾಗೆ ಇದ್ದೆವು,ಈಗ ಎರಡು ದಿನದಿಂದ ನಮ್ಮ ಪಾಲಕರನ್ನ ಯಾರು ಮೈಂಡ್ ವಾಶ್ ಮಾಡಿದ್ದಾರೋ ಗೊತ್ತಿಲ್ಲ ,ಕೆಲವೊಂದು ಆಡಿಯೋಗಳು ಎಡಿಟ್ ಮಾಡಿದ್ದು ಇರಬಹುದು ,ನಾನು ಈಗ ಗಂಡನ ಮನೆಗೆ ಹೋಗ್ತೇನೆ ನಾವು ಮುಂಡಗೋಡಕ್ಕೆ ಚಿತ್ರೀಕರಣಕ್ಕಾಗಿ ಹೋಗ್ತಿದ್ದರಿಂದ ಅಲ್ಲಿಯೇ ರಿಜಿಸ್ಟರ್ ಮದುವೆ ಆಗಿದ್ದೇವೆ ಎಂದಿದ್ದಾರೆ.