ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Uttara kannda| ಶಾಲೆಯ ನಿರ್ಲಕ್ಷ ಶೌಚಾಲಯಕ್ಕೆ ಹೋದ ಪುಟ್ಟ ಬಾಲಕಿಗೆ ವಿದ್ಯುತ್ ಶಾಕ್ ನಿಂದ ಮೃತ

Haliyala news 28 November 2024 :- ಮೂತ್ರ ವಿಸರ್ಜನೆಗೆ ಶೌಚಾಲಯಕ್ಕೆ (toilet )ತೆರಳಿದ ವಿದ್ಯಾರ್ಥಿನಿಗೆ (student) ತುಂಡಾದ ವಿದ್ಯುತ್ ವಯರ್ ತಾಗಿ ಸ್ಥಳದಲ್ಲೇ ಸಾವು ಕಂಡ ಘಟನೆ ಉತ್ತರಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಮುಂಡವಾಡ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಇಂದು ಮಧ್ಯಹ್ನ ನಡೆದಿದೆ.
03:54 PM Nov 28, 2024 IST | ಶುಭಸಾಗರ್

Haliyala news 28 November 2024 :- ಮೂತ್ರ ವಿಸರ್ಜನೆಗೆ ಶೌಚಾಲಯಕ್ಕೆ (toilet )ತೆರಳಿದ ವಿದ್ಯಾರ್ಥಿನಿಗೆ (student) ತುಂಡಾದ ವಿದ್ಯುತ್ ವಯರ್ ತಾಗಿ ಸ್ಥಳದಲ್ಲೇ ಸಾವು ಕಂಡ ಘಟನೆ ಉತ್ತರಕನ್ನಡ ಜಿಲ್ಲೆಯ ಹಳಿಯಾಳ(haliyala) ತಾಲೂಕಿನ ಮುಂಡವಾಡ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಇಂದು ಮಧ್ಯಹ್ನ ನಡೆದಿದೆ.

Advertisement

ಎರಡನೇ ತರಗತಿ ಓದುತ್ತಿರುವ
ಸಾನ್ವಿ ಬಸವರಾಜ ಗೌಳಿ (8) ಸ್ಥಳದಲ್ಲೇ ಸಾ* ಕಂಡ ಬಾಲಕಿಯಾಗಿದ್ದಾಳೆ.

ಶಾಲೆಯ ಆವರಣದ ಶೌಚಾಲಯದ ಬಳಿಯೇ ಬೋರ್ವೆಲ್ ತೆಗಿಸಲಾಗಿದ್ದು ಇದಕ್ಕೆ ಅನಧಿಕೃತ ವಿದ್ಯುತ್ ಸಂಪರ್ಕ ಪಡೆಯಲಾಗಿತ್ತು.

ಇದನ್ನೂ ಓದಿ:-Haliyala:ಪೊಲೀಸ್ ವಾಹನಕ್ಕೆ ಕಂಟೈನರ್ ಡಿಕ್ಕಿ ಇಬ್ಬರು ಸಿಬ್ಬಂದಿಗಳು ಗಂಭೀರ

Advertisement

ಆದರೇ ಮೇನ್ ಲೈನ್ ನಿಂದ ಪಡೆದಿದ್ದ ತಂತಿ ತುಂಡಾಗಿ ಶೌಚಾಲಯದಲ್ಲಿ ಬಿದ್ದಿದ್ದು ಬಾಲಕಿ(Girl) ಮೂತ್ರ ವಿಸರ್ಜನೆಗೆ ತೆರಳಿದ್ದಾಗ ವಿದ್ಯುತ್ ಶಾಕ್ ನಿಂದ ಸ್ಥಳದಲ್ಲೇ ಮೃತರಾಗಿದ್ದಾಳೆ.

ಶಾಲೆಯ ಮುಖ್ಯ ಶಿಕ್ಷಕರು ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದಿದ್ದಲ್ಲದೇ ವಿದ್ಯುತ್ ವಯರ್ ತುಂಡಾದರೂ ನಿರ್ಲಕ್ಷ ವಹಿಸಿದ್ದರಿಂದ ಏನೂ ಅರಿಯದ ಮಗುವೊಂದು ಸಾವನ್ನಪ್ಪಿದೆ.

ಘಟನಾ ಸ್ಥಳಕ್ಕೆ ತಹಶೀಲ್ದಾರ್ ಪ್ರವೀಣ ಹುಚ್ಚನ್ನವರ್ , ಸಿಪಿಐ ಜಯವಂತ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿ ಶವವನ್ನು ಹಳಿಯಾಳ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.

ಹಳಿಯಾಳ ಶಾಸಕ ಆರ್.ವಿ ದೇಶಪಾಂಡೆ ಸಹ ಆಸ್ಪತ್ರೆಗೆ ಭೇಟಿನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದು ತಪ್ಪಿತಸ್ತರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

Advertisement
Tags :
electric shockHaliyalalittle girlSchoolschool toiletUttara kannda
Advertisement
Next Article
Advertisement