For the best experience, open
https://m.kannadavani.news
on your mobile browser.
Advertisement

Bhatkal ಒಂದು ಕೋಟಿಗೂ ಹೆಚ್ಚು ಮೌಲ್ಯದ ವಜ್ರ ಸಾಗಾಟ-ವ್ಯಕ್ತಿ ಬಂಧನ

Mumbai :-1.18 ಕೋಟಿ ರೂ ಮೌಲ್ಯದ ವಿದೇಶಿ ಕರೆನ್ಸಿ ( foreign currency) ಜೊತೆ ಒಂದು ಕೋಟಿಗೂ ಹೆಚ್ಚು ಮೌಲ್ಯದ ವಜ್ರಗಳನ್ನು ಅಕ್ರಮವಾಗಿ ವಿದೇಶಕ್ಕೆ ಸಾಗಿಸುತ್ತಿದ್ದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ವ್ಯಕ್ತಿಯನ್ನು ಮುಂಬೈ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ
11:18 PM Jan 27, 2025 IST | ಶುಭಸಾಗರ್
bhatkal ಒಂದು ಕೋಟಿಗೂ ಹೆಚ್ಚು ಮೌಲ್ಯದ ವಜ್ರ ಸಾಗಾಟ ವ್ಯಕ್ತಿ ಬಂಧನ
ಪ್ರಕೃತಿ ಮೆಡಿಕಲ್ ,ಕಾರವಾರ.

Mumbai :-1.18 ಕೋಟಿ ರೂ ಮೌಲ್ಯದ ವಿದೇಶಿ ಕರೆನ್ಸಿ ( foreign currency) ಜೊತೆ ಒಂದು ಕೋಟಿಗೂ ಹೆಚ್ಚು ಮೌಲ್ಯದ ವಜ್ರಗಳನ್ನು ಅಕ್ರಮವಾಗಿ ವಿದೇಶಕ್ಕೆ ಸಾಗಿಸುತ್ತಿದ್ದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ(bhatkal) ವ್ಯಕ್ತಿಯನ್ನು ಮುಂಬೈ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.

Advertisement

ಭಟ್ಕಳದ ಎ ಆರ್ ಖತೀಬ್ (45) ಬಂಧಿತ ವ್ಯಕ್ತಿಯಾಗಿದ್ದು , ಮುಂಬೈ ನಿಂದ ವಿಮಾನದ ಮೂಲಕ ಮಸ್ಕತ್‌ಗೆ ವಜ್ರ ಹಾಗೂ ವಿದೇಶಿ ಕರೆನ್ಸಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದನು.

ಇದನ್ನೂ ಓದಿ:-Kumta ಬಿಜೆಪಿ ಮಹಿಳಾ ಮೋರ್ಚ ಅಧ್ಯಕ್ಷೆ ಜಯಪ್ರಕಾಶ್ ಶೇಟ್ ನಿಂದ ವಂಚನೆ -ಕೋರ್ಟ ನಿಂದ ಜಾಮೀನು ರಹಿತ ಬಂಧನ ವಾರೆಂಟ್ ಜಾರಿ.

ಮುಂಬೈ (Mumbai) ಏರ್‌ಪೋರ್ಟ್ ಕಸ್ಟಮ್ಸ್ನ ಏರ್ ಇಂಟೆಲಿಜೆನ್ಸ್ ಯುನಿಟ್ ಸಿಬ್ಬಂದಿಗಳು ಈತನನ್ನು ವಿಚಾರಣೆಗೆ ಒಳಪಡಿಸಿದಾಗ ಅಕ್ರಮ ಸಾಗಾಟ ಬೆಳಕಿಗೆ ಬಂದಿದೆ.

ಮುಂಬೈ ನಿಂದ ಮಸ್ಕತ್ ಗೆ ತೆರಳುತಿದ್ದ ಈತ ವಿಮಾನ ನಿಲ್ದಾಣದ ತಪಾಸಣಾ ಕೇಂದ್ರದಲ್ಲಿ ತಪಾಸಣೆಗೆ ಒಳಪಡಲು ನಿರಾಕರಿಸಿದಾಗ ಅಧಿಕಾರಿಗಳಿಗೆ ಆತನ ಮೇಲೆ ಅನುಮಾನ ವ್ಯಕ್ತವಾಗಿದೆ.

ಆಗ ಆತನ ಬ್ಯಾಗನ್ನು ವಶಕ್ಕೆಪಡೆದು ತಪಾಸಣೆ ನಡೆಸಿದ್ದು, ಅದರಲ್ಲಿ ಸೌದಿ ಅರೇಬಿಯನ್ 59,500 ರಿಯಾನ್ ಭಾರತದ ಅಂದಾಜು ಮೌಲ್ಯ 13,32,800 ರೂ ಹಣ ದೊರೆಯುವ ಜೊತೆಗೆ 1,05,38,700 ರೂ ಮೌಲ್ಯದ ವಜ್ರಗಳು ದೊರೆತಿದೆ.

ಇದನ್ನೂ ಓದಿ:-Bhatkal ಮನೆಯಮೇಲೆ ದಾಳಿ 50 ಸಾವಿರ ಮೌಲ್ಯದ ಗೋಮಾಂಸ ವಶಕ್ಕೆ,ಆರೋಪಿಗಳ ಬಂಧನ

ತಕ್ಷಣ ಆತನನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದು ಇನ್ನೂ ಹೆಚ್ಚಿನ ಮಾಹಿತಿ ಹೊರಬರಬೇಕಿದೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ