Karwar | ಕಾರವಾರದಲ್ಲಿ ಜೈಲು ಸಿಬ್ಬಂದಿ ಮೇಲೆ ಕೈದಿಗಳ ಹಲ್ಲೆ | ಮಾದಕ ವಸ್ತುಗಾಗಿ ಬೇಡಿಕೆ
Karwar District Prison violence: Two inmates assaulted the jailer and staff after narcotic substances were strictly banned inside the jail. Jailer Kallappa and two guards were seriously injured and admitted to Karwar Hospital. A case has been registered at Karwar Town Police Station.
12:18 PM Dec 06, 2025 IST | ಶುಭಸಾಗರ್
Karwar | ಕಾರವಾರದಲ್ಲಿ ಜೈಲು ಸಿಬ್ಬಂದಿ ಮೇಲೆ ಕೈದಿಗಳ ಹಲ್ಲೆ | ಮಾದಕ ವಸ್ತುಗಾಗಿ ಬೇಡಿಕೆ.
ಕಾರವಾರ :- ಮಾದಕ ವಸ್ತುಗಳ ಜೈಲಿನಲ್ಲಿ ಬಿಡದೆ ಬೀಗ ಜಡಿದ ಮಾಡಿದ ಹಿನ್ನೆಲೆಯಲ್ಲಿ ಜೈಲರ್ ಸೇರಿದಂತೆ ಮೂವರು ಸಿಬ್ಬಂದಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಕಾರವಾರ(karwar) ಜಿಲ್ಲಾ ಕಾರಾಗೃಹದಲ್ಲಿ ನಡೆದಿದೆ. ಮಂಗಳೂರು ಮೂಲದ ಮೊಹ್ಮದ್ ಅಬ್ದುಲ್ ಫಯಾನ್, ಕೌಶಿಕ ನಿಹಾಲ್ ಹಲ್ಲೆ ಮಾಡಿದವರಾಗಿದ್ದು
Advertisement
ಜೈಲರ ಕಲ್ಲಪ್ಪ ಗಸ್ತಿ ಸೇರಿದಂತೆ ಮೂವರು ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ.

ಜೈಲರ್ ಹಾಗೂ ಸಿಬ್ಬಂದಿಗಳು ಕಾರವಾರ ಆಸ್ಪತ್ರೆಗೆ ದಾಖಲಾಗಿದ್ದು ,ಚಿಕಿತ್ಸೆ ಪಡೆಯುತಿದ್ದಾರೆ.
ಡಕಾಯತಿ ಸೇರಿದಂತೆ 12ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಆರೋಪಿಗಳಾಗಿರುವ ರೌಡಿಗಳನ್ನ ಮಂಗಳೂರು ಜೈಲಿನಲ್ಲಿ ಹೆಚ್ಚುವರಿಯಾಗಿದ್ದರಿಂದ ಕಾರವಾರ ಕ್ಕೆ ಶಿಫ್ಟ್ ಮಾಡಲಾಗಿತ್ತು.
ಜೈಲಿನಲ್ಲಿ ಕಳೆದ ಕೆಲ ದಿನಗಳಿಂದ ಮಾದಕ ಪದಾರ್ಥಗಳು ಸಂಪೂರ್ಣ ನಿರ್ಬಂಧ ಮಾಡಿದ ಹಿನ್ನೆಲೆಯಲ್ಲಿ ಜೈಲರ್ ಜೊತೆ ಗಲಾಟೆ ಮಾಡಿದ್ದರು. ಮಾದಕ ವಸ್ತು ನೀಡುವಂತೆ ಒತ್ತಾಯ ಮಾಡಿದ್ದರೂ ಒಪ್ಪದ ಹಿನ್ನೆಲೆ ಮಾರಣಾಂತಿಕ ಹಲ್ಲೆ ನಡೆದಿದ್ದು ಕಾರವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement